ಹೊರಟಿರುವೆ ಬಂದ ಹಾದಿ ಹಿಡಿದು ಸಿಹಿ ಕನಸ ಹೊತ್ತ ಮನದಲ್ಲೀಗ ಮೌನದ ರೋದನ ಖುಷಿಯಲಿ ಕುಣಿದ ಮನದಲ್ಲೀಗ ಕೀಲುಗಳು ಮುರಿದಂತೆ ಸುಖವೋ ದುಃಖವೋ ಅರಿಯದಂತೆ ದುಗುಡವೇ ತುಂಬಿ ಚೆಲ್ಲಿದೆ ಸಿಹಿ ಕೊಡದ ನೀರು ವ್ಯರ್ಥವಾದಂತೆ ನಗುಮೊಗದ ಹಿಂದಿನ ಮುಖವಾಡ ಮರೆಯಾಗಲಿಲ್ಲ ಅರಿಯುವ ಕ್ಷಣದಲಿ ಅರೆಗಳಿಗೆಯಲೂ ಮುಖವಾಡದ ಮೊಗದಲಿ ನಗುವಿನ ಸಿಹಿಯಿರಲಿಲ್ಲ ಮತ್ತೆ ಬೇಡುವೆ ಮುಂದೊಂದು ಕ್ಷಣ ಎದುರಾದರೆ ಮುಖವಾಡದ ಮೊಗದ ತುಂಬ ಸಿಹಿ ನಗುವೆ ತುಂಬಿರಲಿ ಕಂಗಳಲಿ ಆನಂದಭಾಷ್ಪ ಜಿನುಗುತಿರಲಿ ಹೊರಟಿರುವೆ ಬಂದ ಹಾದಿ ಹಿಡಿದು ಮತ್ತೆ ಮರಳದ ಬೀದಿಗೆ.. ಹೊರಟಿರುವೆ ಬಂದ ಹಾದಿ ಹಿಡಿದು #ಜಗವಿಮೋಚಕ #yqdvkrddots #yqjogi_kannada #yqpoems #yqkannadapoems #ಕನ್ನಡ_ಬರಹಗಳು