ಜಗವಿಮೋಚಕ - ೧೫೨ ============================ ಹುಲುಮನುಜರಗಳ್ನಾವ್ ವಿಧಿಯ ಶಂಕಿಪುದೇ ಭುವನಕ್ಕಿಂತ ಪಿರಿದೊಂದುದುವೆ ಅದ್ಭುತವೂ ಬೆರಗಾಗಿಪುದು ಕುಡಿನೋಟದ ಮಂದಸ್ಮಿತವೂ ಮೈಮರೆಸಿ ಮೌನದಿ ಅಂತರಂಗದಿ ಅಲೆಗಳೆಳಿಸಿ ಚಿತ್ತದಿ ಚಿತ್ರವಿಚಿತ್ರ ಆಸೆಗಳ ದುಂಬಿಗಳ್ತುಂಬಿ ಮೆರೆಸುವನವನು ಮಾಯೆಯ ಮೋಡಿಯಲಿ ಜುಟ್ಟನ್ನಿಡಿದು ಯಮನಾಸ್ಥಾನಕ್ಕೆ ಎಳೆದೊಯ್ಯಲು ಮನದ ಹಾದಿ ತಪ್ಪಿಸಿ ಉಸುರಿಸುವನು ಸುಳ್ನುಡಿಗಳ ಕರ್ಮದ ಕಣ್ತೆರೆಯೇ ಧರ್ಮವೂ ಸಡಿಲಿಪುದೋ ಕರುಣೆಯಿಂದಲೇ ಕಾದವನವನು ತಾಳುವನೇನೂ ಕರಿಹಗ್ಗವೂ ಕೊರಳ್ ಬಿರಿವಾಗ ನಾಟಕದಂತ್ಯವೂ ಹುಲುಮನುಜರಗಳ್ನಾವ್ ವಿಧಿಯ ಶಂಕಿಪುದೇ.. ಜಗವಿಮೋಚಕ - ೧೫೨ #ಜಗವಿಮೋಚಕ #yqdvkrd_dots #yqjogi #ಹುಲುಮನುಜ #ವಿಧಿ #ಕನ್ನಡ #yqgoogle #yqmandya