Nojoto: Largest Storytelling Platform
paravatikambli5789
  • 338Stories
  • 120Followers
  • 4.5KLove
    63.7KViews

PARVATI KAMBLI

ಜೀವ ಭಾವ ಎಲ್ಲವೂ ನಿನ್ನದೇ ಬದುಕೇ ಈ ಮನಸು ನಿನದಲ್ಲವೇ ಈ ಮನಸು ಮನಸೊಳಗಿಲ್ಲದಿರೆ ಈ ಬದುಕು ಯಾರಿಗಾಗಿ ಹೇಳು ಮನಸಿದ್ದರೃ ಬದುಕಲ್ಲವೇ ಈ ಮನಸು ನಿನ ಬದುಕಲ್ಲಿ ಬೆರೆತಿಲ್ಲವೇ ನಿನ ಒಂದು ಭಾಷೆಯಲ್ಲೇ ಈ ಜೀವ ಬದುಕುಳಿದಿದೆ ನಿನ ಹೆಸರಲ್ಲೇ ಈ ಬಾಳಿನ ಆಳವಿದೆ ಅದಕೇಂದೇ ಸಾಗಿದೆ ಈ ಪಯಣ ನೋವಿಲ್ಲದ ಸಿಹಿಯಾದ ಮೌನಗೀತೆಯಾಗಿ ಈ ಹೃದಯ ನಿನ್ನೊಳು ಈ ತನು ನಿನಗಾಗಿ ಮುಡಿಪಾಗಿದೆ ಮುಂದಿನ ಬದುಕು ಕಾದಿದೆ ಮಡಿಲಲಿ ಮಡಿಯಲು ತಡ ಮಾಡದೇ ಬರಲಾರೆಯಾ ಆ ಭವ್ಯ ಮಧುರ ನಿಮಿಷಕೆ ತಿರುವುಗಳು ತಿರುವಿ ಹಾಕುತಿವೆ ನಿನ್ನ ಸವಿ ಮಾತಿನ ಪ್ರೀತಿಯ ಅಮೃತ ನೀಡಿದ ಕ್ಷಣಗಳನು ನೆನೆದಿದೆ ಮನಸು ನೆನಪುಗಳ ಬಾಚಿ ತಬ್ಬಲು ಜೀವವೇ ಕಾದಿದೆ ಜೀವದ ಮಿಲನಕೆ ಈ ಜೀವವೂ ನಿನದಲ್ಲವೇ.... ಪಾರ್ವತಿ ಕಂಬಳಿ ಹುಬ್ಬಳ್ಳಿ.

  • Popular
  • Latest
  • Repost
  • Video
9c056baf18029a51a663c9a80397a4de

PARVATI KAMBLI

White https://youtu.be/laiiEzUkvtQ?si=RbWdExTR5ha3lOac

©PARVATI KAMBLI
  #engineers_day
9c056baf18029a51a663c9a80397a4de

PARVATI KAMBLI

9c056baf18029a51a663c9a80397a4de

PARVATI KAMBLI

9c056baf18029a51a663c9a80397a4de

PARVATI KAMBLI

ಬದುಕು ಆಸ್ವಾದಿಸುವೆ ಹೇಗಿದ್ದರೂ 
ವಿಶೇಷ ಮನಸಿದು 
ಬೇಕಾದಂತೆ ಬದಲಾಯಿಸಬಲ್ಲೆ....
 ಆದರೆ ಹಣೆಬರಹವನ್ನಲ್ಲ 
ಸದಾ ನಗುತಾ ಇರುವೆ 
ಇಂಥ ಹೃದಯವ ಕರುಣಿಸಿದ 
ಸೃಷ್ಟಿಕರ್ತನಿಗೆ
ನಾ ಚಿರಋಣಿ.....
                          ಪಾರ್ವತಿ ಕಂಬಳಿ

©PARVATI KAMBLI
  #hindi_diwas
9c056baf18029a51a663c9a80397a4de

PARVATI KAMBLI

 ನಂದದಿರಲಿ ಆತ್ಮ ವಿಶ್ವಾಸ.

ಮನುಜನ ಬಾಳು ತೂಗು ದ್ವೀಪದಂತಿದೆ
ಏತಕೆ ನಮ್ಮೊಳಗೆ ವೈ ಮನಸು
ದೀಪದ ಅಂತರಂಗದಂತಿರಲಿ 
ನಮ್ಮ ಹೃದಯ

ತೈಲವು ತೀರುವ ತನಕ 
ಯಾವ ಸ್ವಾರ್ಥವಿಲ್ಲದೆ
ಪ್ರಖರ ಬೆಳಕ ನೀಡುವಂತೆ 
ತ್ಯಾಗದ ಭಾವದಿ ಜೀವನ ಪಾವನ

ತೂಗುದೀಪದ ಸಹನೆ ಇರಲಿ 
ದೀಪವ ಇಷ್ಟಪಡದವರಾರು?
ಸಹಸ್ರಾರು ದೀಪಗಳ ಕಾಯಕವೂ ಒಂದೇ 
ಜಗವ ಬೆಳಗುವ ಯೋಚನಾ ಲಹರಿಯಿರಲಿ..

ತನುವಿನಲಿ ಉಸಿರಾಡಲು 
ದೇವರ ಕೃಪೆಯಂತೆ 
ತೂಗುದೀಪ ಬೆಳಗಲು
ಅಂತರಾತ್ಮದ ಪರಿಶುದ್ಧತೆ ಬೇಕು

ಎಷ್ಟೇ ಬಿರುಗಾಳಿ ಬೀಸಿದರೂ
ನಲುಗದೆ ಎದೆಗುಂದದೆ ಬೆಳಗುವ ತೂಗುದೀಪದಂತೆ ಮತ್ತೆ ಮತ್ತೆ ಉಯ್ಯಾಲೆಯಂತೆ ಜೀಕುವ ಜೀವನವೇ ಸ್ವಾರಸ್ಯಕರ.....
                          ಪಾರ್ವತಿ ಎಸ್ ಕಂಬಳಿ

©PARVATI KAMBLI
  #hindi_diwas
9c056baf18029a51a663c9a80397a4de

PARVATI KAMBLI

9c056baf18029a51a663c9a80397a4de

PARVATI KAMBLI

ಸುಂದರ ತಾಣ 


ಇಲ್ಲೊಂದಿಷ್ಟು ಮನಗಳಿವೆ ಮೊಗೆದಷ್ಟೂ ಪ್ರೀತಿ ಚೆಲ್ಲುತ 

ಮುದುಡಿದ ಕನಸುಗಳಿಗೆ ಜೀವ ತುಂಬುವ ಹೃದಯಗಳಿವೆ 


ಮತ್ತಿಲ್ಲಿ ಯಾವ ಅಂಜಿಕೆಯಿಲ್ಲದೆ ಸ್ವಚ್ಛಂದವಾಗಿರಬಹುದು 

ರಾಗ, ತಾಳ,ಭಾವಗಳು ಒಂದೆಡೆ ಸೇರಿದಂತಿವೆ


ಇಲ್ಲಿ ಸತ್ಯಕ್ಕೆ ಬರಲಿಲ್ಲ ನಿತ್ಯ ಹಬ್ಬದೊಲುಮೆ

ಸಮರಸವೇ ಬಾಳುನಗುವಿನ ಜಲಪಾತ


ಇಲ್ಲಿನ್ನು ಚಿಂತೆಗಳೆಲ್ಲ ಕಳೆದುಕೊಳ್ಳುವ ಭಯವಿಲ್ಲ 

ನಂಬಿಕೆಗಳಿಗೆ ದ್ರೋಹವಿಲ್ಲ ನಿರಾತಂಕದ ಬದುಕಿದೆ 


ಸದಾ ಭೋರ್ಗರೆವ ಕವಿತೆಯ ಪದಗಳು 

ದಾಟಿಗೆ ನಿಲುಕುವ ಹಾಡು ನಮ್ಮದೇ ಸಾಹಿತ್ಯ ಲೋಕ.

                  ಪಾರ್ವತಿ ಎಸ್.ಕಂಬಳಿ

©PARVATI KAMBLI
9c056baf18029a51a663c9a80397a4de

PARVATI KAMBLI

ಕೆಲವೊಮ್ಮೆ ನಮ್ಮ ಕೈ ಮೀರಿದ 

 ಘಟನೆಗಳು ನಡೆದು ಹೋಗುತ್ತದೆ 

ಕಾರಣ ಕರ್ತರನ್ನಾಗಿರುವುದಿಲ್ಲ 

ಅದಕ್ಕಾಗಿ ಕೊರಗುವ ಅವಶ್ಯಕತೆ ಇಲ್ಲ 

ಮುಂದೆ ಮಾಡುವ ಕೆಲಸಗಳ ಕಡೆಗೆ 

ಗಮನಹರಿಸುತ್ತ ಮುಂದೆ ಸಾಗಬೇಕು ಸಾಗಬೇಕು

                       ಪಾರ್ವತಿ ಎಸ್.ಕಂಬಳಿ

©PARVATI KAMBLI
  #chaand
9c056baf18029a51a663c9a80397a4de

PARVATI KAMBLI

White ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ

 ಲಂಗು ಲಗಾಮು

ಆ ದೇವರ ಕೈಯಲ್ಲಿದೆ

 ನಾವೇನಿದ್ದರೂ ಪ್ರಯಾಣಿಕರಷ್ಟೇ 

ನಾವು ಬಂದ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ

 ನಮ್ಮ ನಿಲ್ದಾಣ ಬಂದಾಗ ಇಳಿದು ಹೋಗುವುದಷ್ಟೇ

 ನಮ್ಮ ಕೆಲಸ....

ಪಾರ್ವತಿ ಎಸ್ ಕಂಬಳಿ

©PARVATI KAMBLI
  #sad_shayari
9c056baf18029a51a663c9a80397a4de

PARVATI KAMBLI

White ನಿನ್ನಲಿ ಒಂದಾದ ಭಕ್ತಿ
 ಜೀವಕ್ಕೆ ಭಾವಕೆ ಇಷ್ಟವಾದ ಪ್ರೇಮ
 ಪವಿತ್ರತೆಯ ತಾಣವೇ ಹೃದಯ
 ಸವಿನುಡಿಗಳ ಹೂಮಾಲೆ ನಿನಗೆ ಸಮರ್ಪಣೆ 
ಜೀವನದ ಪಯಣದಲ್ಲಿ ಬರುವ ಕಷ್ಟಗಳ
 ದಾಟುವ ದೃಢ ನಿರ್ಧಾರವೇ 
ಜಯದ ಮೊದಲ ಮೆಟ್ಟಿಲು
ನಿಸ್ವಾರ್ಥವೇ ಮನಸ್ಸಿನ ಗುರಿ 
ಶ್ರೀ ಗುರು ಸಿದ್ಧಾರೂಢ ಸ್ವಾಮಿ ನೀನಲ್ಲದೆ
 ನನಗಾರಿಹರು ಈ  ಜಗದಲಿ....‌...
                               ಪಾರ್ವತಿ ಎಸ್.ಕಂಬಳಿ

©PARVATI KAMBLI
  #sad_shayari
loader
Home
Explore
Events
Notification
Profile