Nojoto: Largest Storytelling Platform

ಗುಡಿ-ಗೋಪುರಗಳ ಮಂತ್ರಘೋಷಗಳ ವೇದ ತೊಲಗಿಸಲಿಲ್ಲ ಮೌಢ್ಯತೆಯ

ಗುಡಿ-ಗೋಪುರಗಳ ಮಂತ್ರಘೋಷಗಳ ವೇದ 
ತೊಲಗಿಸಲಿಲ್ಲ  ಮೌಢ್ಯತೆಯ ನಾದ ಕಣ್ಣಿಗೆ 
ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ
ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ
ಗುರುವಿನ ಕುರುವು ನೀನಾದೆ ನೀನಾದೆ 

ಕುರಿ-ಕೋಳಿ ಕೋಣದ  ನೆತ್ತರ ಹರಿಸಿ 
ಜಗದ ಜನಕೆ  ಸುಖ ಶಾಂತಿ ಮಂತ್ರ ಜಪಿಸಿ
ಮನವು ಅರಿಯಲಿಲ್ಲ ಮೂಕಪ್ರಾಣಿಯ ತ್ಯಾಗ
ತೊಳೆಯಲಿಲ್ಲ ನಿನ್ನ ಮನೋರೋಗ

ಹೂ-ಹಣ್ಣುಕಾಯಿಯ ಪಂಚಾಮೃತದ ನೈವೇದ್ಯದಿ
ಬೆಣ್ಣೆ ತುಪ್ಪದಿ ಕಲ್ಲ ತೊಳೆದಾಗ ಜಗಜಟ್ಟಿ ದೇಹ 
ಕರಮುಗಿದು ಶಿರಬಾಗಿದರೂ ಪೊರೆವ ಹೊಟ್ಟೆಗೆ 
ಸುಡುವ ಹಸಿವಿಗೆ  ಕನಿಕರ ತೋರಲಿಲ್ಲ ಆ 
ಗುಡಿಯಲ್ಲಿನ ಶಿಲೆಯಂತಾಯಿತೇಕೆ  ಮನವು

ಮರುಗದ ಮನ ತೋರದ ಕರುಣೆ  
ನೀಡದ ಕೈ ಬಂಗಾರವೇ ಮೆತ್ತಿದ ಮೈಗೆ 
ತುತ್ತು ಅನ್ನಕ್ಕೂ ಕೈಚಾಚಿ ನಿಂತ 
ಹಗಲಿರುಳೆನ್ನದೆ ದೇವನ ‌ಸನ್ನಿದಾನದಲ್ಲೆ‌ 
ಬಡತನದ ಜಪದಲಿ‌‌ ಬದುಕಿನ ತಾಪ ಕಳೆವ 
ಭಕ್ತನಿಗೆ ಕರುಣಾ ಕೃಪಾಕಟಾಕ್ಷವ  ತೋರದ
ನಿನಗೂ, ಆ ದೇವನಿಗೂ ನನ್ನ ದಿಕ್ಕಾರವಿರಲಿ.... ದೇವನಿಗೂ ದಿಕ್ಕಾರವಿರಲಿ
ಗುಡಿ-ಗೋಪುರಗಳ ಮಂತ್ರಘೋಷಗಳ ವೇದ 
ತೊಲಗಿಸಲಿಲ್ಲ  ಮೌಢ್ಯತೆಯ ನಾದ ಕಣ್ಣಿಗೆ 
ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ
ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ
ಗುರುವಿನ ಕುರುವು ನೀನಾದೆ ನೀನಾದೆ 

ಕುರಿ-ಕೋಳಿ ಕೋಣದ  ನೆತ್ತರ ಹರಿಸಿ
ಗುಡಿ-ಗೋಪುರಗಳ ಮಂತ್ರಘೋಷಗಳ ವೇದ 
ತೊಲಗಿಸಲಿಲ್ಲ  ಮೌಢ್ಯತೆಯ ನಾದ ಕಣ್ಣಿಗೆ 
ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ
ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ
ಗುರುವಿನ ಕುರುವು ನೀನಾದೆ ನೀನಾದೆ 

ಕುರಿ-ಕೋಳಿ ಕೋಣದ  ನೆತ್ತರ ಹರಿಸಿ 
ಜಗದ ಜನಕೆ  ಸುಖ ಶಾಂತಿ ಮಂತ್ರ ಜಪಿಸಿ
ಮನವು ಅರಿಯಲಿಲ್ಲ ಮೂಕಪ್ರಾಣಿಯ ತ್ಯಾಗ
ತೊಳೆಯಲಿಲ್ಲ ನಿನ್ನ ಮನೋರೋಗ

ಹೂ-ಹಣ್ಣುಕಾಯಿಯ ಪಂಚಾಮೃತದ ನೈವೇದ್ಯದಿ
ಬೆಣ್ಣೆ ತುಪ್ಪದಿ ಕಲ್ಲ ತೊಳೆದಾಗ ಜಗಜಟ್ಟಿ ದೇಹ 
ಕರಮುಗಿದು ಶಿರಬಾಗಿದರೂ ಪೊರೆವ ಹೊಟ್ಟೆಗೆ 
ಸುಡುವ ಹಸಿವಿಗೆ  ಕನಿಕರ ತೋರಲಿಲ್ಲ ಆ 
ಗುಡಿಯಲ್ಲಿನ ಶಿಲೆಯಂತಾಯಿತೇಕೆ  ಮನವು

ಮರುಗದ ಮನ ತೋರದ ಕರುಣೆ  
ನೀಡದ ಕೈ ಬಂಗಾರವೇ ಮೆತ್ತಿದ ಮೈಗೆ 
ತುತ್ತು ಅನ್ನಕ್ಕೂ ಕೈಚಾಚಿ ನಿಂತ 
ಹಗಲಿರುಳೆನ್ನದೆ ದೇವನ ‌ಸನ್ನಿದಾನದಲ್ಲೆ‌ 
ಬಡತನದ ಜಪದಲಿ‌‌ ಬದುಕಿನ ತಾಪ ಕಳೆವ 
ಭಕ್ತನಿಗೆ ಕರುಣಾ ಕೃಪಾಕಟಾಕ್ಷವ  ತೋರದ
ನಿನಗೂ, ಆ ದೇವನಿಗೂ ನನ್ನ ದಿಕ್ಕಾರವಿರಲಿ.... ದೇವನಿಗೂ ದಿಕ್ಕಾರವಿರಲಿ
ಗುಡಿ-ಗೋಪುರಗಳ ಮಂತ್ರಘೋಷಗಳ ವೇದ 
ತೊಲಗಿಸಲಿಲ್ಲ  ಮೌಢ್ಯತೆಯ ನಾದ ಕಣ್ಣಿಗೆ 
ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ
ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ
ಗುರುವಿನ ಕುರುವು ನೀನಾದೆ ನೀನಾದೆ 

ಕುರಿ-ಕೋಳಿ ಕೋಣದ  ನೆತ್ತರ ಹರಿಸಿ
divakard3020

DIVAKAR D

New Creator