Nojoto: Largest Storytelling Platform
b8246731750735
  • 91Stories
  • 245Followers
  • 754Love
    0Views

ಭೀಮ ಕನಸು.

kudligi

WWW.HMB.COM

  • Popular
  • Latest
  • Video
0ed7848bb6b79ffd249802156dd99ba7

ಭೀಮ ಕನಸು.

ನವಮಾಸ ಒಡಲೊಳಗೆ ಬಚ್ಚಿಟ್ಟೆ
ಉಸಿರು ವ್ಯಯಿಸಿ ಜನುಮವ ಕೊಟ್ಟೆ
ಹೊತ್ತು ಹೊತ್ತಿಗೆ ತುತ್ತನೀಡಿ,ಮುತ್ತನಿಟ್ಟೆ
ಲಾಲಿಹಾಡಿ ವಾತ್ಸಲ್ಯದ ಒಲವನ್ನ ಎದೆಯಲಿಟ್ಟೆ.

ತನ್ಮನದ ತುಂಬೆಲ್ಲ ನಲ್ಮೆಯಶರಧಿ ಸುರಿದೆ
ತನ್ನ ಹಸಿವು ಬಚ್ಚಿಟ್ಟು ನನ್ನ ಹಸಿವು ತಣಿಸಿದೆ
ಎಷ್ಟೇ ತಪ್ಪೆಸಗಿದರು ಕ್ಷಮಯಾಧರಿತ್ರಿಯಾದೆ
ಇರುಳ ಬದುಕಿಗೆ ಭರವಸೆ ಕಂದೀಲು ನೀನಾದೆ.

ದುಃಖ,ನೋವಿನೊಳಗೂ ನಗುವನ್ನ ಬೀರಿ
ನೊಂದ,ಬೆಂದ ಬದುಕಿಗೆ ಬಂಧವ ತೋರಿ
ಮಗುವಾಗಿ ಮುದ್ದು ಮಾಡಿದೆ ಮನ್ಸಾರಿ
ಬದುಕಲೊಹಿಸಿದೆ ನನ್ನದೇ  ಜವಾಬ್ದಾರಿ.

ಜನ್ಮಭಿಕ್ಷೆಯನ್ನ ನೂರುಜನ್ಮಕು ತೀರಿಸಲಾಗದು.
ತೋರಿದ ಪ್ರೀತಿ ಆಲದನೆರಳಿಗೆ ಬೆಲೆತರಲಾಗದು.
ಮತ್ತೇನಿಲ್ಲ ಹೆತ್ತದೈವವನ್ನ ಅನುದಿನ ಜಪಿಸುವುದು.
 ದೇವರ ಪಾದಕೆ  ಭಕ್ತಿಯಿಂದ ನಮಸ್ಕರಿಸುವುದು #NojotoQuote #ಅಮ್ಮ

#ಅಮ್ಮ

0ed7848bb6b79ffd249802156dd99ba7

ಭೀಮ ಕನಸು.

ಬುದ್ಧನೆಂದರೇ ನನ್ನಂತಹ ಶುದ್ಧ
 ದಡ್ಡನಿಂದ ಹಿಡಿದು,
ದೇವ ಮಾನವರಿಗೂ ಜ್ಞಾನದ ಬೆಳಕು ನೀಡಿದ
ಮಹಾನ್ ಗುರು. #NojotoQuote ಬುದ್ಧ ಪೂರ್ಣಿಮಾ

ಬುದ್ಧ ಪೂರ್ಣಿಮಾ

0ed7848bb6b79ffd249802156dd99ba7

ಭೀಮ ಕನಸು.

ಬುದ್ದನೆಂದರೇ
ನನ್ನಂತಹ ಶುದ್ಧ ದಡ್ಡನಿಂದ ಹಿಡಿದು
ದೇವ ಮಾನವರಿಗೂ, 
ಜ್ಞಾನದ ಬೆಳಕು ನೀಡಿದ 
ಮಹಾನ್ ಗುರು. #NojotoQuote #ಬುದ್ಧ ಪೂರ್ಣಿಮಾ

#ಬುದ್ಧ ಪೂರ್ಣಿಮಾ

0ed7848bb6b79ffd249802156dd99ba7

ಭೀಮ ಕನಸು.

ಅಪ್ಪ ಅಂದು,
ನಸುಕಲೇ ನೇಗಿಲು ಹಿಡಿದು,
ತುದಿ ಬೆರಳುಗಳಲಿ
ಬೆವರ ತೀಡುತ,
ಉಸಿರಿಗೂ ಸಮಯ ನೀಡದೆ 
ಶ್ರಮಿಸಿದ್ದರಿಂದಲೇ
ನಾ ವಿಶ್ರಮಿಸುತ್ತಿದ್ದೇನೆ. #NojotoQuote #ಅಪ್ಪನ_ಶ್ರಮ

#ಅಪ್ಪನ_ಶ್ರಮ

0ed7848bb6b79ffd249802156dd99ba7

ಭೀಮ ಕನಸು.

ಅಪ್ಪ ಅಂದು,
ನಸುಕಲೇ ನೇಗಿಲು ಹಿಡಿದು,
ತುದಿ ಬೆರಳುಗಳಲಿ
ಬೆವರ ತೀಡುತ,
ಉಸಿರಿಗೂ ಸಮಯ ನೀಡದೆ 
ಶ್ರಮಿಸಿದ್ದರಿಂದಲೇ
ನಾ ವಿಶ್ರಮಿಸುತ್ತಿದ್ದೇನೆ. #NojotoQuote #ಅಪ್ಪನ_ಶ್ರಮ

#ಅಪ್ಪನ_ಶ್ರಮ

0ed7848bb6b79ffd249802156dd99ba7

ಭೀಮ ಕನಸು.

ಬಿರಿದ ಹೂವೇ ಬೇಸರಗೊಂಡರೆ,
ಮುಡಿದ ಮೂಡಿಗೆ
ಸೊಬಗಾದರೂ ಹೇಗೆ
ದೊರಕೀತು.
 #NojotoQuote

0ed7848bb6b79ffd249802156dd99ba7

ಭೀಮ ಕನಸು.

ಬದುಕು ನಾಕ್ದಿನ ಅಂತ ಗೊತ್ತಿದ್ದರು,
ಮನುಷ್ಯ ತನ್ನೆದೆಯಲ್ಲಿ 
ವಿಷ ತುಂಬಿಕೊಳ್ಳುವುದ ಮಾತ್ರ ಬಿಡುತ್ತಿಲ್ಲ. #gif ಬದುಕು

ಬದುಕು #Gif

0ed7848bb6b79ffd249802156dd99ba7

ಭೀಮ ಕನಸು.

ಬದುಕುವುದ ಕಲಿಯೋಣ ಬಾ.

ಕಪಟವಂಚನೆಗಳ ತ್ಯಜಿಸಿ
ಕಟ್ಟುನಿಟ್ಟಿನ ನಿಯಮ ಪಾಲಿಸಿ
ಜೊತೆಯಾದವರಿಗೆ ಒಲವುಣಿಸಿ
ಹಿತಶತ್ರುಗಳಿಗೂ ಶುಭವ ಹರಸಿ
ಬದುಕುವುದ ಕಲಿಯೋಣ ಬಾ.

ಅಕ್ಕರೆಯ ಸಕ್ಕರೆಯ ಎರೆದು
ಸಾಮರಸ್ಯದ ಅಕ್ಷರವ ಬರೆದು
ಹಸುವಿನಂತೆಯೇ ಹಾಲನೆರೆದು
ಆಪ್ತರೊಂದಿಗೆ ಒಳಿತು ಸವೆದು
ಬದುಕುವುದ ಕಲಿಯೋಣ ಬಾ.

ವಿಷದ ಎದೆಗೂ ಹೂವ ಸುರಿದು
ದ್ವೇಷ-ಅಸೂಯೆ ಗಿಡವ ಮುರಿದು
ಪ್ರೇಮವೆಂಬ ಅಮೃತವ ಸವಿದು
ಜಗದ ಕತ್ತಲಿಗೆ ಬೆಳಕು ಸುರಿದು
ಬದುಕುವುದ ಕಲಿಯೋಣ ಬಾ.

ಮೂಕ ಮನಗಳಿಗೆ ದನಿಗೂಡಿಸಿ
ಕನಸುಗಳಿಗೆ ರೆಕ್ಕೆಗಳ ತೊಡಿಸಿ
ಕರದಲಾದ ಸಹಾಯ ಭರಿಸಿ
ನಾಡಿಗಾದ ಅಪಾಯವ ಅಳಿಸಿ
ಬದುಕುವುದ ಕಲಿಯೋಣ ಬಾ..... #NojotoQuote ಬದುಕುವುದ ಕಲಿಯೋಣ ಬಾ

ಬದುಕುವುದ ಕಲಿಯೋಣ ಬಾ

0ed7848bb6b79ffd249802156dd99ba7

ಭೀಮ ಕನಸು.

ಬದುಕು ಈ ಮಟ್ಟಕ್ಕೆ ಬಂದು 
ತಲುಪಿಬಿಟ್ಟಿತಲ್ಲ ಎಂದು ಕೊರಗಬೇಡ,
ದೇವರಿಟ್ಟ ಅಷ್ಟೂ ಪರೀಕ್ಷೆಗಳಲ್ಲಿ
ನೀ ಸೋತಿಲ್ಲ ಎಂದರ್ಥ. #NojotoQuote ಬದುಕು

ಬದುಕು

0ed7848bb6b79ffd249802156dd99ba7

ಭೀಮ ಕನಸು.

ಕತ್ತಿ ಹಿಡಿದು ನೆತ್ತರ ಹರಿಸಿದ
ಕಠೋರ ಹೃದಯಗಳನ್ನ,
ಗುಲಾಬಿ
 ಹಿಡಿಯುವಂತೆ ಮಾಡಿದ್ದೆ
ಮೋಹಗೊಳಿಸಿದ
"ಪ್ರೇಮ" #NojotoQuote

loader
Home
Explore
Events
Notification
Profile