Nojoto: Largest Storytelling Platform
ranjithakm1488
  • 19Stories
  • 13Followers
  • 199Love
    4.4KViews

ರಂಜು ಅಂಜನಾದ್ರಿ

  • Popular
  • Latest
  • Video
b7fcd41f7011fef74bc8decc60229464

ರಂಜು ಅಂಜನಾದ್ರಿ

ನನ್ನವನೆಂದರೆ

ಬಡತನದ ನಡುವಲು
ನನ್ನೆಸರಿಗೆ ಹೃದಯವನು ಬರೆದಿಟ್ಟಿದ್ದಾನೆ

ಸೂರಿಲ್ಲದಿದ್ದರೇನಾಯ್ತು
ಅವನ ಮನದ ಮನೆಯೇ ಸಾಕಷ್ಟಾಯಿತು

ಒಂದೊತ್ತು ಅನ್ನವಿಲ್ಲದಿದ್ದರೇನಾಯ್ತು
ಅವನ ಪ್ರೀತಿ ಎನ್ನ ಹಸಿವ ನೀಗಿಸುವಂತಾಯ್ತು

ರೇಷ್ಮೆ ಸೀರೆ ಇಲ್ಲವಾದರೇನಾಯ್ತು
ಅವನ ಸೂಕ್ಷ್ಮತೆಯ ನೂಲು ಎನ್ನ ಮಾನ ಮುಚ್ಚುವಂತಾಯ್ತು

ಈ ಪರಿಯ ವಿಪರೀತ ಶ್ರೀಮಂತ ನನ್ನವನು
ಕಣ್ಣೀರಿಗೆ ಸ್ಪಂದಿಸುವ ನನ್ನೆದೆಯ ಮಾಲೀಕನು

©ರಂಜು ಅಂಜನಾದ್ರಿ
  #Hum
b7fcd41f7011fef74bc8decc60229464

ರಂಜು ಅಂಜನಾದ್ರಿ

ಹುಣ್ಣಿಮೆ ಎಂದರೆ ಬೇರೇನಿಲ್ಲ ಗೆಳೆಯಾ
ಬಾನ ಚಂದಿರ ಭೂಮಿಗೆ ಜಾರಿ ನನ್ನವನಾಗಿದ್ದಷ್ಟೆ

©ರಂಜು ಅಂಜನಾದ್ರಿ
  #Hum
b7fcd41f7011fef74bc8decc60229464

ರಂಜು ಅಂಜನಾದ್ರಿ

ಭಾವನೆಗಳ ಕೊಡುಗೈ ರಾಜ ನನ್ನವನು,,,,,,
 ಈ ರಾಣಿಯ ಮನದ ರಾಜ್ಯಕೆ ಒಮ್ಮೆಯೂ 
ಬರಗಾಲ ಬಾರದಂತೆ ಕಾವಲಿದ್ದ

©ರಂಜು ಅಂಜನಾದ್ರಿ
  #OneSeason
b7fcd41f7011fef74bc8decc60229464

ರಂಜು ಅಂಜನಾದ್ರಿ

ಚಿನ್ನದಂಗಡಿಯ ಚೆಂದಿರ ನನ್ನವನು
ಬಾನಿಂದ ಜಾರಿ ನನ್ನೆದೆಯ ಕಡಲಲಿ ತೇಲುತ್ತಿದ್ದಾನೆ 
ಕರಿಮಣಿಯ ನಡುವಿನ
ಒಡವೆಯಾಗಿ

©ರಂಜು ಅಂಜನಾದ್ರಿ
  #sushantsingh
b7fcd41f7011fef74bc8decc60229464

ರಂಜು ಅಂಜನಾದ್ರಿ

ಕಾದವಳ ಕಥೆ ಮಣ್ಣಾಯಿತೇ.....?

ಕಾದವಳ ಕಥೆ ಮಣ್ಣಾಯಿತೇ.....? #ಪ್ರೀತಿ

Follow us on social media:

For Best Experience, Download Nojoto

Home
Explore
Events
Notification
Profile