Nojoto: Largest Storytelling Platform
vinayahegde9650
  • 474Stories
  • 0Followers
  • 0Love
    0Views

Vinaya Hegde

  • Popular
  • Latest
  • Video
f2547f602e6668249bda6188a173c435

Vinaya Hegde

ಮನ ಸೋತಿದೆ
ನೋಡಿ ನಿನ್ನಯ ಲಜ್ಜೆ

ಅದರ ಗುರುತಲ್ಲವೇ?
ನಾ ಕಟ್ಟಿದ ಕಾಲ್ಗೆಜ್ಜೆ ಲಜ್ಜೆಯಿಂದಲೇ ಹೆಜ್ಜೆಯನಿಟ್ಟಳು, ಗೆಜ್ಜೆಯ ಸದ್ದಿಹುದು‌ ಮನದೊಳಗೆ..!



#ಅವಳು #ಜೋಗಿಕನ್ನಡ #ನಿಶ್ಯಬ್ದ #yqjogi_kannada

ಲಜ್ಜೆಯಿಂದಲೇ ಹೆಜ್ಜೆಯನಿಟ್ಟಳು, ಗೆಜ್ಜೆಯ ಸದ್ದಿಹುದು‌ ಮನದೊಳಗೆ..! #ಅವಳು #ಜೋಗಿಕನ್ನಡ #ನಿಶ್ಯಬ್ದ #yqjogi_kannada

f2547f602e6668249bda6188a173c435

Vinaya Hegde

ನಿನ್ನ‌ ನೆನಪುಗಳ ಹನಿಯೊಂದ
ಹೊರ ಹಾಕುತಲಿರುವಾಗ
ಮತ್ತೆ ಇಂಗಿ ಹೋಯಿತು
ಕೆನ್ನೆಗಳ ಮರುಭೂಮಿಯಲಿ #ನಿಶ್ಯಬ್ದ #ನೆನಪು #ಅವಳು #ಕನ್ನಡ_ಬರಹಗಳು #yqjogi_kannada

#ನಿಶ್ಯಬ್ದ #ನೆನಪು #ಅವಳು #ಕನ್ನಡ_ಬರಹಗಳು #yqjogi_kannada

f2547f602e6668249bda6188a173c435

Vinaya Hegde

ಅಂದುಕೊಂಡಾಗಿತ್ತು
ನೀನೆಂದಿಗೂ ನನ್ನವನಲ್ಲ..

ಕೈ ಹಿಡಿದೆಯಲ್ಲ ಬಿಡದೆ
ಈಗೆಂದಿಗೂ ನೀ ನನ್ನವ ನಲ್ಲ! 
#ನಿಶ್ಯಬ್ದ #ನಲ್ಲ #ಕನ್ನಡ_ಬರಹಗಳು #yqjogi_kannada

#ನಿಶ್ಯಬ್ದ #ನಲ್ಲ #ಕನ್ನಡ_ಬರಹಗಳು #yqjogi_kannada

f2547f602e6668249bda6188a173c435

Vinaya Hegde

ಕುರೂಪಿ..

(ಕಣ್ಣು ಅಡಿಬರಹದೆಡೆಗೆ) ಎರಡನೇ ವರ್ಷದ ಪದವಿ ಕ್ಲಾಸು. ಮಳೆಗಾಲ ಬೇರೆ. ಆಗಷ್ಟೇ ಕಾಲೇಜು ಶುರುವಾಗಿತ್ತು.  ಯಾರೋ ಹೇಳ್ತಾ ಇದ್ರು. "ಹೊಸ ಎಡ್ಮಿಷನ್ ಇದೆಯಂತೆ, ಯಾರೋ ಹುಡುಗಿ" ಅಂತ. ಕಿವಿ ನೆಟ್ಗಾಯ್ತು. ನಮ್ಮ ಗ್ಯಾಂಗ್ ನ ಎಲ್ರೂ ಅವಳಿಗಾಗಿ ಕಾಯ್ತಾ ಇದ್ವಿ. ಅಷ್ಟರಲ್ಲೆ ಬಂದ್ಳು. ತಿರುಗಿ ನೋಡಿದವರೆಲ್ಲರಿಗೂ ನಿರಾಸೆ ಆಗಿದ್ದೆಂತು ನಿಜ.

ಒಳಗಡೆ ಬಂದ್ಲು. ಇಡೀ ಕ್ಲಾಸ್ನಲ್ಲಿ ಪಿಸು ಪಿಸು ಮಾತು ಜೋರಾಯ್ತು. ಮುಂದಿನ‌ ಬೆಂಚಿನ ಹುಡುಗಿಯರಾರು ಸರ್ಕೊಳ್ಲಿಲ್ಲ. ಹಿಂದೆ ಬಂದ್ಲು. ಅಲ್ಲಿ ಸಹ ಹಾಗೆ. ಕೊನೆಯಿಂದ ಮೂರನೆ‌‌ ಬೆಂಚ್ನಲ್ಲಿ ಕುಳ್ತ್ಕೊಂಡ್ಳು. ಎಲ್ಲರ ಕಣ್ಣೂ ಅವಳ ಮೇಲೇನೆ. ನಂದು‌ ಸಹ. ಅವಳಷ್ಟು ವಿಕಾರವಾಗಿರೋವ್ಳನ್ನ ಇಲ್ಲಿವರೆಗೂ ನಾವ್ಯಾರೂ

ಎರಡನೇ ವರ್ಷದ ಪದವಿ ಕ್ಲಾಸು. ಮಳೆಗಾಲ ಬೇರೆ. ಆಗಷ್ಟೇ ಕಾಲೇಜು ಶುರುವಾಗಿತ್ತು. ಯಾರೋ ಹೇಳ್ತಾ ಇದ್ರು. "ಹೊಸ ಎಡ್ಮಿಷನ್ ಇದೆಯಂತೆ, ಯಾರೋ ಹುಡುಗಿ" ಅಂತ. ಕಿವಿ ನೆಟ್ಗಾಯ್ತು. ನಮ್ಮ ಗ್ಯಾಂಗ್ ನ ಎಲ್ರೂ ಅವಳಿಗಾಗಿ ಕಾಯ್ತಾ ಇದ್ವಿ. ಅಷ್ಟರಲ್ಲೆ ಬಂದ್ಳು. ತಿರುಗಿ ನೋಡಿದವರೆಲ್ಲರಿಗೂ ನಿರಾಸೆ ಆಗಿದ್ದೆಂತು ನಿಜ. ಒಳಗಡೆ ಬಂದ್ಲು. ಇಡೀ ಕ್ಲಾಸ್ನಲ್ಲಿ ಪಿಸು ಪಿಸು ಮಾತು ಜೋರಾಯ್ತು. ಮುಂದಿನ‌ ಬೆಂಚಿನ ಹುಡುಗಿಯರಾರು ಸರ್ಕೊಳ್ಲಿಲ್ಲ. ಹಿಂದೆ ಬಂದ್ಲು. ಅಲ್ಲಿ ಸಹ ಹಾಗೆ. ಕೊನೆಯಿಂದ ಮೂರನೆ‌‌ ಬೆಂಚ್ನಲ್ಲಿ ಕುಳ್ತ್ಕೊಂಡ್ಳು. ಎಲ್ಲರ ಕಣ್ಣೂ ಅವಳ ಮೇಲೇನೆ. ನಂದು‌ ಸಹ. ಅವಳಷ್ಟು ವಿಕಾರವಾಗಿರೋವ್ಳನ್ನ ಇಲ್ಲಿವರೆಗೂ ನಾವ್ಯಾರೂ #yqjogi_kannada #ನಿಶ್ಯಬ್ದ #ಕನ್ನಡ_ಬರಹಗಳು #ಕುರೂಪಿ

f2547f602e6668249bda6188a173c435

Vinaya Hegde

ಎಷ್ಟು ಹುಡುಕುವೆ‌ ನೀನು
ಕಂಡವರಲ್ಲಿ ನಿನ್ನ ಖುಷಿಯ

ಹುಡುಕಲೇ.. 
ನೀ ನಿನ್ನೊಳಗೆ, ಅಗೆದಷ್ಟೂ
ಮುಗಿಯದ ನಾನಾ ಬಗೆಯ.. ಸುತ್ತಲೆಲ್ಲ ಕತ್ತಲೆ! ನಮ್ಮೊಳಗೊಂದು ಕಿಡಿ ಹೊತ್ತಿಸುವ ಮೊದಲು..

#ನಿಶ್ಯಬ್ದ #ನಾನು #ಕನ್ನಡ_ಬರಹಗಳು 
#yqjogi_kannada

ಸುತ್ತಲೆಲ್ಲ ಕತ್ತಲೆ! ನಮ್ಮೊಳಗೊಂದು ಕಿಡಿ ಹೊತ್ತಿಸುವ ಮೊದಲು.. #ನಿಶ್ಯಬ್ದ #ನಾನು #ಕನ್ನಡ_ಬರಹಗಳು #yqjogi_kannada

f2547f602e6668249bda6188a173c435

Vinaya Hegde

ಇಲ್ಕೇಳಿ,

ಹತ್ತಕ್ಕೆ ನೂರಂತೆ... ಅವನ ಲೆಕ್ಕದಲ್ಲಿ!

(ಕಣ್ಣು ಅಡಿಬರಹದೆಡೆಗೆ)     ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ.

ಅದೆಲ್ಲ‌ ಇರಲಿ ಬಿಡಿ.

ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ.

ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬಂದ. "ದುಡಿಯೋಕಾಗಲ್ಲ, ನಡೆಯೋಕಾಗಲ್ಲ, ಜೊತೆಗೆ ಸ್ವಲ್ಪ ಕಿವಿನೂ ಕೇಳಲ್ಲ. ನಂಗೆ‌ ಮನೆ ಅಂದ್ರೆ ಬಸ್ಟ್ಯಾಂಡು, ಹೇಳ್ಕೊಳೋಕಷ್ಟೆ ನಾನ್ ಗಂಡು. ಸ್ವಲ್ಪ ಏನಾದ್ರೂ ಸಹಾಯ ಮಾಡ್ರಪ್ಪ" ಅಂದ.

ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ. ಅದೆಲ್ಲ‌ ಇರಲಿ ಬಿಡಿ. ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ. ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬಂದ. "ದುಡಿಯೋಕಾಗಲ್ಲ, ನಡೆಯೋಕಾಗಲ್ಲ, ಜೊತೆಗೆ ಸ್ವಲ್ಪ ಕಿವಿನೂ ಕೇಳಲ್ಲ. ನಂಗೆ‌ ಮನೆ ಅಂದ್ರೆ ಬಸ್ಟ್ಯಾಂಡು, ಹೇಳ್ಕೊಳೋಕಷ್ಟೆ ನಾನ್ ಗಂಡು. ಸ್ವಲ್ಪ ಏನಾದ್ರೂ ಸಹಾಯ ಮಾಡ್ರಪ್ಪ" ಅಂದ. #yqjogi_kannada #ಭಗವಂತ #ನಿಶ್ಯಬ್ದ #ಕನ್ನಡ_ಬರಹಗಳು

f2547f602e6668249bda6188a173c435

Vinaya Hegde

ಕದಿಯುವ ಬಯಕೆ
ಸಿಹಿ ಮುತ್ತೊಂದ
ಆ ಕೆಂಪು ತುಟಿಯಲಿ
ಇತ್ತೀಚೆಗೆ ತಿಳಿಯದೆ 
ನಾನಾಗುತಿರುವೆ 
ನಿನ್ನೆಡೆಗೆ ತುಂಬಾ ಪೋಲಿ.. ಮುತ್ತು ಮತ್ತೆ ಮತ್ತು...💕

#ನಿಶ್ಯಬ್ದ #ಮುತ್ತುಮತ್ತು
 #ಕನ್ನಡ_ಬರಹಗಳು #yqjogi_kannada

ಮುತ್ತು ಮತ್ತೆ ಮತ್ತು...💕 #ನಿಶ್ಯಬ್ದ #ಮುತ್ತುಮತ್ತು #ಕನ್ನಡ_ಬರಹಗಳು #yqjogi_kannada

f2547f602e6668249bda6188a173c435

Vinaya Hegde

ಸ್ವಪ್ನ ಸುಂದರಿ..!

(ಕಣ್ಣು ಅಡಿಬರಹದೆಡೆಗೆ) ಎಲ್ಲಿಂದ ಜಾರಿ ಬಂದ ತಾರೆ‌‌ಯೊ ನೀನು
ಕರಗಿ ಹೋದೆನಲ್ಲ ನೋಡಿ ನಿನ್ನಂದವನ್ನು
ಬೆಣ್ಣೆಯಂತೆ ಹೊಳೆಯುತಿರೆ‌ ನಿನ್ನ ತುಂಬು ಗಲ್ಲ
ಕಚ್ಚುವಾಸೆಯೊಂದು ಮೂಡಿದೆ ನನಗೆ ಮೆಲ್ಲ

ಕೆಂಬಣ್ಣದ‌ ತುಟಿಯಂತೂ ಕೆಂಪು ಚೆರಿ ಹಣ್ಣು
ಅದ‌ ರಸವ ಹೀರುವಾಸೆ ಈ ಮನಕೆ ಇನ್ನೂ
ಕರವ ಬಳಸಿ ಮುದ್ದಿಸಲೇನು ಕೊರಳ ನಾನು

ಎಲ್ಲಿಂದ ಜಾರಿ ಬಂದ ತಾರೆ‌‌ಯೊ ನೀನು ಕರಗಿ ಹೋದೆನಲ್ಲ ನೋಡಿ ನಿನ್ನಂದವನ್ನು ಬೆಣ್ಣೆಯಂತೆ ಹೊಳೆಯುತಿರೆ‌ ನಿನ್ನ ತುಂಬು ಗಲ್ಲ ಕಚ್ಚುವಾಸೆಯೊಂದು ಮೂಡಿದೆ ನನಗೆ ಮೆಲ್ಲ ಕೆಂಬಣ್ಣದ‌ ತುಟಿಯಂತೂ ಕೆಂಪು ಚೆರಿ ಹಣ್ಣು ಅದ‌ ರಸವ ಹೀರುವಾಸೆ ಈ ಮನಕೆ ಇನ್ನೂ ಕರವ ಬಳಸಿ ಮುದ್ದಿಸಲೇನು ಕೊರಳ ನಾನು #erotica #ಅವಳು #yqjogi_kannada #ನಿಶ್ಯಬ್ದ #ಕನ್ನಡ_ಬರಹಗಳು

f2547f602e6668249bda6188a173c435

Vinaya Hegde

ನಾನೊಂದು ತೀರ, ನೀನೊಂದು ತೀರ
ಅನ್ನುವವರ ನಡುವೆ
ಅದಾವ ಪ್ರೀತಿ ಭುವಿ ಮತ್ತು ಬಾನುವಿನದು?

ಬಾನುವಿನ ನೆನಪಲೇ ಆವಿಯಾಗಿ
ಅವನ ಹೃದಯ ಸೇರುವ ಭುವಿ

ಅದೇ ಖುಷಿಯಿಂದ ಮತ್ತೆ ಮಳೆಯಾಗಿ
ಅವಳೊಡಲ ಸೇರುವ ಬಾನು.. ನೋಡೋ ಕಣ್ಣಿಗೆ ಒಂದಾಗದಿದ್ದರೂ... ಪ್ರೀತಿ ಒಂದಾದಂತೆ❣️


#ನಿಶ್ಯಬ್ದ #ಪ್ರೀತಿ #ಕನ್ನಡ_ಬರಹಗಳು #yqjogi_kannada

ನೋಡೋ ಕಣ್ಣಿಗೆ ಒಂದಾಗದಿದ್ದರೂ... ಪ್ರೀತಿ ಒಂದಾದಂತೆ❣️ #ನಿಶ್ಯಬ್ದ #ಪ್ರೀತಿ #ಕನ್ನಡ_ಬರಹಗಳು #yqjogi_kannada

f2547f602e6668249bda6188a173c435

Vinaya Hegde

ತಾನು ಬೇಯಲಾರೆನೆಂದು
ಕುಳಿತಿದ್ದರೆ ಅಕ್ಕಿಕಾಳು
ಎಂದೋ‌ ಮರೆಯಾಗಿರುತ್ತಿತ್ತು.. ಕಷ್ಟಗಳ ಮೆಟ್ಟಿನಿಂತರೆ‌ ಮಾತ್ರ ಇತರರಿಗೆ‌ ಇಷ್ಟವಾಗಲು ಸಾಧ್ಯ.


#ನಿಶ್ಯಬ್ದ #ಕನ್ನಡ_ಬರಹಗಳು 
#yqjogi_kannada

ಕಷ್ಟಗಳ ಮೆಟ್ಟಿನಿಂತರೆ‌ ಮಾತ್ರ ಇತರರಿಗೆ‌ ಇಷ್ಟವಾಗಲು ಸಾಧ್ಯ. #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada

loader
Home
Explore
Events
Notification
Profile