Nojoto: Largest Storytelling Platform
hemasweetyh8206
  • 67Stories
  • 281Followers
  • 1.4KLove
    1.6LacViews

Manassumeena

  • Popular
  • Latest
  • Video
04be2274b933e3ed7ceb2661c3dfc533

Manassumeena

ಅಬಾಬಿ...✍🏻
ಕಂಡುಕಡೆಯಲ್ಲ ಹೊತ್ತು ನಿನ್ನ ಸುತ್ತಿದೆ
ಬರಿಗಾಲ ನಿನ್ನ ಮನಸಿಗೆ ನೋವು ಮಾಡದೇ
ರಕ್ಷಣೆಯ ಹೊಣೆಗಾರಿಕೆ ನನ್ನದೇ
ಮೀನಾ...
ನೀವಿಟ್ಟ ನನ್ನ ಹೆಸರೇ ಪಾದುರಕ್ಷೆ.

©Manassumeena
  #KannadaAbabi
04be2274b933e3ed7ceb2661c3dfc533

Manassumeena

tea quotes  ಚಳಿಗೆ ನಾ ಕಂಪಿಸುವಾಗ   
ನೀ ಚುಂಬಿಸಿದೆ ಕಾಫಿ
ಸಿಳು ತುಟಿಗಳು ತುಸು ನಾಚಿದವು 
ಓ ನನ್ನ ಪ್ರೀತಿಯ ಕಾಫಿ
ನಿನ್ನ ಸ್ಪರ್ಶಕ್ಕೆ ಹ್ಯಾಪಿ.

©Manassumeena
  #love of Coffee

love of Coffee #Shayari

04be2274b933e3ed7ceb2661c3dfc533

Manassumeena

ಅಬಾಬಿ..... ✍🏻
ಊರೂರು ಸುತ್ತಿ
ನಿನಗೆ ಮಾಡಿದೆ ನೈವೇದ್ಯ ಆರತಿ
ಆದರೂ ನಿನ್ನ ದರ್ಶನ ಬರೀ ಕಲ್ಲು ಮೂರುತಿ 
ಮೀನಾ...
ತಂದೆ ತಾಯಿಯೇ ದೇವರು ನಿಜ ಸಂಗತಿ.

©Manassumeena
  #God #kannadaAbabi
04be2274b933e3ed7ceb2661c3dfc533

Manassumeena

ಹಂಗು ತೊರೆದಿವೆ,
ನಿನ್ನೊಡುವ ಹಸಿವಿಗೆ
ಹಂಬಲಿಸಿದ ನಯನಗಳು..!!
ದೂರಾಗಿ ಹಿಂದುಳಿದಿವೆ,
ನೀ ಹಾದೊಗುವ ಹಾದಿಯಿಂದ
ಹೇಳದೆ ಕಾರಣಗಳು..!!

©Manassumeena
  #girl
04be2274b933e3ed7ceb2661c3dfc533

Manassumeena

ದಿನ ಎದುರಾಗುವ ತುರುವಿನಲಿ
ನಿಂತು ನಿನಗಾಗಿ ಹಿಂತಿರುಗಿ ನೋಡಿದಾಗ
ಉಂಟಾಗುವ ನಿರಾಶೆಯೂ
ಹುಣ್ಣಿಮೆಗೊಮ್ಮೆ ಭರವಶೆ ಕೊಟ್ಟಾಗ
ಹಲವು ದಿನದ ನಯನಗಳ
ಹಸಿವಾದರೂ ನಿಗಿತು ಮತ್ತೊಂದಿಷ್ಟು  ದಿನಗಳು ಬದುಕುಳಿಯಲು ನಿನ್ನ ನೋಡಿದಾಗ .....

©Manassumeena
  #kannadapoem
04be2274b933e3ed7ceb2661c3dfc533

Manassumeena

 ಬೆಟ್ಟದ ಹೂವು..🌼🌺

ಸಾವಿರ ಸಾವಿರ ಮನವು 
ನಗಿಸಿ  ಅರಳಿಸಿದ ಆ ಮೊಗವು
ಕೋಟಿಯ ಒಡೆಯನು,
ಒಳ್ಳೆತನವನಷ್ಟೇ ಮೈ ಗುಡಿಸಿಕೊಂಡವನು
ಸದಾ ಸರಳತೆಯ ಹಾದಿಯಲಿ ಮೆರೆದವನು
ತೋರಲಿಲ್ಲವೆಂದು ಕಿಂಚಿತ ದರ್ಪವು 
ಪ್ರೀತಿ,ಮಮತೆ ಹೊತ್ತ ಬೆಟ್ಟದ ಹೂವು
ಬಾಡಿ ಹೋಯಿತು,ಎಲ್ಲೆಡೆ ಬರಿ ನೋವು
ನಾಡೆಲ್ಲ ನಡುಗಿಸಿತು,ಸುದ್ದಿ ಮಾಡಿದ ಸಾವು
ಕೈ ಮುಗಿಯಲು ಇನ್ನೆಲ್ಲಿ ಆ ದೇವ್ರು
ಮರಿಯಲಾದಿತೇ ನಿಮ್ಮನ್ನ ಅಪ್ಪು ನಾವು...😭

©Manassumeena
  #kannadapoem
#miss you APPU sir 😔❤️

#kannadapoem #miss you APPU sir 😔❤️ #Poetry

04be2274b933e3ed7ceb2661c3dfc533

Manassumeena

ಚಿಕ್ಕದಾದ ಬದುಕಿಗೆ
ದೊಡ್ಡ ಕನಸುಗಳು ಬಹಳಷ್ಟಿವೆ.
ಅಪರಾಧಗಳ ಬಗ್ಗೆ ಗೊತ್ತಿಲ್ಲ 
ಆದರೆ ಆರೋಪಗಳು ಸಾಕಷ್ಟಿವೆ..
-ಗುಲ್ಜಾರ್ 
-ಕನ್ನಡಕ್ಕೆ : ಮೀನಾ ಓಲೇಕಾರ.

©Manassumeena
  #kannadaquotes
04be2274b933e3ed7ceb2661c3dfc533

Manassumeena

ಅಬಾಬಿ...✍🏻
ನಾಲ್ಕು ದಿನದ ಬಾಡಿಗೆಯ
ಬದುಕಿನ ನೆಂಟರು ನಾವು
ಕರೆ ಕೊಟ್ಟಾಗ ಸಾವು
ಮೀನಾ...
ಬಿಟ್ಟೆಲ್ಲವನ್ನು ಹೊರಡಲೇಬೇಕಾಗ.

©Manassumeena
  #kannadaAbabi
04be2274b933e3ed7ceb2661c3dfc533

Manassumeena

ಅಬಾಬಿ...✍🏻
ನಿನ್ನ ನನ್ನ ನಡುವಲ್ಲಿದೆ,
ತುಂಬ ದೂರದ ಅಂತರ
ಆದರು,ಯಾರಿಲ್ಲ ನಿನ್ನಷ್ಟು ನನಗೆ ಹತ್ತಿರ
ಮೀನಾ...
ನೀನೇ ನನ್ನೊಲವಿನ ಬಾಳ ಚಂದಿರ.

©Manassumeena
  #kannadaAbabi
04be2274b933e3ed7ceb2661c3dfc533

Manassumeena

ಅಬಾಬಿ.... ✍🏻
ಬದುಕೊಂದು ಬಯಲಾಟದ
ರಂಗಮಂಚ ಹೊತ್ತ ಹೊತ್ತಿಗೆ
ಬಣ್ಣ ಬದಲಾಯಿಸಿ ನಟಿಸುವವರೆಲ್ಲ
ಮೀನಾ...
ಮುಖವಾಡಗಳ ಮಧ್ಯೆ ಎಚ್ಚರದಿಂದಿರಬೇಕು.

©Manassumeena
  #kannadaAbabi qoutes
loader
Home
Explore
Events
Notification
Profile