ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು , ನೊಂದಿರುವೆನೆಂದು ತಿಳಿದಿದ್ದರು....! ತಿರುಗಿ ನೋಡದೆ ಹೊರಟು ಹೋದವಳು. ತಿಳಿದಾಗಲೆಲ್ಲ ಫೋನ್ ಮಾಡುವಳು, ಜೊತೆಗೆ ನೀನಿರದಿದ್ದರೆ ಏನಂತೆ ....! ನಿನ್ನಯ ನೆನಪುಗಳೊಂದಿಗೆ ಬದುಕಿರುವೆ ಎನ್ನುವಳು . ನೋಡುವ ಬಯಕೆಯು ಇದೆಯಂತೆ, ಆದರೂ ಕೂಡ...! ಭಯಕ್ಕೆ ಬಯಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವಂತೆ . ಕಾರಣವೇ ಇಲ್ಲದೆ ಅಳುವವಳಂತೆ ಅಳುವುದಕ್ಕೆ ಕಾರಣವೆ ನಾನಂತೆ...! ನಗುವುದನ್ನು ಮರೆತಿದ್ದಳಂತೆ, ನಕ್ಕಾಗಲೆಲ್ಲ ನಾನೇ ನೆನಪಾಗುವೆ ಅಂತೆ. ಮನೆಯಲ್ಲಿ ನನ್ನೊಂದಿಗೆ ಇರದಿದ್ದರೇನಂತೆ, ಮನಸಲ್ಲಿ ನೀನೇ ಇರುವೆ ....! ಎಂದೂ ತನ್ನಷ್ಟಕ್ಕೆ ತಾನು ಹೆಮ್ಮೆಪಡುವವಳಂತೆ. ನೆನಪಾಗುವುದಕ್ಕೆ ಕಾರಣವೇ ಬೇಕಿಲ್ಲವಂತೆ, ನೆನಪಾದಾಗಲ್ಲೆಲ್ಲಾ ನಾನೇ ನೆಪವಾಗಿದ್ದೇನೆಂತೆ. ✍️ ನಾಗರಾಜ್ ಪೂಜಾರ್ #nagarajpoojar #yqjogi_kannada #ನೆನಪು #ಕಾರಣ #love #life ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು ,