Nojoto: Largest Storytelling Platform
netrapatil3856
  • 306Stories
  • 0Followers
  • 0Love
    0Views

Netra Patil

  • Popular
  • Latest
  • Video
1c2e83ec1d9f55d1f57c42a29b5a24fc

Netra Patil

ಬಿಡುಗಡೆ ಅಂತರ ಬಂದ ಮೇಲೆ,
ಮನಸ್ಸು ಮತ್ತೆ ಸೇರಲು ಹಿಂದೇಟು ಹಾಕುತ್ತದೆ..
ಯೋಚಿಸಿ ತೆಗೆದುಕೊಳ್ಳುವ ನಿರ್ಧಾರ
ಮಹತ್ವವೆನಿಸಿಕೊಳ್ಳುತ್ತದೆ. ನೂರು ಬಾರಿ
ಯೋಚಿಸುವ ಅಗತ್ಯವಿದೆ.
ಬಿಡುಗಡೆ ಬೇಡಿ ಮತ್ತೆ ಸೇರಲು ಮನಸ್ಸು ಹಿಂದೇಟು
ಹಾಕುವ ಮೊದಲು ಎಲ್ಲವನ್ನೂ ಮುಕ್ತವಾಗಿ ಚರ್ಚಿಸಿ... ಮತ್ತೆ ಹತ್ತಿರ ಹೋಗಲು.

#ನೂರುಬಾರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮತ್ತೆ ಹತ್ತಿರ ಹೋಗಲು. #ನೂರುಬಾರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

1c2e83ec1d9f55d1f57c42a29b5a24fc

Netra Patil

ನೂತನ ಭರವಸೆ ಕನಸುಗಳು, ಹೊಸ ಭರವಸೆಗಳನ್ನು 
ಬೆನ್ನತ್ತಿ ಧೈರ್ಯವಾಗಿ ಗುರಿ ತಲುಪಲು, 
ಸಹಾಯ ಮಾಡುತ್ತವೆ. ಬದುಕಿನಲ್ಲಿ ಸಾಗುವ ನೂರಾರು,
ಹೆಜ್ಜೆಗಳು ನಮ್ಮ ಜೀವನದ ಪಯಣದಲಿ ದಿಕ್ಕನ್ನೇ 
ಬದಲಿಸುವ ಶಕ್ತಿಯನ್ನು ಹೊಂದಿರುತ್ತವೆ... 
ದಿಕ್ಕು ಹಾಗೂ ಹೆಜ್ಜೆಗಳ ಮೇಲೆ ಗಮನವಿರಲಿ...
ಗುರಿ ಹಾಗೂ ಕನಸು ನೇರವಾಗಿ,
ಧ್ಯೇಯ ತಲುಪುವ ದಾರಿಯಾಗಿ ಆಯ್ಕೆಯಾಗಿರಲಿ..
ಸಮಯ ಹಾಗೂ ನಿರಂತರ ಸತತ ಪ್ರಯತ್ನ 
ಗುರಿಯೆಡೆಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ.... ಹಳೆ ಸೋಲನ್ನು ಮರೆಸಿದೆ.

#ಹೊಸಭರವಸೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹಳೆ ಸೋಲನ್ನು ಮರೆಸಿದೆ. #ಹೊಸಭರವಸೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

1c2e83ec1d9f55d1f57c42a29b5a24fc

Netra Patil

ಭಾವನೆಗಳು ಕೆಲವೊಮ್ಮೆ ಮನಸಿಗೆ ಭಾರವೆನಿಸುತ್ತವೆ.
ಕಂಬನಿಯ ಒಡಲು ತುಂಬಿ ಬಂದಾಗ ಹೃದಯ ಬಡಿತ
ಒಂದು ಕ್ಷಣ ನಿಂತಂತೆ ಭಾಸವಾಗುತ್ತದೆ.. 
ಖುಷಿಯೂ ಸಂತೋಷದ ಕ್ಷಣಗಳು ನಮ್ಮನ್ನು 
ಯಾವಾಗಲೂ ನಿರಾಳ ಭಾವದ ಜೊತೆ ಹೊಸ
ಆಶಾಕಿರಣದೊಂದಿಗೆ ಮುನ್ನಡೆಯತ್ತ
ಸಾಗಲು ಪ್ರೇರೇಪಿಸುತ್ತದೆ.
ದುಃಖವು ನೋವಿನ ಮಡಿಲನ್ನು ತುಂಬಿಸುತ್ತದೆ
ಹಗಲು ರಾತ್ರಿಗಳು ಬೇಕು
ಕಷ್ಟ ನೋವು ಸುಖ ಎಲ್ಲದರ ಜೊತೆ 
ಜೀವನ ಸಾಗುತಿರಬೇಕು...

0 Love

1c2e83ec1d9f55d1f57c42a29b5a24fc

Netra Patil

ನೂರಾರು ಮಾತುಗಳು ಹೇಳದೆ ನನ್ನಲ್ಲಿ ಉಳಿದಿವೆ,
ನೀನೆಂದು ನನ್ನ ಅರಿಯಲು ಅರ್ಥೈಸಲು ಪ್ರಯತ್ನಿಸಲಿಲ್ಲ.
ನನ್ನ ಪ್ರೀತಿಯು ನಿನಗೆ ಭಾರವಾಗಿದೆಯೆಂದು ತಿಳಿದಿದೆ,
ನಿನ್ನ ಮನದ ಆಸೆಯಂತೆ ನಾನೂ ದೂರ ನಡೆದಿರುವೆ!
ನಿನ್ನ ನಿರೀಕ್ಷೆಯಲ್ಲಿ ಭಾವನೆಗಳೂ ಸಹ ಜೀವ ಕಳೆದಕೊಂಡಿವೆ..
ಯಾರಿಗೂ ನಿನ್ನಿಂದ ಉತ್ತರ ದೊರೆಯದು...
ನನ್ನ ತಪ್ಪೇನಿದೆ, ಹೇಳು... ನಿನ್ನ ನೀನು 
ವಿಮರ್ಶೆ ಮಾಡಿ ನೋಡು ಸತ್ಯ ತಿಳಿಯಬಹುದು!
ತಪ್ಪಿಗೆ ಶಿಕ್ಷೆಯಾಗದೇ ಇರಹುವುದೇ!!?

0 Love

1c2e83ec1d9f55d1f57c42a29b5a24fc

Netra Patil

ಬದಲಾವಣೆ ಅನಿವಾರ್ಯ ಆದರೆ,
ಏನೂ ಮಾಡಲಾಗದು...
ಕೃತಜ್ಞತೆ ಭಾವ ಮರೆತರೆ ಬದುಕಿಗೆ ಅರ್ಥವಿರದು,
ಕಣ್ಣೀರು ನೋವನ್ನು ನಿವಾರಿಸಲಾಗದು,
ನೋವೇ ಜೀವನವಾದರೆ ಭರವಸೆ ಮೂಡಿಸುವ
ಬೆಳಕು ಇರದು...ಮನವೇ ಸಾಗುತಿರು ಗಟ್ಟಿಯಾಗಿ,
ನಿನಗೆ ನೀನು ಅಷ್ಟೇ ಸಮಾಧಾನ ಮಾಡಬೇಕು..
ಈ ಜೀವನದ ಪುಟಗಳು ನೋವು-ನಗುವಿನ ಒಲವಿನ 
ನೂರಾರು ಭಾವನೆಗಳು ಸೇರಿ ಬರೆಯಲ್ಪಟ್ಟಿವೆ
ಎಂದು ಮರೆಯದಿರು...

0 Love

1c2e83ec1d9f55d1f57c42a29b5a24fc

Netra Patil

ಯಾವ ತೀರ ಯಾವದೂ ದಾರಿ,
ತಿಳಿಯದೇ ಸಾಗುತಿದೆ ಬದುಕು.
ಜೀವನದ ಪ್ರತಿ ನಿರ್ಧಾರ ನಮ್ಮನ್ನು ಯಾವಾಗಲೂ 
ವಿಶ್ಲೇಷಣೆಗೆ ಒಳಪಡಿಸುತ್ತದೆ.
ಎಲ್ಲವು ಸರಿ ಅನಿಸಿದರೂ ಹೃದಯದ ಭಾವನೆಗಳಿಗೆ 
ಪ್ರತಿ ಸ್ಪಂದನೆ ಇಲ್ಲದೆ ಮನಸ್ಸು ಪ್ರತಿ ಕ್ಷಣವೂ ಸಾಯುತಿರುತ್ತೆ,
ಏನು ಮಾಡಲಾಗದ ಪರಿಸ್ಥಿತಿ ಎದುರಾದರೆ 
ಜೀವನ ಪಯಣ ಅಪೂರ್ಣವಾಗುತ್ತದೆ..
ನೀನು ಇಲ್ಲದ ಈ ಬದುಕು ಉಸಿರು ಇಲ್ಲದ ಜೀವದ ಹಾಗೇ...
ಹೇಳಲಾಗದ ನೋವು ನನ್ನೊಳಗೆ ಇರಲಿ,
ನಿನ್ನೆಂದು ನಾನು ಏನನ್ನೂ ಕೆಳೆನು...
ಮುಗಿಯದಿರಲಿ ಈ ಪ್ರೀತಿಯ ಪಯಣ ಕೊನೆಯ ಉಸಿರಿರುವವರೆಗೂ..... 
ನನ್ನ ನಿರ್ಧಾರ ಗಟ್ಟಿಯಾಗಿ ನಿಂತಿದೆ ನಿನ್ನೊಂದಿಗೆ ನಿನಗಾಗಿ!
ನಿನ್ನ ಜೊತೆ ಕಳೆದ ನೆನಪುಗಳೊಂದಿಗೆ 
ಈ ಮುಂದಿನ ಪಯಣ ಸಾಗಲಿ... ಒಂದು ನಿರ್ಧಾರಕ್ಕೆ ಬರಬೇಕಾಯಿತು!

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಂದು ನಿರ್ಧಾರಕ್ಕೆ ಬರಬೇಕಾಯಿತು! #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

1c2e83ec1d9f55d1f57c42a29b5a24fc

Netra Patil

ಹೇಳಲಾಗದ ಸಹಿಸಲಾಗದ ನೋವು,
ಬೇರೆ ಯಾವ ದಾರಿ ಕಾಣದೇ ಇರುವುದಕ್ಕೆ ಬಿಡುವ
ನಿರ್ಧಾರ ಒಪ್ಪಿಕೊಳ್ಳಲು ಮನಸ್ಸಿಗೆ ಸಾಧ್ಯವಿಲ್ಲ.
ಅನಿವಾರ್ಯ ಜೀವನ ಒಪ್ಪಿಕೊಳ್ಳಲೇಬೇಕಾದ
ಪರಿಸ್ಥಿತಿ ಎದುರಾದರೆ ಮನಸ್ಸೆಲ್ಲಾ ಮೌನವೇ ಆವರಿಸುತ್ತದೆ.  ಅತಿಯಾದ ಕಷ್ಟ ಕಷ್ಟ!

#ಇಷ್ಟಪಟ್ಟಿದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅತಿಯಾದ ಕಷ್ಟ ಕಷ್ಟ! #ಇಷ್ಟಪಟ್ಟಿದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

1c2e83ec1d9f55d1f57c42a29b5a24fc

Netra Patil

ಮನುಷ್ಯ ಹಲವು ಬಾರಿ ಎಲ್ಲವೂ ತಿಳಿದಿದ್ದರೂ,
ಜೀವನ ಶಾಶ್ವತ ಎಂದು ಭಾವಿಸುತ್ತಾನೆ.
ಅಶಾಶ್ವತ ತಾತ್ಕಾಲಿಕ ಬದುಕಿಗೆ ಪ್ರತಿಕ್ಷಣದ 
ಹೋರಾಟ ನಿರಂತರ... ಇದ್ದಷ್ಟು ದಿನ ಖುಷಿಯಾಗಿರು.

#ಬದುಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇದ್ದಷ್ಟು ದಿನ ಖುಷಿಯಾಗಿರು. #ಬದುಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

1c2e83ec1d9f55d1f57c42a29b5a24fc

Netra Patil

ಒಲವಿನ ರಾಗ ಕವನಸಂಕಲನ ನೀನು
ನನ್ನ ಪ್ರೀತಿಯ ಭಾವನೆಯ ಒಡಲು ಮುದ್ದು 
ಮನಸಿನ ಮಾಣಿಕ್ಯ ನೀನು....
ಬದುಕಿನ ಪುಟದ ವ್ಯಕ್ತಿತ್ವದ ಚಿತ್ರಣದಲ್ಲಿ,
ನಿನ್ನೊಂದಿಗೆ ಇರುವ ಒಲವಿನ ನೂರಾರು 
ನೆನಪುಗಳ ಭಾವನೆಗಳ ಪ್ರೀತಿ ಎಂದಿಗೂ 
ಮರೆಯಲಾಗದ ಹಾಗೂ ಸ್ಮೃತಪಟಲದಲ್ಲಿ 
ಕೊನೆತನಕ ಇರುವ ಸುಂದರ ಕ್ಷಣಗಳು..
ನಿನ್ನೊಂದಿಗೆ ಸಾಗುವ ಪ್ರತಿ ಕ್ಷಣವು ಖುಷಿ 
ಸಂತೋಷದ ಆಗರವಾಗಿದೆ... ನಿನ್ನ ನಿರೀಕ್ಷೆಯಲ್ಲಿ 
ನಾನಿರುವೆ.. ಜೊತೆಯಾಗುವ ಕ್ಷಣವನ್ನು ಪದಗಳಲ್ಲಿ 
ವಿಶ್ಲೇಷಣೆ ಮಾಡಲು ಅಸಾಧ್ಯ..

0 Love

1c2e83ec1d9f55d1f57c42a29b5a24fc

Netra Patil

ಏ ಹೃದಯವೇ ಯಾಕೆ ನೀನು ಹೀಗೆ!
ಪ್ರಾಮಾಣಿಕವಾಗಿ ಉತ್ತರ ಹೇಳುವಿಯಾ,
ಮನಸಿಗೂ ನಿನಗೂ ನಿಜವಾಗಲೂ ಏನು 
ಸಂಬಂಧವಿದೆ ತಿಳಿಸುವಿಯಾ...
ಹೃದಯ ಮನಸ್ಸನ್ನು ಬೇರೆ ಮಾಡಲು ಸಾಧ್ಯವೇ ?

0 Love

loader
Home
Explore
Events
Notification
Profile