Nojoto: Largest Storytelling Platform

ನಾ ಬರೆವ ಕವನಗಳಲಿ ಅಡಗಿರುವ ಪದಗಳ ಅರ್ಥ ನನಗೇ ಸಿಗದು ಒಮ್ಮೊ

ನಾ ಬರೆವ ಕವನಗಳಲಿ
ಅಡಗಿರುವ ಪದಗಳ
ಅರ್ಥ ನನಗೇ ಸಿಗದು ಒಮ್ಮೊಮ್ಮೆ
ಸಿಹಿ ಕಹಿಯ ಬೆರೆತ ಸಾಲುಗಳು
ನಗು ಅಳುವಿನ ಜೊತೆಗಾರರು
ಹಾಗೊಮ್ಮೆ ಹೀಗೊಮ್ಮೆ 
ನಸುನಾಚಿ ನನ್ನೊಮ್ಮೆ
ನಗಿಸಿ ಅಳಿಸುವವು 
ನಾ ಬೆರೆದ ಪದಗಳು
ಒಲವಿನೊಳಗೆ ನಾನಿರುವೆ
ನನ್ನೊಳಗೆ ಒಲವಿದೆ
ನಗುನಗುತ ನಾ ಬರೆವೆ
ಸೋತ ಮನದ ಸಾಲುಗಳ
ಬದಲಾವಣೆಯ ಹಾದಿ ಬಯಸಲಾರೆ
ನೋವಿನೊಳಗೂ ಮುಗುಳು ನಗುತ
ಹೀಗೆ ಸಾಗಿಸುವೆ ನನ್ನ ಪಯಣ
ಅರ್ಥ ತುಂಬುತ ನಾ 
ಕಲಿತ ಪದಗಳಲಿ ಬೆರೆತು ಹೋಗುತ.....!! ಜೀವನದ ಸುಗಮ ದಾರಿ ಬಂದಂತೆ ಸಾಗುವದು...
#ಜೀವನಸಲಹೆ #ಜೀವನಸತ್ಯ #ಜೀವನಪಾಠ #yqಜೀವಭಾವ #yqkannadaquotes #krantadarshikanti
ನಾ ಬರೆವ ಕವನಗಳಲಿ
ಅಡಗಿರುವ ಪದಗಳ
ಅರ್ಥ ನನಗೇ ಸಿಗದು ಒಮ್ಮೊಮ್ಮೆ
ಸಿಹಿ ಕಹಿಯ ಬೆರೆತ ಸಾಲುಗಳು
ನಗು ಅಳುವಿನ ಜೊತೆಗಾರರು
ಹಾಗೊಮ್ಮೆ ಹೀಗೊಮ್ಮೆ 
ನಸುನಾಚಿ ನನ್ನೊಮ್ಮೆ
ನಗಿಸಿ ಅಳಿಸುವವು 
ನಾ ಬೆರೆದ ಪದಗಳು
ಒಲವಿನೊಳಗೆ ನಾನಿರುವೆ
ನನ್ನೊಳಗೆ ಒಲವಿದೆ
ನಗುನಗುತ ನಾ ಬರೆವೆ
ಸೋತ ಮನದ ಸಾಲುಗಳ
ಬದಲಾವಣೆಯ ಹಾದಿ ಬಯಸಲಾರೆ
ನೋವಿನೊಳಗೂ ಮುಗುಳು ನಗುತ
ಹೀಗೆ ಸಾಗಿಸುವೆ ನನ್ನ ಪಯಣ
ಅರ್ಥ ತುಂಬುತ ನಾ 
ಕಲಿತ ಪದಗಳಲಿ ಬೆರೆತು ಹೋಗುತ.....!! ಜೀವನದ ಸುಗಮ ದಾರಿ ಬಂದಂತೆ ಸಾಗುವದು...
#ಜೀವನಸಲಹೆ #ಜೀವನಸತ್ಯ #ಜೀವನಪಾಠ #yqಜೀವಭಾವ #yqkannadaquotes #krantadarshikanti