ನನ್ನೆದೆಯಲಿ ಬಿತ್ತಿದಿರಿ ಎರೆಡಕ್ಷರ ಗುರುವೇ ನಿಮ್ಮಿಂದಲೇ ಸಂಸ್ಕಾರ ನೀವಿದ್ದರೆ ನಾನೇರುವೆ ಬಾನೆತ್ತರ ಅಳಿಸಿದಿರಿ ನನ್ನಲ್ಲಿನ ಅಹಂಕಾರ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಸ್ವಾಗತ. ಪ್ರತಿ ದಿನ ಒಂದೊಂದು ಪತ್ರ ಬರಿಯೋಣ. ಪ್ರೀತಿಯ ದುಃಖ, ಪ್ರತಿಯೊಬ್ರಿಗೂ ಮೊದಲು ಪರಿಚಯ ಆಗೋದೆ ನೀನು, ಹುಟ್ದಾಗ ಎಲ್ರಿಗೂ ನೋವು ಕೊಟ್ಟು ಅಳುಸ್ತೀಯ. ಆಮೇಲೆ ಮಾಯ ಆಗ್ತಿಯ. ಅವಾಗ ಅವಾಗ ಬಂದ್ಹೋಗ್ತಿಯ. ಒಮ್ಮೊಮ್ಮೆ ಧೀರ್ಘಕಾಲ ಬಂದ್ರೆ, ಕೆಲವೊಂದ್ ಸಲ ಹಾಗೆ ಇಣುಕಿ ನೋಡಿ ಹೋಗ್ತೀಯ. ನೀನ್ ಬಂದಾಗ ಸಿಕ್ಕಾಪಟ್ಟೆ ಸಂಕಟ ಆಗುತ್ತೆ, ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಒಟ್ನಲ್ಲಿ ನೀನಿಲ್ದೆ ಈ ಬದುಕಿಗೊಂದು ಅರ್ಥ ಸಿಗಲ್ಲ! ಹಾಗಂತ ಯಾವಾಗ್ಲೂ ಬರ್ಬೇಡ, ದೂರಾನೇ ಇರು. #ದುಃಖ #yqjogi #yqletter #collab #collabwithjogi #YoLeWriMo #YourQuoteAndMine Collaborating with YourQuote Jogi