White ಒಂದು ಕೊಳ ಮೊಸಳೆಗಳಿಂದ ತುಂಬಿ ಹೋಗಿತ್ತು. ಆ ಕೊಳಕ್ಕೆ ಧುಮುಕಿ, ಆ ಮೊಸಳೆಗಳಿಂದ ಪಾರಾಗಿ ಮೇಲೆ ಬಂದ ಶೂರನಿಗೆ ಒಂದು ಕೋಟಿ ರೂ.ಗಳ ಬಹುಮಾನ ಘೋಷಣೆಯಾಗಿತ್ತು. ನೂರಾರು ಜನ ಸೇರಿದ್ದರೂ ಯಾರೊಬ್ಬರೂ ಅದಕ್ಕೆ ಧುಮುಕುವ ಧೈರ್ಯ ಮಾಡಿರಲಿಲ್ಲ. ಕೊನೆಗೂ ಒಬ್ಬಾತ ಧುಮುಕಿಯೇ ಬಿಟ್ಟ. ನೆರೆದವರು ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆಯೇ ಆತ ಹೇಗೋ ಈಜಿಕೊಂಡು ದಡ ಸೇರಿಯೇ ಬಿಟ್ಟ. ಎಲ್ಲರೂ ಅವನನ್ನು ಅಭಿನಂದಿಸುವವರೇ..! ಒಂದು ಕೋಟಿ ರೂ.ಗಳ ಬಹುಮಾನ ಸ್ವೀಕರಿಸಿದ ಆತ ಸುತ್ತಲೂ ಕೆಕ್ಕರಿಸುತ್ತಾ ನೋಡಿ,"ಈಗ ಹೇಳಿ...ಯಾರು ನನ್ನನ್ನು ಕೊಳಕ್ಕೆ ತಳ್ಳಿದವರು? ಯಾರೂ ಉತ್ತರಿಸಲಿಲ್ಲ. ಆದರೆ, ಪಕ್ಕದಲ್ಲೇ ನಿಂತ ಆತನ ಪತ್ನಿ ಮುಗುಳು ನಗುತ್ತಿದ್ದುದು ಆತನ ಕಣ್ಣಿಗೆ ಬಿತ್ತು..! ಕಥೆಯ ನೀತಿ: "ಪ್ರತೀ ಯಶಸ್ವೀ ವ್ಯಕ್ತಿಯ ಹಿಂದೆ, ಒಬ್ಬ ಮಹಿಳೆ ಇದ್ದೇ ಇರುತ್ತಾಳೆ...!!!" 😜😛😝 ©DISHU #hasya