Nojoto: Largest Storytelling Platform
nojotouser1911704683
  • 271Stories
  • 0Followers
  • 8Love
    0Views

ಭಾವಜೀವಿ ಮಧು

  • Popular
  • Latest
  • Video
660e20f264819d1df9e01ae6cac0ee5e

ಭಾವಜೀವಿ ಮಧು

ಗಂಧದಗುಡಿಯ ಜೇನಿನ ನುಡಿಯ
ಪ್ರೀತಿಯ ಕೊಟ್ಟು ಬೆಳೆಸುವನೀತ
ಗಡಿನಾಡಲ್ಲು,  ಹೊರನಾಡಲ್ಲೂ 
ತಾಯ್ನುಡಿ ಕಂಪನು ಸಾರುವನೀತ, 
ನುಡಿದರೆ ಇವನದು ಕಂಚಿನ ಕಂಠ
ಹಿಂದೂರಾಷ್ಟ್ರದ ನೆಚ್ಚಿನ ಭಂಟ
ಕಣ್ಣಲಿ ಹೊಳಪಿದೆ, ಮೊಗದಲಿ ನಗುವಿದೆ
ನಗುತಲೆ ಜಗವನು ಗೆಲ್ಲುವ ಛಲವಿದೆ

ಪ್ರೀತಿಯ ಸೋದರ ಮಲ್ಲಿನಾಥ ಎಸ್ ಘಂಟೆ
ನಿನಗೆ ಜನ್ಮ ದಿನದ ಶುಭಾಶಯಗಳು.

660e20f264819d1df9e01ae6cac0ee5e

ಭಾವಜೀವಿ ಮಧು

ಚಿಟ್ಟೆ ಬಡಿವ ರೆಕ್ಕೆ ಸದ್ದು
ಮೀನು ಮರಿಯು ಈಜೋ ಸದ್ದು
ಹೂವ ಮೊಗ್ಗು ಬಿರಿವ ಸದ್ದು
ಕೇಳಬೇಕು ನಾನೇ ಖುದ್ದು

  #cinemagraph
660e20f264819d1df9e01ae6cac0ee5e

ಭಾವಜೀವಿ ಮಧು

ಮಗಳೆ ನಿನ್ನ ನಗುವ ಕಂಡು,ಚೈತ್ರ ಮಾಸ ಮನಕೆ ಇಂದು
ಅತ್ತೆ ನೀನು ಹುಟ್ಟಿದಂದು, ನಲಿದೆ ನಾನು, ನಿನ್ನ ಕಂಡು
ಮಾತಿನಲ್ಲೇ ಮುತ್ತು ಸುರಿವೆ, ಕಣ್ಣಿನಲ್ಲಿ ನೀರು ಸುರಿವೆ 
ನೋವ ಕಳೆಯೋ ನಗುವ ಚೆಲ್ಲುವವಳು
ನಗುವಿನಲ್ಲಿ ಜಗವ ಮರೆಸುವವಳು
ಕರುಣೆಗಿರುವ ಕಡಲು ನೀನು,
ವಾತ್ಸಲ್ಯದ ಒಡಲು ನೀನು
ಚಿತ್ರ ಬರೆವೆ ನೀನು ಕಲಾವತಿ
ಚಿತ್ತದಲ್ಲಿ ಚಿನ್ನ, ಮಹಾ ಗುಣವತಿ 
ನಿನ್ನಿಂದಲೇ ಹೊಸ ವಸಂತ
ನೀನೆ ನಮಗೆ ಹೊಸ ದಿಗಂತ

ಹುಟ್ಟು ಹಬ್ಬದ ಶುಭಾಶಯಗಳು 
ಪ್ರೀತಿಯ ಪುತ್ರಿ ಕಾರುಣ್ಯ ಕೆ ಎನ್.

660e20f264819d1df9e01ae6cac0ee5e

ಭಾವಜೀವಿ ಮಧು

ಬನ್ನಿ, ಬನ್ನಿ, ಬನ್ನಿರೆಲ್ಲ ಶಿವನ ಸ್ಮರಣೆ ಮಾಡುವ
ಬಿಳಿ ಮಾಮನ, ಶಿವು ಅಣ್ಣನ, ಚಿಕ್ಕಪ್ಪನ... ನೆನೆಯುವ
ಎಂದೂ ಮರೆಯದ, ಮರೆಯಲು ಆಗದ
ಸಾತ್ವಿಕ ಶರಣನ ನೆನಪಿಸುವ.

ಶಿವು ಅಂಕಲ್ ಒಬ್ಬ ವ್ಯಕ್ತಿಯಾಗಿರದೆ
ವ್ಯಕ್ತಿತ್ವವಾಗಿ, ನಮ್ಮೆಲ್ಲರ ಮನಗಳಲ್ಲಿ
ಅಚ್ಚಳಿಯದೆ ಉಳಿದಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.

660e20f264819d1df9e01ae6cac0ee5e

ಭಾವಜೀವಿ ಮಧು

ದಶರಥ ತನಯ, ಶ್ರೀರಾಮ ಸ್ಥಾಪಿತ
ಹರಿಹರ ಸಂಗಮ, ರಾಮೇಶ್ವರ 
ಭಕ್ತರ ಸಲಹುತ, ಗುಹೆಯಲಿ ಕುಳಿತ
ಗುಡ್ಡದ ದೈವ.. ರಾಮೇಶ್ವರ
ಧನ್ಯರು ನಾವು ನಿಮ್ಮನು ಧ್ಯಾನಿಸಿ
ಪವಾಡ ಮಾಡುವೆ ಪರಮೇಶ್ವರ
ಲಿಂಗರೂಪಿಯೆ, ಸಂಗಮನಾಥ
ಲೋಕವ ಪೊರೆಯುವ ರಾಮೇಶ್ವರ

660e20f264819d1df9e01ae6cac0ee5e

ಭಾವಜೀವಿ ಮಧು

ಬೆಳಕು ಹರಿಸಿ ಕತ್ತಲ ಕಳೆಯುವ ಜ್ಯೋತಿ
ತಾನು ಸುಟ್ಟರೂ, ಪರರಿಗೆ ಬೇಳಕೀವ ರೀತಿ
ಮನವನು ಬೆಳಗಲು ಮಡದಿಯೇ ದೀವಿಗೆ
ಗುಡಿಸಿ ಸಾರಿಸುವಳು ಮನೆ - ಮನದ ಕೊಳೆಯನ್ನು
ಮನೆಗೆ ದೀಪವ ಹಚ್ಚಿ, ಮನಕೆ ಬುದ್ದಿಯ ಹೇಳಿ
ಎಲ್ಲವನೂ ಬೆಳಗುವಳು, ಮನೆಗೆ ಬೆಳಕಾಗುವಳು

 ದೀಪದ ಬೆಳಕಿನಿಂದ. 

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ದೀಪದ ಬೆಳಕಿನಿಂದ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

660e20f264819d1df9e01ae6cac0ee5e

ಭಾವಜೀವಿ ಮಧು

ಏಕೆ ಬೆಳೆದು ದೊಡ್ಡವನಾದೆ ನಾನು?
ಮಗುವಾಗಿಯೇ ಇರಬೇಕಿತ್ತು
ಇಲ್ಲಸಲ್ಲದ ಜವಾಬ್ದಾರಿಗಳ ಹೊತ್ತು 
ಇಲ್ಲವಾಗುವ ತನಕ ಬದುಕಿದ್ದೂ ಸತ್ತು
ಆಡುವ ಪ್ರತಿ ಮಾತನೂ ಅಳೆದು ತೂಗಿ
ಆಡಿಕೊಳ್ಳುವ ಜನಕೆ ಅಂಜಿ, ಬಾಗಿ
ಮಾನ, ಸಮ್ಮಾನಗಳ ಮರೆಯಲ್ಲಿ ಅಡಗಿ
ಸಾರ್ಥಕತೆಯನ್ನೇ ಕಾಣದಾದೆ
ನಾನೇಕೆ ಬೆಳೆದು ದೊಡ್ಡವನಾದೆ??? ಈ ಜಗತ್ತಿನ ಪರಿವೇ ಇಲ್ಲದೆ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

660e20f264819d1df9e01ae6cac0ee5e

ಭಾವಜೀವಿ ಮಧು

ಮಗಳು ಮಾತೆಯ ರೂಪ
ಮನೆಯ ನಂದಾದೀಪ
ಏನನ್ನೂ ಕಲಿಸದೆಯೆ, ಎಲ್ಲವನೂ ಕಲಿಯುವವಳು
ಪುಣ್ಯವಂತರಿಗಷ್ಟೆ ಹುಟ್ಟುವವಳು
ತವರನ್ನು ಬೆಳಗುವ ತ್ಯಾಗಿ ಇವಳು
ತಂದೆಯಾ ಮನೆಯನ್ನು ಬೆಳಗಿ, ಬೀಗಿ
ತನ್ನ ಮನೆ ಸೇರುವಳು ತಲೆಯ ಬಾಗಿ

ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು ಕಾರುಣ್ಯ, ನಿತಿಷ, 
ಸನ್ನಿಧಿ ಹಾಗೂ ಎಲ್ಲಾ ಹೆಣ್ಣು ಮಕ್ಕಳಿಗೆ.

660e20f264819d1df9e01ae6cac0ee5e

ಭಾವಜೀವಿ ಮಧು

ಮೂಡಣದ ನಭದಲ್ಲಿ ಭಾನುವಿನ ಆಗಮನ
ದಿನಕರನ ದಿನವಿಂದು ನಮಿಸು ನೀ ಭಾಸ್ಕರನ 
ಗೂಡು ಬಿಡುವ ತವಕದಲ್ಲಿ ಹಕ್ಕಿಗಳ ಗುಂಪು
ಚಿಲಿಪಿಲಿಯ ಹಾಡಿರಲು, ಕೇಳಲದೆಷ್ಟು ಇಂಪು
  #cinemagraph
660e20f264819d1df9e01ae6cac0ee5e

ಭಾವಜೀವಿ ಮಧು

Let me tell you few facts of this universe
Rivers never go reverse
A male, can also be a nurse
Do good, you still get the curse

loader
Home
Explore
Events
Notification
Profile