ಹಸಿರು ನೀನು ಉಸಿರು ನೀನು ಬದುಕ ಬಾಂಧವ್ಯ ನೀನು!! ಮುಂಜಾನೆ ಉದಯಿಸುವ ರವಿಯಿಂದ ಮುಸ್ಸಂಜೆ ತಂಪನೀಯುವ ಶಶಿಯವರೆಗೂ ಪ್ರಕೃತಿಯದೆ ಸರಸ ಸಲ್ಲಾಪ!! ನೆನಪಾದಾಗ ವಾಯುಪುತ್ರನ ಆರ್ಭಟ ಸಿಡಿದೆದ್ದಾಗ ಅಗ್ನಿದೇವನ ಆಕ್ರೋಶ ಎಲ್ಲರನ್ನೂ ಸಲಹಿ ಸಹಿಸುವ ಸಹನಾಧರಿತ್ರಿ!! ಪದಗಳೆಷ್ಟೋ ಸಾಲವು ಬಣ್ಣಿಸಲು ಈ ಸುಂದರ ಸೊಬಗನು ಅಕ್ಷಿಗೆ ಮೆರಗು ಪ್ರಕೃತಿಯ ಬೆಡಗು!! ಗಗನ ಚುಂಬಿ ಕಟ್ಟಡಗಳ ಮಧ್ಯೆ ಕರಿಯ ಸೊಬಗಿನ ಹೊಗೆಯ ನಡುವೆ ರಾರಾಜಿಸುತಿರುವಳು ಪ್ರಕೃತಿ ಮಾತೆ!! ಮೌನ,ಆಕ್ರೋಶ,ಆರ್ಭಟ,ಹಾಹಾಕಾರಗಳಿದ್ದರೂ ಸಹನೆ,ಪ್ರೀತಿ,ಮಮತೆ ತುಂಬಿ ಸಲಹುತಿರುವ ಮಾಯಾಮಾತೆಗೊಂದು ನಮನ!! ಮನೆ ಮಹಡಿ ಮೇಲ್ ಬಂದೆ. ಈ ಎಳೆ ಬಿಸ್ಲು, ಸುತ್ತಮುತ್ತ ಇರೋ ಮರ ಗಿಡ, ಹಕ್ಕಿ ಕಲರವ, ತಂಪಾದ ಗಾಳಿ, ತೇಲುವ ಮೋಡ ಎಲ್ಲಾ ಮುದ ಕೊಡ್ತಿದೆ. ಪ್ರಕೃತಿಯೆ ನಿನಗೊಂದು ನಮನ. ಪ್ರಕೃತಿಯ ಸೌಂದರ್ಯ ಸವಿಯೋಕೆ ಕಾಡಿಗೇ ಹೋಗ್ಬೇಕು ಅಂತಿಲ್ಲ, ನಮ್ ಸುತ್ತಲೂ ಇದೆ, ಹಾಗೆ ಅದನ್ನ ಉಳ್ಸ್ಕೋಬೇಕು ಅನ್ನೋ ಭಾವ್ನೆನೂ ಬರ್ತಿದೆ. ಆದಷ್ಟು ಮಾಲಿನ್ಯ ಕಮ್ಮಿ ಮಾಡೋಣ. #ಪ್ರಕೃತಿ ಈ #collab ಸವಾಲಿನ ವಿಶೇಷ hashtag.