ಗುಡಿ-ಗೋಪುರಗಳ ಮಂತ್ರಘೋಷಗಳ ವೇದ ತೊಲಗಿಸಲಿಲ್ಲ ಮೌಢ್ಯತೆಯ ನಾದ ಕಣ್ಣಿಗೆ ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ ಗುರುವಿನ ಕುರುವು ನೀನಾದೆ ನೀನಾದೆ ಕುರಿ-ಕೋಳಿ ಕೋಣದ ನೆತ್ತರ ಹರಿಸಿ ಜಗದ ಜನಕೆ ಸುಖ ಶಾಂತಿ ಮಂತ್ರ ಜಪಿಸಿ ಮನವು ಅರಿಯಲಿಲ್ಲ ಮೂಕಪ್ರಾಣಿಯ ತ್ಯಾಗ ತೊಳೆಯಲಿಲ್ಲ ನಿನ್ನ ಮನೋರೋಗ ಹೂ-ಹಣ್ಣುಕಾಯಿಯ ಪಂಚಾಮೃತದ ನೈವೇದ್ಯದಿ ಬೆಣ್ಣೆ ತುಪ್ಪದಿ ಕಲ್ಲ ತೊಳೆದಾಗ ಜಗಜಟ್ಟಿ ದೇಹ ಕರಮುಗಿದು ಶಿರಬಾಗಿದರೂ ಪೊರೆವ ಹೊಟ್ಟೆಗೆ ಸುಡುವ ಹಸಿವಿಗೆ ಕನಿಕರ ತೋರಲಿಲ್ಲ ಆ ಗುಡಿಯಲ್ಲಿನ ಶಿಲೆಯಂತಾಯಿತೇಕೆ ಮನವು ಮರುಗದ ಮನ ತೋರದ ಕರುಣೆ ನೀಡದ ಕೈ ಬಂಗಾರವೇ ಮೆತ್ತಿದ ಮೈಗೆ ತುತ್ತು ಅನ್ನಕ್ಕೂ ಕೈಚಾಚಿ ನಿಂತ ಹಗಲಿರುಳೆನ್ನದೆ ದೇವನ ಸನ್ನಿದಾನದಲ್ಲೆ ಬಡತನದ ಜಪದಲಿ ಬದುಕಿನ ತಾಪ ಕಳೆವ ಭಕ್ತನಿಗೆ ಕರುಣಾ ಕೃಪಾಕಟಾಕ್ಷವ ತೋರದ ನಿನಗೂ, ಆ ದೇವನಿಗೂ ನನ್ನ ದಿಕ್ಕಾರವಿರಲಿ.... ದೇವನಿಗೂ ದಿಕ್ಕಾರವಿರಲಿ ಗುಡಿ-ಗೋಪುರಗಳ ಮಂತ್ರಘೋಷಗಳ ವೇದ ತೊಲಗಿಸಲಿಲ್ಲ ಮೌಢ್ಯತೆಯ ನಾದ ಕಣ್ಣಿಗೆ ಕಾಣದ ದೇವರ ಸೃಷ್ಟಿಸಿ ಮೂರುಕಾಸಿನ ಗಂಧಕಡ್ಡಿ ಕರ್ಪೂರ ಬೆಳಗಿಸಿ ಮೂಕ ಜಗದ ಮೂರ್ಖ ಗುರುವಿನ ಕುರುವು ನೀನಾದೆ ನೀನಾದೆ ಕುರಿ-ಕೋಳಿ ಕೋಣದ ನೆತ್ತರ ಹರಿಸಿ