Nojoto: Largest Storytelling Platform

ಕೇಳದಿರಿ ನನ್ನನು ನನ್ನ ಕವಿತೆಯ ಸ್ನೇಹಿತೆ ಯಾರೆಂದು ತೋರಲ

ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems
ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems
suman4138728493929

Artha

New Creator