Nojoto: Largest Storytelling Platform
nayanaacharya9815
  • 356Stories
  • 7Followers
  • 1Love
    0Views

ನಯನ

  • Popular
  • Latest
  • Video
9214977b1469ac91faeba586ed1ef316

ನಯನ


ಕರುನಾಡು ಈ ನಮ್ಮ ಬೀಡಲ್ಲಿ
ಕನ್ನಡ ನಾಡಿನ ಕನ್ನಡಿಗರು 
ಕನ್ನಡವ ಸದಾ ಪ್ರೀತಿಸುತಲಿ
ಕನ್ನಡ ಪ್ರೇಮವ ಹರಿಸಿದರು

ಕನ್ನಡ ನುಡಿಯನ್ನಾಡಿರಿ
ಕನ್ನಡ ಭಾಷೆ ಸರಳವಾಗುವುದು
ಕನ್ನಡತನವ ಎಂದೆಂದೂ ಉಳಿಸಿರಿ 
ಕನ್ನಡವೇ ನಮ್ಮ ಉಸಿರಾಗುವುದು

ಕನ್ನಡ ಭಾಷೆ ಕಲಿತು ನೋಡು
ಕನ್ನಡಾಂಬೆಯ ಆರಾಧಿಸಿ ನೋಡು
ಕನ್ನಡ ಭಾಷೆಯಿದು ಎದೆ ತಟ್ಟಿ ಹೇಳಿರಿಲ್ಲಿ
ಕನ್ನಡ ಭಾಷೆ ಅಂದ,ಕನ್ನಡವೇ ನಿತ್ಯ, ಸತ್ಯವಿಲ್ಲಿ..

ನಯನ ಆಚಾರ್ಯ ✍️ ನಿನಗೆ ವಂದನೆ.

#ಭುವನೇಶ್ವರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಿನಗೆ ವಂದನೆ. #ಭುವನೇಶ್ವರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

9214977b1469ac91faeba586ed1ef316

ನಯನ

ಬೆಳಕಿನ ಹಬ್ಬ ದೀಪಾವಳಿ
ಮನೆ ಮನದಲ್ಲಿ ತಂದಿದೆ
ಹರುಷದ ಕಳೆ ಸುದಿನದಿ
ಪ್ರೀತಿಯಿಂದ ಪ್ರೀತಿಯ  ಹಂಚುವ 
ಜ್ಞಾನದಿಂದ ಅಜ್ಞಾನ ನೀಗಿಸುವ
ಅಂಧಕಾರದಿಂದ ಬೆಳಕಿನತ್ತ ಸಾಗುವ
ಬಾಳಲಿ ತರಲಿ ಹೊಸಬೆಳಕು
ಸದಾ ನಗುವಿನಿಂದ ಖುಷಿಯ ತುಂಬಲಿ...

ನಯನ ✍️
ಎಲ್ಲರಿಗೂ ದೀಪಾವಳಿಯ ಹಬ್ಬದ ಶುಭಾಶಯಗಳು 🪔🪔💐💐💐 #ದೀಪಾವಳಿ ಹಬ್ಬದ ಶುಭಾಶಯಗಳು #yqjogi#yqkannada#

#ದೀಪಾವಳಿ ಹಬ್ಬದ ಶುಭಾಶಯಗಳು #yqjogi#yqkannada#

9214977b1469ac91faeba586ed1ef316

ನಯನ

ಈ ಬಾಳಪಯಣದಲ್ಲಿ
ಹೊಸ ಹೊಸತು ಕಲಿಯುತಲಿ
ಸಾಗಬೇಕಿದೆ,
ಕಲಿತಷ್ಟು ಸಿಗುವುದೇ ಉತ್ತಮ ಅರಿವು
ಸಾಗುತ್ತಲೇ ಇರಬೇಕು ಮುನ್ನಡೆಯುತ್ತ... ಈ ಬಾಳ ಪಯಣದಲ್ಲಿ.

#ಸಾಗುವುದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಈ ಬಾಳ ಪಯಣದಲ್ಲಿ. #ಸಾಗುವುದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

9214977b1469ac91faeba586ed1ef316

ನಯನ

ಒಂದೊಮ್ಮೆ ಅರಿವಿಲ್ಲದಂತೆ
ನಟನೆ ಕೊಟ್ಟಾಗ 
ಮರೆತು ಹೋದ ದಿನವ 
ಮತ್ತೆ ಮರಳಿ ಬರಲಾಗದು 
ಮತ್ತೆ ನೆನಪಿಸಿದರೆ 
ಎಲ್ಲವೂ ವ್ಯರ್ಥ... ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆಯೇ?

#ದಾರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆಯೇ? #ದಾರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

9214977b1469ac91faeba586ed1ef316

ನಯನ

•••ಗಾಳಿ ಮಾತು•••

ನಂಬಿ ಹೋಗದಿರು ಮನುಜನೇ
ವಾಸ್ತವ ಅರಿಯದೆ ಮಾಡದಿರು 
ಗಾಳಿಮಾತು ಕೊಡುವುದೇ
ನೋವೆಂಬ ಗಾಯ ಅನುಭವಿಸಿದವರಿಗೆ ಗೊತ್ತು ..

 
 #ಹನಿಸಾಲು#yqjogi#yqkannada#

#ಹನಿಸಾಲು#yqjogi#yqkannada#

9214977b1469ac91faeba586ed1ef316

ನಯನ

•••ಎಂಥಾ ಸೊಗಸು•••

ಕಾನನ ತಾಣವು ಹಸಿರ ಸಿರಿಯಲ್ಲಿ
ದೂರದಿ ಬೆಳ್ಳಂಚಿನ ರಂಗಿನಲ್ಲಿ
ತಂಗಾಳಿ ಮಧುರ ದನಿಯಾಗಿ
ತಂದಿದೆ ನೋಟವು ಭೂರಮೆ ಸುಂದರಿಯಾಗಿ
 
ಹೂಗಳಂದ ಹಾರಾಡುವ ಪತಂಗಳಿಲ್ಲಿ
ನಗುವಾಗಿ ಬಿರಿದೆ ಅರಳಿ ಚೆಲುವಿನಲ್ಲಿ
ಸುತ್ತಮುತ್ತ ಇರುವ ನೋಟವಾಗಿ
ಕಂಡಿದೆ ಮಧುರದಿ ಭೂರಮೆ ಸುಂದರಿಯಾಗಿ 

ವನಸಿರಿಯಡೆಯ ಕಾಲುದಾರಿಯಲ್ಲಿ
ಸ್ವಾಗತಿಸಿದಂತೆ ಚಿಗುರೆಲೆ,ಹೂವುಗಳಿಲ್ಲಿ
ಎಂಥಾ ಸೊಗಸು ಸುಂದರತಾಣವಾಗಿ
ಮತ್ತೆ ಮೂಡಿದೆ ಇಲ್ಲಿ ಭೂರಮೆ ಸುಂದರಿಯಾಗಿ...


ನಯನ ಆಚಾರ್ಯ ✍️

 # ಕವನ#yqjogi#yqkannada#

# ಕವನyqjogiyqkannada#

9214977b1469ac91faeba586ed1ef316

ನಯನ

•••ಈ ಹಿತವಾದ ಸಂಜೆ •••

ಮುಸ್ಸಂಜೆಯ ಈ ಹೊತ್ತಿನಲ್ಲಿ 
ತೀರದ ಅಲೆಗಳ ನೀನಾದದ ಇಂಪು
ಕಡಲತೀರದ ತೆರೆಯಲ್ಲಿ
ಅಸ್ತನಾದ ನೇಸರನ ಕ್ಷಣ

ಈ ಸೊಗಸಾದ ಸಂಜೆಯಲ್ಲಿ
ಒಲವಿನ ಸಂಗಾತಿಯ ಮನವದು
ಪ್ರತಿ ಹೆಜ್ಜೆಯು ಇಡುತ್ತಾ ಜೊತೆಯಲ್ಲಿ 
ಸಾಗುವುದು ನವಹರುಷದ ಕ್ಷಣ
                                
ಅಲೆಯ ಸ್ವರಗಳ ಮಿಡಿತದ ತರಂಗದಲ್ಲಿ 
ಮೂಡಿದೆ  ಶಾಂತತೆಯಿಂದ  ಸುಮಧುರ
ತಾಣದ ಸುತ್ತ ಸೆಳೆವ ನೋಟವದು
ಹಿತವಾದ ಸಂಜೆಲಿ  ಕಂಡಿಹಲ್ಲಿ ....



ನಯನ ಆಚಾರ್ಯ ✍️

  #ಕವನ#yqjogi#yqkannada#

#ಕವನ#yqjogi#yqkannada#

9214977b1469ac91faeba586ed1ef316

ನಯನ

•••ನೀ ಬಂದಾಗಲೇ•••

ಭಾವದೊಲುಮೆಯ ಚೆಲುವೆ
ನನ್ನಂತರಂಗದ ಭಾವತೀರದಿ
ನಿನ್ನದೆ ನೆನಪಿನ ಪುಟವೆ
ಮರಳಿ ಸೇರಿದೆ ಮನದತೀರದಿ

ಶುಭ್ರದಿ ಚಿತ್ತಾರವ ಬಿಡಿಸಿವೆ 
ನೂರು ನೆನಪಿನಾಳದಿ 
ನೀನಿರುವ ಪ್ರತಿಕ್ಷಣ ಬರೆಸಿವೆ
ಉಸಿರಲ್ಲೂ ಪ್ರೇಮಬರಹದಿ

ಕಾಣದು ಕುರುಡು ನೋಟವೆ
ಇಲ್ಲೊಂದು ನೆನಪಿನಾಳದ ಕದದಿ
ಮತ್ತೆ  ಶುರುವಾಯಿತು ಒಲವೆ
ನನ್ನಯ ಬಾಳಿಗೆ ನವಹರುಷದಿ...


ನಯನ ಆಚಾರ್ಯ ✍️ #ಕವನ#yqjogi#yqkannada#
9214977b1469ac91faeba586ed1ef316

ನಯನ

ಚಿಲಿಪಿಲಿ ಕಲರವಿಸುತ್ತ ಹಕ್ಕಿಗಳಿಲ್ಲಿ
ನಿಸರ್ಗದ ಹಸಿರಯೆಡೆತ್ತ ಹಾರಾಡುತಲಿ
ಮುಂಜಾವಿನ ನಸು ಬೆಳಕಿನ ಬೆಳಗಿನಲ್ಲಿ
ತಂದಿದೆ  ಅರುಣೋದಯಕಿದು ಇಂಪು ಸುಮಧುರದಲ್ಲಿ

ನಯನ ಆಚಾರ್ಯ ✍️

 #ಶುಭೋದಯ #yqjogi#yqkannada#

#ಶುಭೋದಯ #yqjogi#yqkannada#

9214977b1469ac91faeba586ed1ef316

ನಯನ

ಮೂಡಿದ ನೇಸರ
ರವಿಕಿರಣದ ತೇಜದಿ
ಮಂಜಿನ ಬಿಂದುವಿನಲ್ಲಿ 
ನಗುತ್ತಾ ಹೊಳೆಯಿತು
ಕಳೆಯ ನೀಡಿತು ಅಂದದಿ
ಈ ಮುಂಜಾವಿನ ಬೆಳಕು 
ಬೀರುವ ವೇಳೆಯಲ್ಲಿ 
ಜಗವನೆಲ್ಲ ಬೆಳಗಿಸಿತು..

#ಶುಭೋದಯ# #ಶುಭೋದಯ#ಹನಿಗವನ#yqjogi#yqkannada#

#ಶುಭೋದಯ#ಹನಿಗವನyqjogiyqkannada#

loader
Home
Explore
Events
Notification
Profile