Nojoto: Largest Storytelling Platform
kirandpalankar6453
  • 622Stories
  • 0Followers
  • 3Love
    0Views

Kiran D Palankar

  • Popular
  • Latest
  • Video
37810754bd5b2f362377c1acb0903fd5

Kiran D Palankar

ಬಿದ್ದೆ ನಾ ಬಿದ್ದೆ
ರಸ್ತೆಯಲ್ಲಿ ನಾ ಹೊರಟಾಗ
ನೀ ಮುಗುಳ್ನಗುವಾಗ
ನಿನ್ನ ಗುಳಿಕೆನ್ನೆಯ ಕಂಡು
ನಿನ್ನ ಪ್ರೀತಿಯಲ್ಲಿ ನಾ ಬಿದ್ದೆ

ನಿನ್ನ ಪ್ರೀತಿಯಲ್ಲಿ ನಾ ಬಿದ್ದೆ 
ಎಂದು ನಾ ತಪ್ಪು ತಿಳಿದಿದ್ದೆ
ಆಸ್ಪತ್ರೆಯಲ್ಲಿ ನಾ ಎದ್ದಾಗಲೆ
ತಿಳಿದದ್ದು, ನಾ ಬಿದ್ದದ್ದು ನಿನ್ನೊಲವಲ್ಲಿ ಅಲ್ಲ
ರಸ್ತೆಯ ಗುಂಡಿಯಲ್ಲಿ ಎಂದು ರಸ್ತೆ ತುಂಬಾ ಬರೀ ಗುಂಡಿಗಳೇ 🤦‍♂️🤦‍♂️

ರಸ್ತೆ ತುಂಬಾ ಬರೀ ಗುಂಡಿಗಳೇ 🤦‍♂️🤦‍♂️

0 Love

37810754bd5b2f362377c1acb0903fd5

Kiran D Palankar

ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ ಬರುತಿರೆ ನೀರೆ
ಅವಳ ಹೆಜ್ಜೆಯ ಗೆಜ್ಜೆಯ ನಾದವೇ ಮನಸೂರೆ
ಆ ನಾದವ ಕೇಳುತಿರೆ,  
ನಿಂತಂತಾಯಿತು ಹೃದಯದ ಕಂಪನ
ಮನದಲ್ಲಿ ಪ್ರೀತಿ ಬೇರೂರಿ, 
ಭಾವನೆಗಳ ಸಿಮೋಲಂಘನ  #ಕಿರಣನ_ಸಾಲು

#ಕಿರಣನ_ಸಾಲು

0 Love

37810754bd5b2f362377c1acb0903fd5

Kiran D Palankar

ಬೇಸರ ತರಿಸಲು ನೂರು ಕಾರಣಗಳಿದ್ದರೂ
ಮೂಡುತ್ತಿತ್ತು ನಗುವು ನಿನ್ನಿಂದಾಗಿ
ಬೇಸರದ ಮನವು ತಣಿಯುತಿತ್ತು 
ನಿನ್ನಯ ಜೊತೆಗಿನ ಒಂದು ಮಾತಿನಿಂದಾಗಿ
ನನ್ನ ಜೀವವೇ ಕಾಯುತ್ತಿತ್ತು 
ನಿನ್ನಯ ಒಂದು ಸಂದೇಶಕ್ಕಾಗಿ

ಈಗ ಸಂತೋಷ ಕೊಡಲು 
ನೂರು ಕಾರಣವಿದ್ದರೂ 
ಮನಸು ಬೇಸರಗೊಂಡಿಡೆ 
ನೀನಿಲ್ಲ ಎಂಬ ಕಾರಣಕ್ಕಾಗಿ
ಕಳೆದುಕೊಂಡ ನಿನ್ನಯ ಸವಿ ನುಡಿಗಾಗಿ
ಜೀವ ತಡಕಾಡುತ್ತಿರುತ್ತದೆ
ಬಾರದ ನಿನ್ನ ಸಂದೇಶಕ್ಕಾಗಿ #ಕಿರಣನ_ಸಾಲು

#ಕಿರಣನ_ಸಾಲು

0 Love

37810754bd5b2f362377c1acb0903fd5

Kiran D Palankar

ಈ ಜೀವವೇ ನಶ್ವರ
ಈ ಜೀವನವು ಬಲು ಬೇಸರ
ಏಕೆ ಬೇಕಿದೆ ಈ ಸಂಸಾರ ಸಾಗರ
ಎನ್ನುತ್ತ ಕುಳಿತಾಗ,
ಮೊಗದಲ್ಲಿ ನಗು ತರಿಸಿತು ಆ ಒಂದು ಸಂದೇಶ
ಜೀವನದ ಉಮ್ಮಸ್ಸೆಲ್ಲ ಆಗ ಸದೃಶ
ಮತ್ತೆ ಜೀವಿಸುವುದಕ್ಕೆ ಸಿಕ್ಕಿತು ಅವಕಾಶ 
ಅದುವೇ your salary has been credited ಎಂಬ ಸಂದೇಶ ಸಂಬಳದ ದಿನದ ಖುಷಿಗೆ ಪಾರವೇ ಇಲ್ಲ

#ಕಿರಣನ_ಸಾಲು #ಸಂಬಳ #yqjogi #yqkannada #yqbaba #ಕನ್ನಡ #kannada

ಸಂಬಳದ ದಿನದ ಖುಷಿಗೆ ಪಾರವೇ ಇಲ್ಲ #ಕಿರಣನ_ಸಾಲು #ಸಂಬಳ #yqjogi #yqkannada #yqbaba #ಕನ್ನಡ #kannada

0 Love

37810754bd5b2f362377c1acb0903fd5

Kiran D Palankar

ಮಳೆ ಹನಿಯ ಪ್ರತಿ ಚುಂಬನವು
ನಿನ್ನ ಹೆಸರ ನೆನಪಿಸಿದೆ
ಆ ಹೆಸರು ನೆನೆದೊಡನೆ, 
ಕಾಣದ ನಗುವೊಂದು ಮೂಡಿದೆ #ಕಿರಣನ_ಸಾಲು

#ಕಿರಣನ_ಸಾಲು

0 Love

37810754bd5b2f362377c1acb0903fd5

Kiran D Palankar

ಬಂದಳು ತಾಯಿ ದುರ್ಗೆ 
ಮಗುವಾಗಿ ನಮ್ಮ ಮನೆಗೆ 
ದಶಮಿಯ ದಿನ ವಿಜಯವ ತರಲು,
ಕೆಟ್ಟ ಯೋಚನೆಯೆಂಬ ರಾಕ್ಷಸರ ಕೊಲ್ಲಲು,
ಹುಟ್ಟಿ ಬಂದಳು ಮಹಾ ದುರ್ಗೆ
ಇವಳೇ ನಮ್ಮ ಮನೆಗೆ ಒಂದು ಸುಂದರ ಕೊಡುಗೆ  New baby at home

#ಕಿರಣನ_ಸಾಲು

New baby at home #ಕಿರಣನ_ಸಾಲು

0 Love

37810754bd5b2f362377c1acb0903fd5

Kiran D Palankar

ಯಾರನೆ ನೋಡಿದರೂ ನಿನ್ನ ರೂಪವೆ ಕಂಡಿದೆ
ಯಾರೇ ಮಾತಾಡಿದರೂ ನಿನ್ನ ಧ್ವನಿಯ ಕೇಳಿದಂತಿದೆ 
ಪ್ರತಿ ವಸ್ತುವೂ ನಿನ್ನದೇ ನೆನಪ ತರಿಸುತ್ತಿದೆ

ಭಯವಾಗುತ್ತಿದೆ ನನಗೆ
ನಿನ್ನ ಪ್ರೀತಿಯಲ್ಲಿ ಹುಚ್ಚನಾಗುವೆ ಎಂದು
ಹುಚ್ಚನಾದರೂ ಸರಿಯೇ, ನಿನ್ನ ಒಲವೇ ಬೇಕು ಎಂದೆಂದೂ #ಕಿರಣನ_ಸಾಲು 
#yqjogi #yqkannada #kannada #ಕನ್ನಡ

#ಕಿರಣನ_ಸಾಲು #yqjogi #yqkannada #kannada #ಕನ್ನಡ

0 Love

37810754bd5b2f362377c1acb0903fd5

Kiran D Palankar

ಬಾ ಬಾ ಬಾ ಬಾ ಬಾ ಬಾ ಚುಕ್ಕಿ
ಕೊಡುವೆ ನಿನಗೆ ಶೇಂಗಾ ಚೆಕ್ಕಿ

ಮೋಡದ ಮರೆಯಲ್ಲಿ ಅಡಗಿದ ಚುಕ್ಕಿ
ಮಿನುಗುತ ಮಿನುಗುತ ಬಾರೆ ಚುಕ್ಕಿ

ಚಂದಿರನ ಜೊತೆಯಲಿ ಆಡುವೆ ನೀನು
ಸೂರ್ಯ ಬಂದರೆ ಓಡುವೆಯೇನು 

ದೂರದ ಬಾನಲಿ ನಿಂತೆ ನೀನು
ನಿನ್ನನು ಎಣಿಸಲು ಆಗುವುದೇನು ಬಾನಿನ ಚುಕ್ಕಿ


#ಮಕ್ಕಳಪದ್ಯ #ಕಿರಣನ_ಸಾಲು #yqjogi #yqkannada #ಕನ್ನಡ #kannada

ಬಾನಿನ ಚುಕ್ಕಿ #ಮಕ್ಕಳಪದ್ಯ #ಕಿರಣನ_ಸಾಲು #yqjogi #yqkannada #ಕನ್ನಡ #kannada

0 Love

37810754bd5b2f362377c1acb0903fd5

Kiran D Palankar

ಹೇಗೆ ತಾನೇ ಬರೆಯಲಿ ನಾನು
ನನ್ನ ಸ್ಫೂರ್ತಿ ಸೆಲೆಯಾದ ನೀನೇ ನನ್ನ ತೊರೆದಿರುವಾಗ,
ನನ್ನ ಭಾವನೆಗಳ ನೀ ಕೊಂದಿರುವಾಗ,
ನಿನ್ನ ನೆನಪಿನ ನೋವಲ್ಲಿ ನಾ ಸಿಲುಕಿರುವಾಗ

ಹೇಗೆ ತಾನೇ ಬರೆಯಲು ಸಾಧ್ಯ 
ನನ್ನ ಮನಸ್ಸೇ ಮರಣಿಸಿರುವಾಗ,
ಬದುಕಿನ ಚೇತನವೇ ದೇಹವ ತೊರೆದಿರುವಾಗ,
ಬರೀ ಪೆನ್ನು ಪುಸ್ತಕಗಳೆಂಬ ಜಡ ವಸ್ತುಗಳೇ ತುಂಬಿರುವಾಗ #ಕಿರಣನ_ಸಾಲು 
#yqjogi #yqkannada #ಕನ್ನಡ #kannada

#ಕಿರಣನ_ಸಾಲು #yqjogi #yqkannada #ಕನ್ನಡ #kannada

0 Love

37810754bd5b2f362377c1acb0903fd5

Kiran D Palankar

ಚಿಟ ಪಟ ಚಿಟ ಪಟ ಎಂಬ ಮಳೆ ಹನಿಗಳ ಸದ್ದು
ಇದ ಕೇಳುತ ಪಯಣಿಸುವುದೆ,
 ಎಲ್ಲ ಚಿಂತೆಗು ಮದ್ದು 
ಇಂತ ಸುಂದರ ಸಮಯದಲ್ಲಿ ಕೂತಳು,
 ಸುಂದರ ಹುಡುಗಿ ನನ್ನ ಪಕ್ಕ ಬಂದು
ಕೈ ಚಿವುಟಿಕೊಂಡೆ,
 ಇದು ಕನಸೋ ನನಸೋ ಎಂದು ಪರೀಕ್ಷಿಸಲೆಂದು
ಕೈ ನೋವಾದಾಗಲೆ ತಿಳಿಯಿತು,
 ಇದು ಕನಸಲ್ಲ ನನಸೆಂದು 
ಮನಸು ಖುಷಿಯಿಂದ ಹೇಳಿತು,
 ಮಾತಾಡಿಸು ಎಂದು
ಆದರೆ ಮರು ಕ್ಷಣವೇ 
 ಖುಷಿಯು ಕರಗಿ ಹೋಯಿತು, 
 ಭಯವು ಮೂಡಿತು,
 ನನ್ನ ಹುಡುಗಿಯ ನೆನಪು ಬಂದು
ಅವಳ ಕೋಪದ, 
 ಚೀರಾಟದ ಸದ್ದು ಮೂಡಿ ಬಂದು ಪ್ರಯಾಣದ ಸಮಯದ ಒಂದು ಕಲ್ಪನೆ
#ಪ್ರಯಾಣ #ಕಲ್ಪನೆ 
#ಕನ್ನಡ #kannada #ಕಿರಣನ_ಸಾಲು #yqjogi #yqbaba

ಪ್ರಯಾಣದ ಸಮಯದ ಒಂದು ಕಲ್ಪನೆ #ಪ್ರಯಾಣ #ಕಲ್ಪನೆ #ಕನ್ನಡ #kannada #ಕಿರಣನ_ಸಾಲು #yqjogi #yqbaba

0 Love

loader
Home
Explore
Events
Notification
Profile