Nojoto: Largest Storytelling Platform

ಜಲಪಾತದ ಅಡಿಯಲ್ಲಿ😍 ಕಣಿವೆಯ ಇಳಿಜಾರಿನಲಿ ನಿನ ಬಳುಕಾಟ ನ

ಜಲಪಾತದ ಅಡಿಯಲ್ಲಿ😍
 
ಕಣಿವೆಯ ಇಳಿಜಾರಿನಲಿ ನಿನ ಬಳುಕಾಟ ನೋಡಲು
ಸಾಲಾಗಿ ನಿಂತಿವೆ ಮೇಘಧೂತರ ಹಿಂಡು
ಕಾರ್ಮೋಡ ಕವಿದು ವರುಣ ಬಂದಾದರೂ 
ಹೆಜ್ಜೆಹಾಕುತಿಲ್ಲ ಅವು ನಿನ ವೈಯಾರವ ಕಂಡು (೧)

ಬಾನಿಂದ ಧರೆಗಿಳಿದು ನೀ ಧುಮ್ಮಿಕ್ಕಿ ಬರುತಿರೆ
ಏರಿಳಿತ ಅನುಭವಿಸುವುದೆನ್ನ ಉಸಿರಾಟ
ಝುಳುಝುಳು ಶಬ್ದವೆ ಶೖಂಗಾರ ಗೀತೆಯಾಗಿರೆ 
ಕೇಳುವರಾರು ನನ್ನ ತೊಳಲಾಟ                     (೨)

ನಿತ್ಯ ನಿನ ಸ್ಪರ್ಶಿಸುವ ಆ ಹಾಸುಗಲ್ಲು
ಪೋಣಿಸುತಿದೆ ಅಂದದ ಹನಿಮುತ್ತು
ಇಬ್ಬನಿಯ ಮೂಲಕ ನೀ ತಂಗಾಳಿಯ ತರುತಿರಲು
ಸೊಗಸಾದ ಸಂಜೆಗೆ ಈ ಕಣ್ಣು ಕಾದಿತ್ತು            (೩)

                 ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #nature #falls #feelings
ಜಲಪಾತದ ಅಡಿಯಲ್ಲಿ😍
 
ಕಣಿವೆಯ ಇಳಿಜಾರಿನಲಿ ನಿನ ಬಳುಕಾಟ ನೋಡಲು
ಸಾಲಾಗಿ ನಿಂತಿವೆ ಮೇಘಧೂತರ ಹಿಂಡು
ಕಾರ್ಮೋಡ ಕವಿದು ವರುಣ ಬಂದಾದರೂ 
ಹೆಜ್ಜೆಹಾಕುತಿಲ್ಲ ಅವು ನಿನ ವೈಯಾರವ ಕಂಡು (೧)

ಬಾನಿಂದ ಧರೆಗಿಳಿದು ನೀ ಧುಮ್ಮಿಕ್ಕಿ ಬರುತಿರೆ
ಏರಿಳಿತ ಅನುಭವಿಸುವುದೆನ್ನ ಉಸಿರಾಟ
ಝುಳುಝುಳು ಶಬ್ದವೆ ಶೖಂಗಾರ ಗೀತೆಯಾಗಿರೆ 
ಕೇಳುವರಾರು ನನ್ನ ತೊಳಲಾಟ                     (೨)

ನಿತ್ಯ ನಿನ ಸ್ಪರ್ಶಿಸುವ ಆ ಹಾಸುಗಲ್ಲು
ಪೋಣಿಸುತಿದೆ ಅಂದದ ಹನಿಮುತ್ತು
ಇಬ್ಬನಿಯ ಮೂಲಕ ನೀ ತಂಗಾಳಿಯ ತರುತಿರಲು
ಸೊಗಸಾದ ಸಂಜೆಗೆ ಈ ಕಣ್ಣು ಕಾದಿತ್ತು            (೩)

                 ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #nature #falls #feelings

#ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #Nature #Falls #feelings