ಗಂಡ ಹೆಂಡತಿ ಬಾಳಿನಾಗ ದುಡುಕಿದರ ಏನೈತಿ..?? ಮುಂದ ಇಬ್ಬರ ಬಾಳು ನರಕೈತಿ.. ಕಳಕೊಂಡ ಮ್ಯಾಲ್ ಮತ್ ಬಯಸಿದರೇನೈತಿ.. ಅರಿತು ಬಾಳಿದ್ರಾ ಜೀವನ ಬಾಳ್ ಚೋಲೋ ಐತಿ.. ಇರೋದು ಮೂರು ದಿನ,ಮಾಡ್ಬ್ಯಾಡ ಬಾಳ್ ಚಿಂತಿ.. ಎಲ್ಲರೂ ಒಂದಿನ ಹೋಗೋದಂತೂ ಖರೇ ಐತಿ.. ತಿಳಕೊಂಡು ನಡಿಲೇ ( ಗಂಡು) (ಹೆಣ್ಣು) ತಿಳಿಗೇಡಿ ಬದುಕಿನ ದಾರಿ ಬಾಳ್ ಮುಂದೈತಿ.. ಹೊಟ್ಟಿ ಬಾಳ್ ಹಸದೈತಿ.. ಬಾಯಾಗ ಬಿಸಿ ತುಪ್ಪ, ಉಗುಳಕು ಆಗುವಲ್ಲದು, ನುಂಗಾಕು ಆಗುವಲ್ಲದು ಹಸಿದ ಹೊಟ್ಟಿ ಉರಿತೈತಿ.. ಹೇಳಾಕ ಆಗದ ಮನಸು ಒಳಗ ಚೀರತೈತಿ.. ಅರ್ಥ ಆಗದ ಮುರುಕು ಮನಸು ಕುಂತು ನಗತೈತಿ.. ಅವ ನಡಿಸಿದಂಗ ನಡೀ, ಮುಂದ್ ದಾರಿ ಸಿಗತೈತಿ.. ಅವರವರು ಮಾಡಿದ ಕರ್ಮದ ಫಲ ಅವರವರಿಗಿ ಕಾದೈತಿ.. ಮಾಡಬ್ಯಾಡ ಬಾಳ್ ಚಿಂತಿ..ನಾ ಹೇಳಿದ್ದು ಕೇಳು..ಮೈಲಾರಲಿಂಗ ಅದನಾ..ನಡಿ ಎದ್ದು ಮುಂದ್ ದಾರಿ ಬಾಳ್ ಐತಿ..👍 ನೀವೇನಂತಿರಪ್ಪ ..🤔 #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ