Nojoto: Largest Storytelling Platform
suh1182121654722
  • 66Stories
  • 1Followers
  • 0Love
    0Views

Suh

  • Popular
  • Latest
  • Video
7471f7925f37ab634113f5b7d19ad1d9

Suh

ಬರೆದ ಪುಟಗಳ ತಿರುವಲು 
ಎಲ್ಲಿಲ್ಲದ ನಿದ್ದೆ ಆವರಿಸಲು 
ಪ್ರಾರಂಭಿಸಿದ ತರಗತಿಯದು 
ಆಗಿ ಹೋಗಿತ್ತು ಮುಗಿದು

0 Love

7471f7925f37ab634113f5b7d19ad1d9

Suh

ಹರಿವ ನೀರಿನ ದಾರಿ
ಮೇಲೊಂದು ದೋಣಿಯ ಪಯಣ
ಯೋಚನೆಗಳೆಲ್ಲ ಗಾಳಿಗೆ ತೂರಿ
ಸಾಗಬೇಕಿದೆ ಈ ಕ್ಷಣ.  #cinemagraph
7471f7925f37ab634113f5b7d19ad1d9

Suh

ನಡುಗತ್ತಲ ಹಾಯಾದ ನಿದ್ದೆಯಲ್ಲಿ
ಕಾಣಬೇಕಿದ್ದ  ಆ ಸುಂದರ ಕನಸಿಗೆ
ಹಾಜರಿರಬೇಕಿದ್ದ ನಿನ್ನ ಹೆಜ್ಜೆಯೆಲ್ಲಿ?
ಕುಳಿತಿರುವೆನು ಒಬ್ಬನೆ ಮರಳದೆ ನಿದ್ದೆಗೆ.... #love

love

0 Love

7471f7925f37ab634113f5b7d19ad1d9

Suh

ಕನಸೊಂದ ಕಟ್ಟಿ ಕೂತರೇನಂತೆ,  
ಆಗಿಹೋದವುಗಳ ನೆನಪಿಸಿಕೊಂಡರೇನಂತೆ, 
ನಡೆಯುತಿರುವ ಹೆಜ್ಜೆ ದೃಢವಾಗಿರಲಿ
ಪ್ರತಿಕ್ಷಣವು ನಿನದೇ, ಆನಂದಿಸು ಏನೇ ಬರಲಿ.
 #suh #yqjogi #yqbaba #yqjogikannada #yqkannadaquote #yqtales #yqlove
7471f7925f37ab634113f5b7d19ad1d9

Suh

ನಿದ್ದೆ ಬರದಿರಲು ಕಾರಣ 
ಹೊತ್ತುರಿದು ಮನ ಸೇರಿಹುದು ಮಸಣ
ಆದರೂ ಮರೆಯಲಾಗುತಿಲ್ಲ ನಿನ್ನ ಸ್ನೇಹ 
ಮುಳ್ಳಾಗಿ ಚುಚ್ಚಿಹುದು ಈ ವಿರಹ #suh #yqjogi #yqbaba #yqjogikannada #yqkannadaquote #yqtales #yqlove
7471f7925f37ab634113f5b7d19ad1d9

Suh

ನೀನಿದ್ದಾಗ ಆ ನಗುವಿತ್ತು
ನೀನಿಲ್ಲದಾಗ ಆ ನಗು ನೆನಪಾಗುತಿತ್ತು,
ಇದ್ದರೂ ಇಲ್ಲದಿದ್ದರೂ 
ಸಾಗುತಿದೆ ಜೀವನ ಹೇಗಾದರೂ. #suh #yqjogi #yqbaba #yqjogikannada #yqkannadaquote #yqtales #yqlove
7471f7925f37ab634113f5b7d19ad1d9

Suh

ಮಿರಿಮಿರಿ ಮಿಂಚುತಿರುವ
ದೀಪಗಳ ನೋಡಲು ಅಂದ
ಕತ್ತಲಲಿ ಎಲ್ಲ ಮರೆತು
ಹಾಯಾಗಿ ಮಲಗಿರಲು ಚಂದ
 #suh #yqjogi #yqbaba #yqjogikannada #yqkannadaquote #yqtales #yqlove
7471f7925f37ab634113f5b7d19ad1d9

Suh

ಹುಚ್ಚೆದ್ದು ಅಲೆಗಳಂದು ಬರುತಿರಲು
ಮರಳೆತ್ತಿ ಮಗುವೊಂದು ಗಾಳಿಗೆಸೆದಿರಲು
ಜೋಡಿಹಕ್ಕಿಗಳವು ಸ್ವತಂತ್ರವಾಗಿ ಹಾರುತಿರಲು
ಕೆಂಪೆದ್ದು ತಣ್ಣಗೆ ಅಲ್ಲಂದು ಸೂರ್ಯಾಸ್ತವಾಗಿರಲು  ##suh #yqjogi #yqbaba #yqjogikannada #yqkannadaquote #yqtales #yqlove #cinemagraph
7471f7925f37ab634113f5b7d19ad1d9

Suh

ಅಲ್ಲೊಬ್ಬನಿಗೆ ಸಮುದ್ರ ತಳ ಕಂಡು
ಮತ್ತೆ ಆಳವರಿಯುವ ತವಕ;
ಅದೇ ಮೇಲೆ ಬರಿ ಅಲೆಯ ಕಂಡು
ಕೆಲಕಾಲ ಈಜಿ ಹಿಂದಿರುಗಿದಾಗ ಯುವಕ #suh #yqjogi #yqbaba #yqjogikannada #yqkannadaquote #yqtales #yqlove
7471f7925f37ab634113f5b7d19ad1d9

Suh

ಕಳೆದು ಹೋದ ಜೀವನವ
ಕಳೆದು ಕೂಡಿಸಿ ಬರೆಯುವಾಸೆ
ಮುಂಬರುವ  ನಾಳೆಯ ತಿರುವ
ಗುಣಿಸಿ ಭಾಗಿಸಿ ಜೀವಿಸುವಾಸೆ. #suh #yqjogi #yqbaba #yqjogikannada #yqkannadaquote #yqtales #yqlove
loader
Home
Explore
Events
Notification
Profile