Nojoto: Largest Storytelling Platform

ನೀ ಕೊಟ್ಟ ಪ್ರೇಮ ಪಾಷಾಣವ ತಿಂದು ಹೃದಯ ಎಂದೋ ಸತ್ತು ಹೋಗಿತ್

ನೀ ಕೊಟ್ಟ ಪ್ರೇಮ ಪಾಷಾಣವ ತಿಂದು
ಹೃದಯ ಎಂದೋ ಸತ್ತು ಹೋಗಿತ್ತು. 
ಅದಕೆ ಏನೊ ಈ ಬಾರಿ ತಲೆ ಯೋಚಿಸತೊಡಗಿತ್ತು.
ಹೇಗೆ ದ್ವೇಷಿಸಲಿ ಒಮ್ಮೆ ಪ್ರೀತಿಸಿದ ಮೇಲೆ?
ಮತ್ತೇನೂ ತೋಚದೆ ನಾ‌ ಮೌನಿಯಾಗಿಬಿಟ್ಟೆ.. 
ಮನಸ್ಸನು ಕಲ್ಲು ಮಾಡಿಬಿಟ್ಟೆ..

-ನಿಶ್ಯಬ್ದ

(ಕ್ಯಾಪ್ಶನ್ ಓದಿ)               ಕೊಲೆಗಾರನನ್ನೇನೊ ಮಾಡಿಬಿಟ್ಟೆ ನೀನು. ಆದರೆ ಅದಕೆ‌ ಕಾರಣವ ಹುಡುಕಲಾರದೆ ಹೋದೆ ಅಲ್ಲವೇ? ನಾನೋ.. ಹುಚ್ಚನಂತೆ ನಂಬಿದೆ ನಿನ್ನ ಒಲವಿನ ಮುಳ್ಳನ್ನು. ಯಾರಿಗೆ ಗೊತ್ತಿತ್ತು ಹೇಳು ಪ್ರೀತಿಯ ಹೂವಿನ ರಕ್ಷಣೆಗಿದ್ದ ಮುಳ್ಳು ತಿರುಗಿ ಹೂವಿಗೇ ಚುಚ್ಚುವುದು ಎಂದು.
           ನನ್ನದೂ ತಪ್ಪು ಇದೆ. ಹೆಚ್ಚು ಪ್ರೀತಿಸಿದೆನಲ್ಲ, ಯಾರಲ್ಲಿ ಹೇಳಲಿ ಹೇಳು ಮನದೊಳಗಿನ ಗೋಳಾಟವ. ಅದನ್ನು ಕೇಳಲೆಂದು ಬಂದದ್ದು ನಿಶ್ಯಬ್ದವೊಂದೆ, ಅದೂ ಕೂಡ ಒಲ್ಲದ ಮನಸಿಂದ. ಅದನ್ನೇ ಬಾಚಿ ತಬ್ಬಿದೆ ನಾನು ಮೌನಿಯಾಗಿ.
          ಹೌದು. ಕನಸಲೂ ನಿನ್ನನ್ನೇ ಬಯಸುತಿದ್ದವನು ನಾನು. ಮೊದಮೊದಲು ಕಿನ್ನರಿಯಂತೆ ಕಾಡುತಿದ್ದವಳು ಈಗೀಗ ಹೃದಯದೊಳಗೆ ಕೈ ಹಾಕಿ ಗಟ್ಟಿಯಾಗಿ ಹಿಂಡಿದಂತೆ ಭಾಸ. ಒಲವಿನ ಭಾವದಲಿ ಕೈ ಹಿಡಿದು ನಡೆದಾಗಲೆಲ್ಲಾ ಮನದೊಳಗೆ ರೋಮಾಂಚನದ ಮಿಂಚೊಂದು ಹರಿದು ಹೋಗುತಿತ್ತು. ಈಗ ಹಾದಿ ಹಸಿರಾಗಿದ್ದರೂ ನಡೆದರೆ ಉಸಿರು ಕಟ್ಟುತ್ತದೆ ನನಗೆ.
              ಯಾಕಿಷ್ಟು ನಿರ್ಲಕ್ಷ್ಯಿಸಿದೆ ನೀನು ನನ್ನ. ನನಗಾಗಿ ಸಮಯವೇ ಕೊಡದಷ್ಟು ದೊಡ್ಡವಳಾಗಿಬಿಟ್ಟಿದ್ದೆ ನೀನು. ಮಾತುಗಳಿಲ್ಲದೆ ಅದೆಷ್ಟು ದಿನಗಳಾಗಿತ್ತು ಹೇಳು. ಎಲ್ಲದಕೂ ನಿರಾಳವಾಗಿ ಅರ್ಥವಿಲ್ಲದ ಉತ್ತರಗಳನು ನೀನು ನನ್ನೆಡೆಗೆ ಎಸೆದು ಮಾಯವಾಗುತಿದ್ದೆ. ಉಣಿಸಿದ ಕೈ ತುತ್ತಿನ ಘಮಲಿಗಿಂತ ವಿಲಾಸದ ಜೀವನ ನಿನಗೆ ಬೇಕಿತ್ತು. ನನ್ನ ಹೃದಯವೊಂದೇ ದೊಡ್ಡದು ಇನ್ನೇನಿಲ್ಲ ನನ್ನಲ್ಲಿ ಎಂದು ಹೇಳಲಾಗದೆ ಮೌನಿಯಾದೆ.
       ನಿನ್ನ ಮೇಲಿನ ಪ್ರೀತಿಯಿಂದ ತಾನೆ ನಾನು ಒಲವಿನ ಮಳೆಯನು ಸುರಿದದ್ದು. ಅದನು ನಿನ್ನೊಳಗೆ ಇಂಗಿಸದೆ ಹರಿದುಬಿಟ್ಟಯಲ್ಲ. ಹೀಗಾದರೆ ನಾ ಹೇಗೆ ಉಳಿಯುವೆನು ನಿನ್ನಲ್ಲಿ ಹೇಳು. ನೀ ಕೊಟ್ಟ ಪ್ರೇಮ ಪಾಷಾಣವ ತಿಂದು ಹೃದಯ ಎಂದೋ ಸತ್ತು ಹೋಗಿತ್ತು. ಅದಕೆ ಏನೊ ಈ ಬಾರಿ ತಲೆ ಯೋಚಿಸತೊಡಗಿತ್ತು. ಹೇಗೆ ದ್ವೇಷಿಸಲಿ ಒಮ್ಮೆ ಪ್ರೀತಿಸಿದ ಮೇಲೆ? ಮತ್ತೇನೂ ತೋಚದೆ ನಾ‌ ಮೌನಿಯಾಗಿಬಿಟ್ಟೆ.. ಮನಸ್ಸನು ಕಲ್ಲು ಮಾಡಿಬಿಟ್ಟೆ..

#ಅವನು_ಅವಳು #ಮೌನಿ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

vinayahegde9650

Vinaya Hegde

New Creator