Nojoto: Largest Storytelling Platform
puneethgangataka7837
  • 17Stories
  • 11Followers
  • 171Love
    218Views

Puneeth Gangatakar S

  • Popular
  • Latest
  • Repost
  • Video
2219c0cedfacc9d3771935c38b75810f

Puneeth Gangatakar S

ಹೆತ್ತವರ ಬೈಗುಳವ ತಪ್ಪಿಸಿಕೊಳ್ಳಲು,
ಅಳುತ್ತ ನಟನೆ ಮಾಡಿದೆವು ಬಾಲ್ಯದಲ್ಲಿ ಅಂದು !

ನಿಜ ಆಳುವ ಮರೆಮಾಚಿರುವೆ ಇಂದು, 
ಹೆತ್ತವರ ಪ್ರಶ್ನೆಗೆ ಉತ್ತರಿಸಲಾಗದು ಎಂದು !!

©Puneeth Gangatakar S #grownup
2219c0cedfacc9d3771935c38b75810f

Puneeth Gangatakar S

ದುರ್ಯೋಧನನಿಗೆ ಕರ್ಣನಂತಲ್ಲದಿದರು !
ಸಂಕಷ್ಟಗಳಿಗೆ ಮುಂಚೂಿಯಲ್ಲಿರು !!

ಅರ್ಜುನನಿಗೆ ಕ್ರಿಷ್ಣನಂತಲ್ಲದಿದ್ದರು !
ಗೆಲುವಿಗೆ ಹಿಂದಿರು !!

ಅಧಮನಂತಾಗದಿರು !

©Puneeth Gangatakar S #FriendshipDay
2219c0cedfacc9d3771935c38b75810f

Puneeth Gangatakar S

ನಮ್ಮೀ ಜೀವನದರಮನೆಗೆ,
ನೀನೇ ಪಟ್ಟದ ರಾಣಿ, ನಿನ್ನ ರಾಜನು ನಾನೇ, ಸೇವಕನು ನಾನೇ !

ಇರಲು ಜಯ - ವಿಜಯರಂತೆ ಎರಡು ಕಂಗಳು,
ಮನೆಯೇ ವೈಕುಂಠ, ನೀನೆನ್ನ ಲಕ್ಷ್ಮಿ !!

©Puneeth Gangatakar S #Love
2219c0cedfacc9d3771935c38b75810f

Puneeth Gangatakar S

ಹಿಂದೆ ಒರಟಾಗಿ ಆಡುತ್ತಿದ್ದ ಮಗ !!
ಮೌನಿಯಾಗಿ ದುಡಿಯುತಿಹನು ಕೋಪವನ್ನು ತೋರದೆ !!

ಕಾರಣ !??

ಒರಟುತನವ ಮೂಟೆ ಕಟ್ಟಿ ಬದಿಗಿಟ್ಟಿರುವಾ,
ಅವನ ಮಗ !!
ಒರಟಾಗಿ ಅಲ್ಲ,
ಬದಲಿಗೆ ಸೌಮ್ಯವಾಗಿ ! ಮುದ್ದು ಕಂದನಾಗಿ!!

©Puneeth Gangatakar S #responsibility
2219c0cedfacc9d3771935c38b75810f

Puneeth Gangatakar S

ಎಲ್ಲಿಯ ದಿಕ್ಕು ಎಲ್ಲಿಯ ಬಂಧ ? 

"ಉತ್ತರ"ದಿ ಬಂದೆನ್ನ ಚೆಲುವೇ !
"ದಕ್ಷಿಣ" ಕಾಶಿಗು ಜೊತೆಯಾಗಿಯೇ
ಬಂದ ಕುಸುಮವೇ !!
"ಮೂಡಣ"ದ ಸೂರ್ಯನ ಕಿರಣಗಳು ಕಾಣುವ ಮೊದಲಿರಬೇಕು ನಿನ್ನ ಪ್ರೀತಿಯ ಹೊಂಗಿರಣ !
"ಪಡುವಣ"ಕೆ ಸೂರ್ಯ ಜಾರುವ
ಮುನ್ನ ಸೇರಿರಬೇಕು ನಿನ್ನ ಮಡಿಲನ್ನ !!

©Puneeth Gangatakar S #Directions
2219c0cedfacc9d3771935c38b75810f

Puneeth Gangatakar S

ವರ್ತಮಾನದ ಸುಂದರಿ !
ಭೂತ ಕಾಲದ ಕಿನ್ನರಿ !!
ಭವಿಷ್ಯತ್ತಿನಲ್ಲಿ ಇರಲ್ಲಿ ನಿನ್ನ ಪ್ರೀತಿಯಾ ಕಿರಿಕಿರಿ !

ಮೂರ್ ಕಾಲ ಬದುಕಲ್ಲಿ , ನೂರ್ ಕಾಲ ಜೊತೆಯಲ್ಲಿ !

©Puneeth Gangatakar S tenses

tenses #Love

2219c0cedfacc9d3771935c38b75810f

Puneeth Gangatakar S

ದಾಸಳಾಗಿ ಮನೆಯ ಸ್ವರ್ಗದಂತೆ ಸಿಂಗರಿಸಿದವಳೆ !
ಜೀವನ ಸಾಮ್ರಾಜ್ಯಕ್ಕೆ ನೀನೇ ಅಲ್ಲವೇ ಮಹಾ ಚತುರ "ಮಂತ್ರಿ", ಗೊತ್ತೆನಗೆ ನಿನ್ನ ನಿಲುವೇ ಅಂತಿಮ, ಅಪ್ರತಿಮ!!
ಪ್ರೌಢಾವಸ್ಥೆ ತಲುಪಿದ ಮೇಲೂ ಮತ್ತದೇ ಮಮತೆಯ ಕೈತುತ್ತು ತಿನಿಸಿ, ಮಡಿಲಲ್ಲಿ ಆಡಿಸಿದ ಎರಡನೇ "ತಾಯಿ" !
ಗುಣದಲ್ಲಿ ಸರಸ್ವತಿಯ ವಿನಯ, ರೂಪದಲ್ಲಿ ಸಾಕ್ಷಾತ್ ಮಹಾ"ಲಕ್ಷ್ಮಿ"ಯ ರೂಪು, ನಿನ್ನ ಪಡೆದ ನಾನೇ ಧನ್ಯ !!
ಅಂತಃಪುರದ ದಾಸಳಾಗಿ ಸದಾ ಸೇವಾ ನಿರತೆ,
"ರಂಭೇ"ಯು ನಾಚುವಂತ ಸೌಂದರ್ಯದ ಅರಗಿಣಿ !
ಎಲ್ಲ ನುನ್ಯತೆಗಳ ಮನ್ನಿಸಿ ಎದೆಗಪ್ಪಿ ಸಂತೈಸುವ 
ಕ್ಷಮಯಾ "ಧರಿತ್ರಿ" !!


ನೀನಲ್ಲವೇ ನಿಜ ಧರ್ಮಪತ್ನಿ !!

©Puneeth Gangatakar S #Zindagi
2219c0cedfacc9d3771935c38b75810f

Puneeth Gangatakar S

ಸೆಳೆಯಿತು ನನ್ನ "ಕಣ್ಣು" ನಿನ್ನ ಕಂಗಳಲ್ಲಿ ನನ್ನ ಕಾಣಲು!
ಬಯಸಿದೆ "ಕಿವಿ"ಯು ಸದಾ ನಿನ್ನ ಸ್ವರವ ಆನಂದಿಸಲು !!
ಮನವರಳಿಸಿದೆ "ಮೂಗು" ತಾಗಿ ನಿನ್ನ ಘಮಲು !
ಕಾದಿದೆ "ನಾಲಿಗೆ"ಯು ಸವಿಯಲು ನಿನ್ನ ಕೈರುಚಿ !!
ಹೊತ್ತಿಹುದು "ಜ್ವಾಲೆ" ಚರ್ಮಕ್ಕೆ ನಿನ್ನ ಸ್ಪರ್ಶಕ್ಕೆ ಕಾದು !

ಪಂಚೇಂದ್ರಿಯಗಳು ನಿನ್ನ ಅಧೀನ !
ನಿನ್ನೊಂದಿಗೆ ಈ ಜನ್ಮ ಅಂತಿಮ !!
ಜೀವವೇ ನೀನಾಗಿರಲು ನಾಯಾರೇ  ಜಂಗಮ ??!
ಪಂಚೇಂದ್ರಿಯ ಪರಿಪೂರ್ಣ ಪ್ರೇಮ !
ಜೊತೆಯಗಿರಲದೇ ಪ್ರೇಮ ಸಂಗಮ !!

©Puneeth Gangatakar S #Sense
2219c0cedfacc9d3771935c38b75810f

Puneeth Gangatakar S

ಬದುಕೆಂಬ "ಆಗಸ"ವ ನೋಡುತ,
ಸಂಸಾರವೆಂಬ "ವಾಯು" ವಿಹಾರಕ್ಕೆ ಹೋರಟ
ಹಾದಿಯಲ್ಲಿ, ಎದುರಾದ ಸಂಕಷ್ಟದ "ಅಗ್ನಿ"ಯನ್ನು
ನಿನ್ನೊಲುಮೆಯ "ನೀರು" ಹರಿಸಿ
ದಡವ ಕಾಣದೆ ದಣಿದ ಒಡಲಿಗೆ "ಭೂರಮೆ"ಯ 
ಸನಿಹಿಸಿದ ಮಾಯಗಾತಿಯೆ,.

ನಮ್ಮ ಸಂಸಾರದ ಪಂಚಭೂತವಾಗಿ,
ನನ್ನೀ ಜೀವನದ ನಂದಾದೀಪವಾಗಿ.
ಬೇಳಗುತಿಹೆ ಜೀವನವ ಮುದ್ದು ಮಡದಿಯಾಗಿ !!

©Puneeth Gangatakar S #5elements
2219c0cedfacc9d3771935c38b75810f

Puneeth Gangatakar S

ಸಪ್ತಪದಿಯ ತುಳಿದು, ಸಪ್ತಸಾಗರವೆಂಬ ಸಂಸಾರ ಸಾಗರವ 
ಈಜಲು ಜೊತೆಯಾದ  ಜೊತೆಗಾರ್ತಿಯೇ !!

"ಲವಣ ಸಾಗರ"ವೇ ಆಗಿದ್ದ ಜೀವನದ ಸಾಗರಕ್ಕೆ ಸಿಹಿ ಜೇನ ಸವಿಯುಣಿಸಿದವಳು!

ನೀ ಜೊತೆಗಿರುವಾಗ ಬಿರು ಬೇಸಿಗೆಯೂ,
"ಕ್ಷೀರ ಸಾಗರ"ವಾಗಿದೆ ಹೆಣ್ಣೇ !!

"ಸುರ-ಸಾಗರ"ದಿ ತೆಲುತಿಹೇ, ನಿನ್ನ ಅಮಲಿನ ಗಮಲಿಗೆ!

"ಕುಶಾ" ದ್ವೀಪವಾಗಿದೆ ಮನವು ನಿನ್ನೊಲುಮೆಯ ಹುಳಿತಾಗಿ !!

"ಘೃತಸಾಗರ"ದಿಂದ ಆವೃತವಾಗಿದೆ ನನ್ನೀ ಮನದ ಬಯಕೆಗಳು ಜಾರದಿರು ಬೆಡಗಿ ಕ್ರೌಂಚ 
ಸಾಗರದ ನಡುವೆ ನಡೆಯುವ ಮೆಲ್ಲಗೆ ಸವಿಯುತ್ತ ಸಲಿಗೆ !!

"ಇಕ್ಷುರ ಸಾಗರ"ವೇ ನಿನ್ನೊಳು ಅಡಗಿಹುದೇ ಚೆಲುವೇ?
ದುಂಬಿಯಂತೆ ಮೈ-ಮನವು ವಾಲುತ್ತಿದೆ ಆ ನಿನ್ನ ವಯ್ಯರಕ್ಕೆ !

ಜೀವನದ ಸಾಗರವ ಈಜಲು ಹಠಕ್ಕೆ ಬಿದ್ದೆನಗೆ 
ಬಸವಳಿಯದಿರಲೆಂದು ನನಗಾಗೆ ದೇವನಿತ್ತ
"ಗೋಮೇದ ಸಾಗರ"ವೇ ನೀನು !!

#ಅರ್ಧಾಂಗಿ,
#ನೀನೇ ನನ್ನ ಪೂರ್ಣಾಂಗಿ

©Puneeth Gangatakar S #seven_oceans
loader
Home
Explore
Events
Notification
Profile