Nojoto: Largest Storytelling Platform

ನಿನ್ನ ಕಾಲ್ಗೆಜ್ಜೆಯ ಸಪ್ಪಳ ಕೇಳಿದಾಕ್ಷಣವೇ ನನ್ನೆದೆಯಲಿ ನೂ

ನಿನ್ನ ಕಾಲ್ಗೆಜ್ಜೆಯ ಸಪ್ಪಳ ಕೇಳಿದಾಕ್ಷಣವೇ
ನನ್ನೆದೆಯಲಿ ನೂರು ಅನುರಾಗ ಕಂಪನಗಳು

ನಿಶ್ಶಬ್ದವಾಗಿದ್ದ ಉಸಿರಾಟದಲ್ಲೀಗ ನವಿರಾದ ಉದ್ವೇಗದೋಟ

ನಿನ್ನ ಬರುವಿಕೆಗಾಗಿ ಕಾದು ಸೋತ
ನಿಸ್ತೇಜ ಕಣ್ಣುಗಳಲ್ಲೀಗ ನಿರಾಂತಕದ ಶುಭ್ರ ಮೋಡ

ನಿನ್ನ ಕೈ ಸೋಕದೆ ಹೊಳಪು ಕಳೆದುಕೊಂಡ 
ಕವಿತೆಯ ಸಾಲುಗಳಲ್ಲೀಗ 
ಸಿಂಗಾರಗೊಂಡ ನವವಧುವಿನ ಚೆಲುವು

ನಿನ್ನ ಮೊಗವಿನ್ನು ಕಾಣದೆ ನಿನ್ನ ಕಾಲ್ಗೆಜ್ಜೆಯ ನಿನಾದದಲ್ಲೇ
ಇದು ನೀನೇ ಎಂದು ಮನದೊಳಗೆ ಮುದ್ರೆ ಮೂಡಿಯಾಗಿದೆ

ನಿನ್ನ ಕಾಲ್ಗೆಜ್ಜೆಯ ದನಿಯಿಂದಲೆ ಇಷ್ಟು ಚೇತರಿಕೆ ಕಂಡಿರುವಾಗ
ಇನ್ನು ಆ ನಿನ್ನ ದಿವ್ಯವಾದ ಸ್ವರ ಮಾಧುರ್ಯ,
ಭವ್ಯವಾದ ಸೌಂದರ್ಯದ ದರುಶನದಲಿ 
ಅದಿನ್ನೆಂಥ ಚೇತರಿಕೆ, ಚೆಲುವಿಹುದೊ!


_ಶ್ರವಣ

©callmeShravan
  #love#you#poetic