Nojoto: Largest Storytelling Platform
suman4138728493929
  • 10Stories
  • 5Followers
  • 40Love
    35Views

Artha

  • Popular
  • Latest
  • Video
0effdb6bf125c9e661b964940b6bf5a3

Artha

Artha......... #eidmubarak
0effdb6bf125c9e661b964940b6bf5a3

Artha

Bbbbbbbbb #MothersDay
0effdb6bf125c9e661b964940b6bf5a3

Artha

ಅರ್ಥ............... #kannadaquotes #kannada#kavite#kannada
0effdb6bf125c9e661b964940b6bf5a3

Artha

ಮೊದಲ ಅಳುವ ಧ್ವನಿಯ ಕೇಳಿ 
ಎದೆ ತುಂಬಿ ಕಣ್ಣಾ ಹನಿಯ ಜಾರಲು 
ಬಂದ ನಂದನದ ಕಂದ ನಮ್ಮ ಮನೆಗೆ 
ನನ್ನ ಮಡಿಲು ಸೇರಲು 

ತೊಳಿನಲ್ಲಿ ನಿನ್ನ ಬಳಸಿ 
ಎದೆ ಉಸಿರನ್ನು ಇಳಿಸಿ 
ತುಟಿಯು ನೆನೆಯುತಿರಲು 
ಮರೆತ ಜಗವು ನನ್ನದು 

ಕಾಲ್ ಬಳೆಯ ತೊಡಿಸುತಿರಲು  
ಸಣ್ಣ ಸದ್ದು ಕೇಳಿಬರಲು 
ನೋಟ ಆಟಗಳ ನಡುವೆ
ಬಿರಿದ ಸಂಪಿಗೆಯ ಮನವು 

ಇರುಳು ಬೆಳಕನೊಂದು ಮಾಡಿ
ಭಾವ ತೊರೆಯು ಹೊನಲು ಸೇರಿ 
ಒಲುಮೆ ಕಡಲ ತೀರದಿಂದ 
ಬಂದ ಚಂದ್ರನೊಲುಮೆಯನ್ನು ಮೀರಿ #ಕನ್ನಡ#ಕವನ#bharahantapa
#ಅರ್ಥನಪದ

#ಕನ್ನಡ#ಕವನ#bharahantapa #ಅರ್ಥನಪದ #poem

0effdb6bf125c9e661b964940b6bf5a3

Artha

ಸಮಾಧಿ 

ತನ್ನೂರಿನ ವಿಳಾಸ ತಿಳಿದಿದ್ದರು
ಪರವೂರಿನ ವ್ಯಾಮೋಹ ಬಿಟ್ಟಿಲ್ಲ ನಾವು
ಜವರಾಯನ ಆಳ್ವಿಕೆ ಶುರುವಾಗಿದ್ದರೂ
ಕಿತ್ತುತಿನ್ನುವ ದಾಹ ಇಂಗಿಲ್ಲ ಇನ್ನೂ

ಹಸಿವಿನಿಂದ ಕಂಗೆಟ್ಟು ಕೂತ
ಜನಗಳ ನಡುವೆಯು 
ತನ್ನೆಸರು ಬೆಳೆಸುವ ಬಯಕೆ 
ಕೊಟ್ಟಿದ್ದು ಬೆರಳಷ್ಟು  
ತೋರುವುದು ಊರಷ್ಟು 
ಬೇಕೇನು ಬಡವರ ಅಸಹಾಯಕತೆಯ 
ಮೇಲೆ ಭವ್ಯ ಬಂಗಲೆ
ಕೊನೆಯೂರಿನ ವಿಳಾಸ ತಿಳಿದಿದ್ದ ಮೇಲು #kannada #sumansuni #arthabharaha
0effdb6bf125c9e661b964940b6bf5a3

Artha

ಗುಲಾಬಿ ಚಂದಿರ ನಗುವ ಬೀರಿದೆ
ನಾಚಿಕೆಯ ತಬ್ಬಿದಾಗ  
ಕಣ್ಣ ಕಾಡಿಗೆಯೇ ಕಥೆಯೊಂದು ಹೇಳಿದೆ 
ಮಾತು ಮೌನವ ಅರಸಿದಾಗ 

ನಿನ್ನ ಕಣ್ಣ ಕನ್ನಡಿಯಲಿ
ಪ್ರತಿಬಿಂಬವಾಗಲು ಅನುಮತಿ ಸಿಗಬಹುದೇ
ಆ ತುಟಿ ಅಂಚಿನ ನಗುವನು 
ಸೆರೆ ಹಿಡಿಯಲು ನಾ ಇನ್ನೂ ತುಸು ಹತ್ತಿರ ಬರಬಹುದೇ
ನಿನ್ನ ಪಿಸುಮಾತಿನ ಸದ್ದನು ಕೇಳುವ ಹಂಬಲ 
ಅರ್ಜಿ ಹಾಕಬಹುದೇ

ಈ ಮಾಯದ ಸುಳಿಯ ಕುರುಹನು
ಹುಡುಕುತ ತಲುಪಿದೆ ನಾ ನೀನಿರುವಲ್ಲಿ 
ಬಿಡಿಸಿ ಹೇಳಬೇಕೆನು ಎಲ್ಲವನು ನಾನೆ 
ಈ ಪ್ರೀತಿಯ ಮನೆಯಲ್ಲಿ 
ನಿಶ್ಯಬ್ದದ ಶಬ್ದವೆ ಪ್ರೇಮದ ಬರಹವು 
ಬಳಸಬಹುದೆ ನಾ ಈಗಿಲ್ಲ 

ಸಿಹಿಯನು ಹುಡುಕುತ ಹೊರಟ ಇರುವೆಗೆ
ತಿಳಿಸದೆ ಬಂದಿಹೆನು ನಿನ್ನ ಸನಿಹ 
ನಿನ್ನೊಳಗಿನ ಬಡಿತಕೆ ಕಿಡಿ ಹಚ್ಚುವ ಆತುರ 
ಗೀಚಲೆ ನಾ ಒಲವನ್ನಾ 
ಹಾಳೆಯ ಮದ್ಯವೆ ಉಳಿದಿದೆ ಕೇಲವು ಸಾಲುಗಳು 
ಸಹಕರಿಸಿ ನೀಡು ನೀ ನಿನ್ನ ಹಸ್ತಕ್ಷರ
0effdb6bf125c9e661b964940b6bf5a3

Artha

ಸಂತೆಯ ಸದ್ದಿನ ಮಧ್ಯೆಯೂ 
ಕಿವಿ ಒಪ್ಪುವ ಸದ್ದಿನ ಗಾಡಿ ಇದು
ಮನಸಿಗೆ ಸ್ಪಂದಿಸುತ ನಾಲಿಗೆ  
ಕರೆಯುವುದು ಅವನನ್ನೂ

ಬಣ್ಣ ಬಣ್ಣದ ಐಸು ಕಡ್ಡಿಗಳ
ಡಬ್ಬದಲ್ಲಿ ತುಂಬಿಸಿಕೊಂಡು 
ಕೂಗುತ್ತಾ ಬರುತಿಹನು
ಒಂದು ರೂಪಾಯಿಗೆ ಒಂದು ಎಂದು
ಸೈಕಲ್ಲನ್ನು ತಳ್ಳುತಲಿ 

ಬಿಸಿಲಿನ ನಡುವೆಯೂ 
ಜಿನುಗುವ ಪ್ರತಿ ಹನಿಗಳ ಜೊತೆಗೆ 
ಐಸ್ ಕ್ಯಾಂಡಿ ಹೀರುತ ಸಾಗಿತ್ತು
ನಮ್ಮ ಪಯಣ ಮುಂದಕ್ಕೆ
ಸೈಕಲ್ ಹೋದ ದಾರಿ ನೋಡುತಾ
ಇನ್ನೊಂದು ಕೊಳ್ಳಬಹುದಿತ್ತು ಎಂಬ ಬಯಕೆ 
ಮೂಡುತ್ತಿತ್ತು ಮನದಲ್ಲೆ
0effdb6bf125c9e661b964940b6bf5a3

Artha

ಗುರುವಿನ ನೆರಳಲ್ಲಿ ನೀನಿರಲು
ಅಳುಕಿನ್ನೇಕೆ ಮನವೇ
ರಾಯರ ದಯೆ ನೀ ಕಂಡಿರಲು 
ಧ್ಯಾನಿಸು ಗುರುವನು ಸುಮ್ಮನೆ

ಮುಂದಿನ ಬದುಕ ಚಿಂತೆ ಏತಕೆ? 
ಗುರುವ ನೀ ನಂಬಿದ ಮೇಲೆ 
ಅವನ ನಂಬಿ ಕೆಟ್ಟವರಿಲ್ಲವೋ 
ರಾಘವೇಂದ್ರ ಎಂದರೆ ಸಾಕು
ಕಲ್ಪವೃಕ್ಷ ನಿನ್ನ ಬದುಕು 
ಭಕ್ತಿ ತುಂಬಿ ಕರೆಯೋ ನೀ ಗುರುವನ್ನು
ಮನವೇ, ಭಕ್ತಿ ತುಂಬಿ ಕರೆಯೋ ನೀ ಗುರುವನು 

ನೂರು ಗುಡಿಯ ಸುತ್ತೋಕಿಂತ 
ಅರಿಯದ ಪೂಜೆ ಮಾಡೋದಕ್ಕಿಂತ
ಭಕ್ತಿ ಭಾವದ ನಾಮಸ್ಮರಣೆಯೇ ಮೇಲಲ್ಲವೇ
ಬಂದ ಕಷ್ಟ ಬಂದು ಹೋಗಲಿ
ಚಿಂತೆ ಹೊತ್ತು  ನಾ ಏನಾ ಮಾಡಲಿ
ರಾಘವೇಂದ್ರನ ನೆನೆದರೆ ಹಿತವಲ್ಲವೇ
ಮನವೇ, ರಾಘವೇಂದ್ರನ ನೆನೆಯುವುದೆ ಹಿತವಲ್ಲವೆ
0effdb6bf125c9e661b964940b6bf5a3

Artha

0effdb6bf125c9e661b964940b6bf5a3

Artha

ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems
loader
Home
Explore
Events
Notification
Profile