Find the Best ಕಾವ್ಯ Shayari, Status, Quotes from top creators only on Nojoto App. Also find trending photos & videos aboutಕಾವ್ಯ, ಶಿವಕಾವ್ಯ, ಪ್ರೇಮಕಾವ್ಯ, ಎರಡುಸಾಲಿನಲ್ಲಿಕಾವ್ಯ, ಶೃಂಗಾರ_ಕಾವ್ಯ,
PARVATI KAMBLI
ಸಾಧಾರಣ ವಿಷಯವಲ್ಲವದು ಶಿವನ ಒಲಿಸಿಕೊಳ್ಳುವುದು ಏಳು ಮೋಹವನಳಿಸಿದಾಗ ಸುಲಭವೇ... ಭಕ್ತಿಯ ಮಾರ್ಗದಲಿ ಬಸವನ ವಚನಗಳ ಆಳವನ್ನರಿತು ಜೀವನದಲ್ಲಿ ಅಳವಡಿಸಿದಾಗ ಜ್ಞಾನೋದಯ ಸಾಧ್ಯ...... ಲಿಂಗವ ಧರಿಸಿ ನಾಮ ಜಪವ ಸ್ಮರಿಸಿ ಮೌಲ್ಯಗಳ ಅನುಸರಿಸಿ ಅಂತರ್ಮುಖಿಯಾಗಿಸಿ ಮೌನ ವೃತವ ಆಚರಿಸಿ ಬದುಕಿನ ನಶ್ವರತೆಯ ಅರಿತು ಶೂನ್ಯವಾದಾಗಲೇ.... ಶಿವನಂತರಂಗದ ಮಹಿಮೆಯ ಆತ್ಮ ಸಾಕ್ಷಾತ್ಕಾರ ವಾಗುವುದು.... ಪಾರ್ವತಿ ಎಸ್.ಕಂಬಳಿ ©PARVATI KAMBLI #RAMADAAN
Mohammed Armaan
White choice is ours but life is yours ©Mohammed Armaan #Thinking
PARVATI KAMBLI
White ಪತಿಯೇ ಸಖನಾದಾಗ ಬರೆಯಲೆಂದು ಕುಳಿತೆ ಪ್ರೇಮ ಕಾವ್ಯವ ನೀ ಜೊತೆ ಇರೆ ಬಾಳ ಸಂಗಾತಿ ತನುಮನವೆಲ್ಲ ಸಾಹಿತ್ಯವೇ.... ಸಂಭಾಷಣೆ ಸರಸವೆಲ್ಲ ಕವಿತೆಯೇ ಯುಗವೊಂದು ಕ್ಷಣವಾಯಿತು ಸಖನೆ ಪ್ರತಿಕ್ಷಣವನು ಪರಿಮಳವಾಗಿಸು ನಲ್ಲ ಬಾಳ ಸಂಗಾತಿಯಾಗಿ ಬಾಳು ಬೆಳಗಿದೆ ನವ್ಯ ಜೀವನ ನೀಡಿದೆ ನನಗಾಗಿ ಕಷ್ಟ ಸುಖದ ಹಾದಿಯಲ್ಲಿ ನಡೆಸಿದೆ ಅನುಭವದ ಖಜಾನೆ ರವಾನಿಸಿದೆ ನೆರಳಂತೆ ನೀ ಬಂದು ಪ್ರೇರೇಪಿಸಿದೆ ಅಪೂರ್ವ ಸಾಧನೆಗೆ ಕಾರಣವಾದೆ ಮರೆಯಲೆಂತು ನಿನ್ನನು ಸುಮ್ಮನೆ ವಸಂತದ ಕೋಗಿಲೆ ಇಂಚರ ನೀನು ಬಾಳ ಸಂಗೀತಕೆ ಭಾವ ಮೂಡಿಸಿ ರಾಗ ನುಡಿಸಿದೆ ನನ್ನ ದನಿಯಲಿ...... ಪಾರ್ವತಿ ಎಸ್ ಕಂಬಳಿ ©PARVATI KAMBLI #love_shayari
PARVATI KAMBLI
ಶಿವನ ಮನ ಗೆದ್ದಿರುವೆ ನಿಸರ್ಗದ ಮಡಿಲಲ್ಲಿ ಮಗುವಾಗಿರುವೆ ಜೀವನದ ರಸಾನುಭವ ಸವಿದಿರುವೆ ಏಳು ಬೀಳುಗಳ ದಾಟಿ ಬಂದಿರುವೆ ಅರುಣೋದಯದ ಕಿರಣಗಳ ಸ್ಪರ್ಶವಾಗಿದೆ ಅಂತರಾಳದಲ್ಲಿ ಬೆಳಕೊಂದು ಪ್ರಜ್ವಲಿಸಿದೆ ದೇವರಾಟದಲಿ ಧುಮುಕಿ ಈಜುವುದ ಕಲಿತೆ ದೈವ ನೀಡಿದ ಪರೀಕ್ಷೆಯಲ್ಲಿ ಪಾಸಾದೆ ನೊಂದು ಬೆಂದು ಬಳಲಿದಕೆ ಕಲ್ಲಾಗಿರುವೆ ಅವಮಾನಗಳ ಜ್ವಾಲಾಮುಖಿ ಧಹಿಸಲಿಲ್ಲ ಆ ಶಿವನಿಟ್ಟ ಸವಾಲುಗಳ ಎದುರಿಸಿ ಮನವನ್ನು ಪವಿತ್ರ ಭಾವಗಳಲ್ಲಿ ಇರಿಸಿ ಸಹನೆಯ ಸಹವಾಸದಲ್ಲಿ ಮಿಂದೇಳಿಸಿ ಕರುಣೆ ಪ್ರೀತಿ ಮಮತೆಗಳ ಜೀವಾಳವಾಗಿಸಿ ಪ್ರಾಮಾಣಿಕವಾಗಿ ದೈವದಾಣತಿಯ ಪೂರೈಸಿ ಶಿಲ್ಪಕಾರನ ಕೈಚಳಕದಲಿ ಮೂರ್ತಿಯಾಗಿ ಬಂಧುದನ್ನೆಲ್ಲವ ಬರಲೆಂದು ಸ್ವೀಕರಿಸಿ ಅದ್ಭುತ ಕೊಡುಗೆಯ ಮನಸಾರೆ ಅಹ್ವಾನಿಸಿ ಕಹಿ ನೆನಪ ಅಳಿಸಿ ಸವಿ ನೆನಪ ಅನುಭವಿಸಿದೆ... ಪಾರ್ವತಿ ಎಸ್.ಕಂಬಳಿ ©PARVATI KAMBLI #RAMADAAN
Mohammed Armaan
White be positive and positive thinking is best 😏 ©Mohammed Armaan #Thinking
PARVATI KAMBLI
White ಒಂದು ದಿನಕ್ಕೆ ಸೀಮಿತವಾಗಿರುವ ಏಳು ಬಣ್ಣಗಳ ಎರಚುತ ಮಾಸಿ ಹೋಗುವ ಬಣ್ಣ ಆಡುವ ಅವಶ್ಯಕತೆ ನನಗಿಲ್ಲ ಸಂಗಾತಿ... ಪ್ರತಿಕ್ಷಣ ನನ್ನೊಂದಿಗಿದ್ದು..... ನನ್ನೀಡಿ ಜೀವನವನ್ನೇ ರಂಗಾಗಿಸಿದೆ ಯೋಚನೆಗಳಿಗೆ ಗುಲಾಬಿ ಬಣ್ಣವೆರಚಿ ತಿಳಿಯಾಗಿಸಿದೆ.... ಭಾವನೆಗಳಿಗೆ ಕೆಂಪು ಬಣ್ಣ ತುಂಬಿದೆ, ಸ್ಪೂರ್ತಿಗೆ ಕೇಸರಿ ಬಣ್ಣ ಹಾಕಿದೆ, ಅಂತರಂಗವನು ಬಿಳಿ ಹಾಳೆಯಾಗಿಸಿದೆ, ಹೃದಯ ಹಸಿರಾಗಿಸಿದೆ, ಮನಸೆಲ್ಲಾ ತಿಳಿ ಆಗಸದಂತೆ ವಿಶಾಲವಾಗಿಸಿದೆ... ನನ್ನ ಸಾಧನೆಗೆ ಜೊತೆಯಾಗಿ ನಿಂತು ಬದುಕನೆಲ್ಲ ಹಳದಿ ಬಣ್ಣವಾಗಿಸಿದೆ... ಅದಕ್ಕಾಗಿ ನನಗೆ ಇನ್ನಾವ ಬಣ್ಣ ವಸ್ತ್ರ ಒಡವೆಗಳ ಬಯಕೆ ಇಲ್ಲ...... ನನ್ನ ಬಾಳ ಸಂಗಾತಿಗಾಗಿ ಪಾರ್ವತಿ ಎಸ್.ಕಂಬಳಿ ©PARVATI KAMBLI #love_shayari
PARVATI KAMBLI
White ಭಾರತೀಯ ಸಂಸ್ಕೃತಿಯ ಎಲ್ಲಾ ಹಬ್ಬಗಳು ಮಹತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೋಳಿ ಹಬ್ಬ ಮಾತ್ರ ಆತ್ಮೀಯತೆ ಬಣ್ಣಗಳ ಮಹಿಮೆ ಸಾರುತ್ತ ವರುಷದಿಂದ ವರುಷಕ್ಕೆ ವಿಜೃಂಭಿಸುತ್ತಿದೆ..... ©PARVATI KAMBLI #love_shayari
PARVATI KAMBLI
White ಸುವಿಚಾರಗಳನ್ನು ಬಣ್ಣವಾಗಿಸಿದೆ, ಕವಿತ್ವದ ಹೃದಯ ನೀಡಿದೆ, ಆತ್ಮಸ್ಥೈರ್ಯವ ತುಂಬಿದೆ, ಮನಸ್ಸಾಕ್ಷಿಯ ಜಾಗೃತಗೊಳಿಸಿದೆ, ಆತ್ಮ ಪ್ರೇರಣೆಗೆ ಸಹಕರಿಸಿದೆ, ಆಧ್ಯಾತ್ಮದ ದಿವ್ಯ ಅನುಭವ ಕೊಡಲು ಗುರುವಾಗಿ ಬಾಳಲಿ ಬಂದು ಹೃದಯೇಶ್ವರನ ಕರುಣಿಸಿದೆ. ಶ್ರೀ ಗುರು ಬಸವಣ್ಣ.... ಪಾರ್ವತಿ ಎಸ್ ಕಂಬಳಿ ©PARVATI KAMBLI #Thinking
PARVATI KAMBLI
White ನಿನ್ನ ಧ್ಯಾನವೊಂದು ನನಗೆ ಸವಿ ಜೀವನ ಸವಿದಂತೆ ನಿನ್ನ ಆರಾಧನೆ ಒಂದು ಸಂಭ್ರಮಾಚರಣೆಯಂತೆ ನಿನ್ನ ಪೂಜಿಸುವುದು ಸಕಲ ಭಾಗ್ಯದಂತೆ ನೀ ನನ್ನೊಂದಿಗೆ ಇದ್ದು ದಿವ್ಯಾತ್ಮದ ಪರಿಚಯ ಮಾಡಿದೆ ಇದೇ ನನ್ನ ಪುಣ್ಯವಯ್ಯ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಜೀ...... ಪಾರ್ವತಿ ಎಸ್.ಕಂಬಳಿ ©PARVATI KAMBLI #happy_diwali
PARVATI KAMBLI
a-person-standing-on-a-beach-at-sunset ಜಗವೆಲ್ಲ ನಿಂದಿಸಿದರೂ ಬೈಗುಳಗಳ ಮಳೆ ಸುರಿಸಿದರೂ ನೋವಿನ ಬೆಂಕಿಯಲ್ಲಿ ಬೆಂದರೂ ಬಯಲಲಿ ಏಕಾಂಗಿಯಾಗಿ ನಿಂತರೂ ನನ್ನೆದೆಯ ಬೇಗುದಿಯನೆಲ್ಲ ಅದೆಷ್ಟು ಸುಲಭವಾಗಿ ತಂಪಾಗಿಸಿದೆ ಹೀಗೆ ನನ್ನೊಂದಿಗೆ ಇದ್ದರೆ ನನಗಿನ್ನಾವ ಭಯವಿಲ್ಲ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಜೀ.... ಪಾರ್ವತಿ ಎಸ್.ಕಂಬಳಿ. ©PARVATI KAMBLI #SunSet