Nojoto: Largest Storytelling Platform

🦚🦚🦚🦚🦚🦚🦚 *ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ

🦚🦚🦚🦚🦚🦚🦚

*ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಧಾರವಾಡ(ರಿ)*
ವಿಶೇಷ ಕಿರು ಕಥಾ ಸ್ಪರ್ಧೆಗಾಗಿ
ಶಿರ್ಷಿಕೆ*- *ವಿಧಿಯ ಅಟ್ಟಹಾಸ* 

        *"ಇವತ್ಯಾಕ ಇಷ್ಟ ಜೋರ ಮಳಿ ಬರಾಕತೈತಿ? ಯಾವಾಗ ನಿಂದ್ರತೈತೊ ಏನೊ? ವಾತಾವರಣಾ ಇಷ್ಟ ತಂಪಿದ್ರೂ ಹೊಟ್ಯಾಗ ಮಾತ್ರಾ ಒಂತರಾ ಸಂಕ್ಟಾ ಅನಸಾಕತೈತಿ, ಮನಸನ್ಯಾಗ ಕಸಿವಿಸಿ ಆಗಾಕತೈತಿ, ಇವತ್ತೆನ ಕಾದೆತೋ ಏನೊ.? ಆ ದೇವ್ರಿಗೆ ನಮ್ಮಂತ ಬಡವರ ಮ್ಯಾಲೆ ಕರುಣಾನ ಇಲ್ಲಾ ಅನಸ್ತದ, ಈ ಸೋರು ಮನ್ಯಾಗ ಇನ್ನ ಎಷ್ಟ ದಿನಾ ಜೀವನಾ ನಡಸ್ಬೆಕೊ? "* ಎಂದು ಗುನುಗುನುತ್ತ ಮಲ್ಲಿ ಮಳೆಗೆ ಸೋರುತ್ತಿದ್ದ ಮಳೆ ಹನಿಗಳ ಕೆಳಗೆ ಪಾತ್ರೆಗಳನ್ನು ಜೋಡಿಸಿಡುತ್ತಿದ್ದಳು.
          ಶ್ರೀದೇವಿ ಅನ್ನೊ ಮೂರು ವರ್ಷದ ಒಬ್ಬಳೆ ಮುದ್ದಾದ ಹೆಣ್ಣು ಮಗಳು ಮಲ್ಲಿಗೆ. ಗಂಡ ಶ್ರೀಕಾಂತ ಉಂಡಾಡಿ ಗುಂಡ.ದುಡಿಮೆ ಗೊತ್ತಿಲ್ಲದವನು.ಜೊತೆಗೆ ಕುಡಿಯೊ ಚಟಾ ಬೇರೆ.ತೀರಾ ಬಡತನದ ಒಂದು ಹಳ್ಳಿ ಕುಟುಂಬದವರು. ಹಳ್ಳಿಯಲ್ಲಿದ್ರೆ ಜೀವನ ಕಷ್ಟವೆಂದು ಅರಿತ ಮಲ್ಲಿ ಗಂಡ ಮಗಳ ಸಮೇತ ಪಕ್ಕದ ಪಟ್ಟಣ ಸೇರಿದ್ದಳು. ಪಟ್ಟಣದಲ್ಲಿ ಎಲ್ಲಾದರೂ ಕಟ್ಟಡಗಳ ಕಾಮಗಾರಿ ನಡೆದಿದ್ದರೆ ಅಲ್ಲೆ ಕಾವಲು ಕಾಯುತ್ತ ಬಂದ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದರು. ಅಕ್ಕ ಪಕ್ಕದ ಮನೆಗಳಲ್ಲಿ ಪಾತ್ರೆ ತಿಕ್ಕಿ ಮಲ್ಲಿ ಸ್ವಲ್ಪ ಹಣ ಮಾಡಿಕೊಂಡಿದ್ದಳು.
           *" ಈ ಧೋ ಅಂತ ಸುರಿಯು ಮಳ್ಯಾಗ ಅದೆಲ್ಲೆ ಕುಡದ ಬಿದ್ದಾನೊ ಏನೊ? ಹೆಂಡತಿ ಮಕ್ಕಳ ಖಬರ ಇಲ್ಲಾ ಬ್ಯಾವರ್ಸಿಗೆ."* ಎಂದು ಕುಡುಕ ಗಂಡನ್ನು ಬೈಯ್ಯುತ್ತ, ಎರಡೇ ಕೋಣೆಯ ಆ ಚಿಕ್ಕ ಮನೆಯ ಮೂಲೆಯಲ್ಲಿ ಮುದುರಿ ಮಲಗಿದ್ದ ಪಾತ್ರೆಯೊಂದನ್ನು ಎತ್ತಿಕೊಂಡು ಅಡುಗೆ ಮಾಡುತ್ತಾ ಬಾಳ ಬವಣೆಯ ಭಾವುಕದಲ್ಲಿ ಕಣ್ಣಿರೊರೆಸಿಕೊಳ್ಳುತ್ತಿರುವಾಗ, ಗಂಡ ಶ್ರೀಕಾಂತನಾಡಿದ ಭರವಸೆಯ ಮಾತುಗಳು ನೆನಪಿಗೆ ಬಂದವು. *"ಲೇ ಮಲ್ಲಿ ನಿನ್ನ ಸಲುವಾಗಿ ಅಲ್ಲಂದ್ರು ನನ್ನ ಮಗಳ ಸಲುವಾಗಾದ್ರು ಒಂದ ಮನಿ ಕಟ್ಟತಿನಿ, ಆ ಮನಿಗೆ ಶ್ರೀದೇವಿ ನಿಲಯ ಅಂತಾ ಹೆಸರಿಡ್ತಿನಿ. ನೋಡ್ತಿರ ಆ ಮನ್ಯಾಗ ನನ್ನ ಮಗಳನ್ನ ರಾಣಿಯಂಗ ಸಾಕ್ತಿನಿ"* ಅಂದಿದ್ದನು.
         ಕ್ಷಣ ಕಾಲದ ನಂತರ ಮತ್ತೆ ವಾಸ್ತವಕ್ಕೆ ಬಂದ ಮಲ್ಲಿ, *"ಅವ್ವಾ ಶ್ರೀದೇವಿ, ಬಿಸಿ ಬಿಸಿ ಅನ್ನಾ ಮಾಡಿನಿ, ನಿಂಗ ಉಣಸ್ತಿನಿ ಬಾರವ್ವಾ".*  ಎಂದು ಕೂಗುತ್ತ ಹಿಂದಿರುಗಿ ನೋಡಿದರೆ ಮಗಳು ಅಲ್ಲಿ ಕಾಣಲಿಲ್ಲ. ತೆರೆದ ಬಾಗಿಲು ತೆರೆದಂತೆ ಇತ್ತು. *"ಯವ್ವಾ ಈ ಮಳ್ಯಾಗ ಎಲ್ಲೊತ ನನ್ನ ಕೂಸ, ಇಲ್ಲೆ ಕುಂತ ಆಡಾಕತ್ತಿತ್ತಲ್ಲಾ?"* ಎಂದು ಹೋರಹೋಗಿ ಅಕ್ಕ ಪಕ್ಕ ಎಲ್ಲರನ್ನೂ ವಿಚಾರಿಸಿದಳು. ಯಾರಿಗೆ ಕೇಳಿದರೂ ಗೊತ್ತಿಲ್ಲ ಎನ್ನುತ್ತಿದ್ದರು. ಇವಳ ಬೊಂಬಾಟ, ಕೂಗಾಟ,ಎದೆ ಬಡೆದುಕೊಳ್ಳುತ್ತ ಮಾಡಿದ ಆರ್ಭಟಕ್ಕೆ ಜನರೆಲ್ಲ ಸೇರಿದರು. ಅಲ್ಲಿಗೆ ಬಂದ ಶ್ರೀಕಾಂತ ಮಗಳು ಕಾಣುತ್ತಿಲ್ಲವೆಂದು ತಿಳಿದು ಗಾಭರಿಗೊಂಡ. ಕೋಪದಲ್ಲಿ ಮಲ್ಲಿಗೆ ಬರೆ ಬರುವಂತೆ ಹೊಡೆದನು. ಮಗಳನ್ನು ಹುಡುಕಲು ಓಡಿ ಹೋದನು.
   ದೊಡ್ಡದಾದ ನಗರದಲ್ಲಿ ಶ್ರೀದೇವಿಯನ್ನು ಹುಡುಕುವುದೆ ಸವಾಲಾಗಿತ್ತು.ಅದಲ್ಲದೆ ಅವಳದ್ದು ಸಣ್ಣ ವಯಸ್ಸು ಬೇರೆ ನಗರದಲ್ಲಿ ಮಕ್ಕಳ ಕಳ್ಳರ ವದಂತಿ ಬೇರೆ ಹಬ್ಬಿತ್ತು. ಹುಡುಕಾಡಿ ಸಾಕದ ಇಬ್ಬರೂ ಮತ್ತೆ ಮನೆಗೆ ಬಂದು ಮುದ್ದಾದ ಮಗಳನ್ನು ಅವಳ ಪೆದ್ದು ಮಾತುಗಳನ್ನು,ತಾವು ನಿತ್ಯ ಕಾಣುತ್ತಿದ್ದ ಹುಸಿ ಕನಸನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತರು,ಬೇಗ ಮಗಳು ಸಿಗಲಿ ಎಂದು ಮನೆದೇವರಾದ ತುಳಸಿಗೇರಿ ಹನುಮಪ್ಪನಲ್ಲಿ ಮೊರೆಯಿಟ್ಟರು. *ಯಾವ ದೇವರಿಗೂ ಸಹ ಇವರ ಕಣ್ಣಿರಿನ ಮೊರೆ ಕೇಳಲಿಲ್ಲ.* ಅಂದು ಊಟವೇ ಹೋಗಲಿಲ್ಲ..ತುಸು ಸಪ್ಪಳವಾದರೂ ಮಗಳು ಬಂದಳೆಂದು ಹಲಬುವ ಅವರ ಪಾಡು ದಯನೀಯವಾಗಿತ್ತು.ಇದೆ ನೋವಿನಲ್ಲಿ ಎರಡು ದಿನ ಕಣ್ಣಿರಲ್ಲೆ ಕಳೆದವು. 
ಮೂರನೆಯ ದಿವಸ ಅಂದು ಶ್ರೀ ದೇವಿ ಉಟ್ಟಿದ್ದ ಬಟ್ಟೆಯ ತುಂಡೊಂದನ್ನು ಹಿಡಿದುಕೊಂಡು ಅವರ ಮನೆಯ ನಾಯಿ ಗುಂಡ್ಯಾ ಅವರ ಮುಂದೆ ಬಂತು ನಿಂತು ಬೊಗಳುತ್ತಿತ್ತು ಅದರ ಕಣ್ಣಲ್ಲಿಯೂ ಭಾವಾತಿರೇಕದ ಕಂಬನಿ ಕಾಣುತ್ತಿದ್ದವು. ಅದನ್ನು ಕಂಡು ಇಬ್ಬರು ಮಗಳು ಇನ್ನಿಲ್ಲವೆಂದು ಬೋರಾಡಿದರು.ಆದರೆ ಮಗಳು ಎನಾದಳೆಂಬುದು ಮಾತ್ರ ತಿಳಿಯಲಿಲ್ಲ. ನಾಯಿ ಶ್ರೀಕಾಂತನ ದೋತರ ಹಿಡಿದು ಎಳೆಯುತ್ತಾ ಅವರನ್ನು ಬಟ್ಟೆ ಸಿಕ್ಕ ಜಾಗಕ್ಕೆ ಕರೆದೊಯ್ಯಿತು.
      ನಗರದ ಹೊರಗೆ ಒಂದು ವಿಶಾಲ ಅರಳಿ ಮರದಡಿಯಲ್ಲಿ ರಣಭೀಕರ ದೃಶ್ಯ ಕಂಡಿತು.ಮಗಳು ಶ್ರೀದೇವಿಯ ರುಂಡ ಮುಂಡ ಬೇರೆ ಬೇರೆಯಾಗಿ ಶವ ಬಿದ್ದಿತ್ತು.ಬಿಡಾಡಿ ನಾಯಿಗಳ ಉಪಟಳಕ್ಕೆ ಸಿಕ್ಕು ದೇಹ ಚಿದ್ರವಾಗಿತ್ತು. *ಮೊದಮೊದಲು ನಾಯಿ ಕಡಿತದಿಂದ ಮಗಳು ಸತ್ತಳೆಂದು ಭಾವಿಸಿದ್ದರು.ಆದರೆ ವಿಧಿಯೇ ಬೇರೆ ಇತ್ತು. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಶ್ರೀದೇವಿಯನ್ನು ಅಪಹರಿಸಿ ನಿಧಿಗಾಗಿ ಕೊಲೆಗಯ್ಯಲಾಗಿತ್ತು.ವಿಧಿ ಅಟ್ಟಹಾಸ ಮೆರೆದಿತ್ತು.* ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳಿಗೆ ವಾಮಾಚಾರ ಪ್ರಕ್ರಿಯೇಯಲ್ಲಿ ತುಂಬಾ ಬೆಲೆ ಇದೆಯೆಂಬುದನ್ನು ಮೊನ್ನೆಯಷ್ಟೆ ಒಬ್ಬ ಅಪರಿಚಿತ ಸಾದು ಹೇಳಿದ್ದ.ತನ್ನ ಮಗಳು ಸಹ ಹುಟ್ಟಿದ್ದನ್ನು ಕುಡಿತದ ಅಮಲಲ್ಲಿ ಬಾಯ್ಬಿಟ್ಟಿದ್ದ ಶ್ರೀಕಾಂತ ತನ್ನ ಮಗಳ ಈ ಸ್ಥಿತಿಗೆ ತಾನೇ ಕಾರಣವೆಂದು ಮನದಲ್ಲಿ ನೊಂದುಕೊಂಡ,ಕಾಲ ಮಿಂಚಿತ್ತು. ಅಲ್ಲಿ ಹೋಮಕುಂಡ, ಚೆಲ್ಲಾಡಿದ ನೆತ್ತರಿನ ಗುರುತು ಎಲ್ಲ ನೋಡಿದ ದಂಪತಿಗಳು ದೇವರಿಗೆ ಹಿಡಿಶಾಪ ಹಾಕುತ್ತಾ ಗೋಳಾಡುತ್ತಿದ್ದರು ಮಲ್ಲಿಯೂ *ದೇವರಿಗೆ ನಮ್ಮ ಬದುಕೇ ಬೇಕಿತ್ತಾ ಆಟ ವಾಡುವುದಕ್ಕೆ* ಅಂತ ಬಿಕ್ಕಿ ಅಳುತ್ತಿದ್ದಳು. ರಣಘೋರವಾದ ವಿಧಿಗೆ ಅವರ ಕನಸುಗಳು ಕಣ್ಣಿರಿನೊಂದಿಗೆ ಒಂದಾಗಿ ಜಾರಿದ್ದವು.

 *ಧನ್ಯವಾದಗಳು* 
🙏🏻🙏🏻🙏🏻🙏🏻🙏🏻🙏🏻🙏🏻

ಲಕುಮಿಕಂದ ಮುಕುಂದ
ಸಾ-ಮುದೇನೂರ ತಾ-ರಾಮದುರ್ಗ ಜಿ-ಬೆಳಗಾವಿ
ಪಿನ್ಕೊಡ್-೫೯೧೨೩
ಕರೆವಾಣಿ-೯೫೯೧೩೮೨೪೬೫ #ಕಿರುಗತೆ #ಲಕುಮಿಕಂದ #ವಿಧಿಯ ಅಟ್ಟಹಾಸ

#HappyDaughtersDay2020