Nojoto: Largest Storytelling Platform

*ಕ್ರಾಂತಿ ರತ್ನ ಕಿಡಿಗಳು* ವೈರಿಗಳ ಎದೆ ನಡುಗಿಸಿ ವಿಧಿಲಿ

*ಕ್ರಾಂತಿ ರತ್ನ ಕಿಡಿಗಳು* 

ವೈರಿಗಳ ಎದೆ ನಡುಗಿಸಿ
ವಿಧಿಲಿಖಿತ ಬದಲಾಯಿಸಿ
ಎದೆ ನೆತ್ತರ ಇತಿಹಾಸದಿ
ಪ್ರಜ್ವಲಿಸಿವೆ ಹಣತೆಗಳು.!

ತಾಯ್ನಾಡ ಸ್ವಾತಂತ್ರ್ಯದ
ಕ್ರಾಂತಿ ರತ್ನ ಕಿಡಿಗಳು
ಭರತಮಾತೆ ಮಣಿಮುಕುಟದಿ
ಮೆರವ ಹೊನ್ಮುತ್ತುಗಳು.!

ಅನ್ಯಾಯಕೆ ಸಿಡಿದೆದ್ದು
ಬಂಡಾಯವೇ ಬುಗಿಲೆದ್ದು
ರಣರಂಗದಿ ಝಳಪಳಿಸಿವೆ
ಕ್ರಾಂತಿ ರಕ್ತದ ಖಡ್ಗಗಳು..!

ಸಿಡಿಗುಂಡೇ ಬದಿ ಸರಿಯಿತು
ಗುಂಡಿಗೆಯಾ ಧೈರ್ಯಕೆ
ಮುಗಿಲೆತ್ತರ ಹಾರಾಡಿತು
ಸ್ವಾತಂತ್ರ್ಯದ ಕೀರ್ತಿ ಪತಾಕೆ.!

ಭರತಮಾತೆ ಮಕ್ಕಳೆದುರು
ಸೊಕ್ಕಿದವರು ಉಳಿದಿಲ್ಲ
ಶಾಂತಿ ಕ್ರಾಂತಿ ಅಸ್ರ್ತದೆದುರು
ಯವನರ ಸೊಲ್ಲು ಗೆಲ್ಲಲ್ಲ.!

©Lakumikanda Mukunda #ಲಕುಮಿಕಂದ #ಕ್ರಾಂತಿ # ಕ್ರಾಂತಿ ರತ್ನ ಕಿಡಿಗಳು

#Independence2021
*ಕ್ರಾಂತಿ ರತ್ನ ಕಿಡಿಗಳು* 

ವೈರಿಗಳ ಎದೆ ನಡುಗಿಸಿ
ವಿಧಿಲಿಖಿತ ಬದಲಾಯಿಸಿ
ಎದೆ ನೆತ್ತರ ಇತಿಹಾಸದಿ
ಪ್ರಜ್ವಲಿಸಿವೆ ಹಣತೆಗಳು.!

ತಾಯ್ನಾಡ ಸ್ವಾತಂತ್ರ್ಯದ
ಕ್ರಾಂತಿ ರತ್ನ ಕಿಡಿಗಳು
ಭರತಮಾತೆ ಮಣಿಮುಕುಟದಿ
ಮೆರವ ಹೊನ್ಮುತ್ತುಗಳು.!

ಅನ್ಯಾಯಕೆ ಸಿಡಿದೆದ್ದು
ಬಂಡಾಯವೇ ಬುಗಿಲೆದ್ದು
ರಣರಂಗದಿ ಝಳಪಳಿಸಿವೆ
ಕ್ರಾಂತಿ ರಕ್ತದ ಖಡ್ಗಗಳು..!

ಸಿಡಿಗುಂಡೇ ಬದಿ ಸರಿಯಿತು
ಗುಂಡಿಗೆಯಾ ಧೈರ್ಯಕೆ
ಮುಗಿಲೆತ್ತರ ಹಾರಾಡಿತು
ಸ್ವಾತಂತ್ರ್ಯದ ಕೀರ್ತಿ ಪತಾಕೆ.!

ಭರತಮಾತೆ ಮಕ್ಕಳೆದುರು
ಸೊಕ್ಕಿದವರು ಉಳಿದಿಲ್ಲ
ಶಾಂತಿ ಕ್ರಾಂತಿ ಅಸ್ರ್ತದೆದುರು
ಯವನರ ಸೊಲ್ಲು ಗೆಲ್ಲಲ್ಲ.!

©Lakumikanda Mukunda #ಲಕುಮಿಕಂದ #ಕ್ರಾಂತಿ # ಕ್ರಾಂತಿ ರತ್ನ ಕಿಡಿಗಳು

#Independence2021

#ಲಕುಮಿಕಂದ #ಕ್ರಾಂತಿ # ಕ್ರಾಂತಿ ರತ್ನ ಕಿಡಿಗಳು #Independence2021