ನಾನಿರುವೆನು ವನದಲ್ಲಿ ನನಗಿರುವುದು ಆಸರೆಯಿಲ್ಲಿ ನಾ ಬೆಳೆದ ತಪ್ಪಲು ನಾ ಆಡಿದ ಕವಲು ಕಾಡೀಗ ಯಾರದ್ದು?? ಹಸಿರು ತುಂಬಿದ ಅರಣ್ಯ ಘರ್ಜನೆ ಘೀಲಿಡುವಿಕೆ ಸಾಮಾನ್ಯ ಮರಗಿಡಗಳ ಆಗರ ನಮಗಿದೆ ಅಧಾರ ಕಾಡೀಗ ಯಾರದ್ದು?? ನಿನ್ನದೋ ದುರಂಹಕಾರ ಎಬ್ಬಿಸುವೆ ಹಾಹಾಕಾರ ತುಂಬಿದ ದುರಾಸೆಯ ಕಲಶ ನೀ ಮಾಡುವೆ ಅರಣ್ಯ ನಾಶ ಕಾಡೀಗ ಯಾರದ್ದು?? ನೀ ಕಡಿದರೆ ಕಾಡ ನಾ ನುಗ್ಗುವೆ ನಾಡ ನನ್ನದಾಗಿರಬೇಕು ನನ್ನ ಜನ್ಮ ಸಿದ್ಧ ಹಕ್ಕು ಕಾಡೀಗ ಯಾರದ್ದು?? #ಕಾಡು#yqkannada#yqjogi#savewildlife