Nojoto: Largest Storytelling Platform
nojotouser1815241185
  • 57Stories
  • 157Followers
  • 300Love
    0Views

ಬೆಳಕು-ಪ್ರಿಯ

  • Popular
  • Latest
  • Video
bad1fc662bc48f3171f16b9e630f89dc

ಬೆಳಕು-ಪ್ರಿಯ

ನಾ ಸೋತದ್ದು
ನಿನಗಲ್ಲ ಮಾರಾಯ್ತಿ
ನಿನ್ನ.... 
ಕಿರುಗಣ್ಣಿನ ನೋಟಕ್ಕೆ

©ಬೆಳಕು-ಪ್ರಿಯ #ಬೆಳಕು

#ಬೆಳಕು #Love

bad1fc662bc48f3171f16b9e630f89dc

ಬೆಳಕು-ಪ್ರಿಯ

ಮತ್ತೇನು ತಕರಾರಿಲ್ಲ ಮಾರಾಯ್ತಿ
ಮಾತಿಗೆ ಮಾತು ಬೆಳೆದು 
ಚೂರು ಹುಸಿ ಮುನಿಸು ಬೆಳೆದಾಗ
ಚೂರೇ ಚೂರು ನಕ್ಕುಬಿಡು ಸಾಕು
ಬಡಪಾಯಿ ಹುಡುಗ ಬದುಕಿ ಬಿಟ್ಟಾನು

©ಬೆಳಕು-ಪ್ರಿಯ #belaku
bad1fc662bc48f3171f16b9e630f89dc

ಬೆಳಕು-ಪ್ರಿಯ

ಸಣ್ಕತೆ
          *************
   ಸಮಾನತೆಯ ಊರಿನೊಳಗೆ
   ತಟ್ಟೆ-ಲೋಟಗಳು ಮುಟ್ಟಾಗಿದ್ದವು

©ಬೆಳಕು-ಪ್ರಿಯ #belaku
bad1fc662bc48f3171f16b9e630f89dc

ಬೆಳಕು-ಪ್ರಿಯ

ಬಾ ಇನ್ನಾದರೂ ಬಾ
ಹೊಸ ಬದುಕಿನ ನವ ಹಾದಿ ಹುಡುಕೋಣ

ಅನ್ನವಿಲ್ಲದೆ,ಸೂರಿಲ್ಲದೆ ಸುಕ್ಕುಗಟ್ಟಿರುವ
ಇದ್ದು ಸತ್ತಂತಿರುವ ನಿರಾಶ್ರಿತರಿಗೆ
ಸುಖದ ಸೂರು ಹುಡುಕೋಣ

                                         ಬಡತನದಿ ಬೆಂದವರ
                                            ಜಾತಿ ರಚ್ಚೆಯಲಿ ಕೊಚ್ಚಿ
                                               ಹೋದವರ, ಮೇಲೆತ್ತುವ
                                            ಮನುವ ಹುಡುಕೋಣ

ಮಣ್ಣ ಮಕ್ಕಳ ಮನದಲ್ಲಿ
ದಣಿದು ಹೋದವರ ಮನೆಯಲ್ಲಿ
ಬೆಳದಿಂಗಳ ಸುರಿಯೋಣ
    
                                                ಕೆಂಪು ದೀಪದಿ ಕತ್ತಲಾಗಿ
                                                                ಖಾದಿ,ಕಾಮ,ಕಾಸುಗಳಡಿ ಬೆತ್ತಲಾಗಿ
                                              ನಲುಗಿದವರ ಬದುಕಲಿ
                                                                 ಭರವಸೆಯ ನೇಸರನ ಹುಡುಕೋಣ

ದ್ವೇಷಾಸೂಯೆ,ಕ್ರೌರ್ಯ ದಳ್ಳುರಿಗಳ ದಫನ ಮಾಡಿ
ಹಾದಿಯುದ್ದಕ್ಕೂ ಹಿಡಿ ಪ್ರೀತಿ ಚೆಲ್ಲಿ 
ಪ್ರತಿ ತಿರುವಿಗೂ ಹಣತೆ ಬೆಳಗಿ 
ಹೊಸ ಬದುಕಿನ ಹಾದಿ ಹುಡುಕೋಣ

                                                        ಬಾ...ಇನ್ನಾದರೂ ಬಾ ಮನುಜ
                                                    ಎದ್ದು ಹೋಗುವ ಸಂತೆಯಲಿ
                                                              ಬಿದ್ದು ಹೋಗುವ ಮುನ್ನ ಬದಲಾಗು,
                                                        ಬಾ ಹೊಸ ಹಾದಿ ಹುಡುಕೋಣ ಇನ್ನಾದರೂ ಬಾ ಮನುಜ


@ಬೆಳಕು@

ಇನ್ನಾದರೂ ಬಾ ಮನುಜ @ಬೆಳಕು@

bad1fc662bc48f3171f16b9e630f89dc

ಬೆಳಕು-ಪ್ರಿಯ

ದೇಹ ಕಾಲನ ಕಾಲಡಿಯ ಗಂಟು
                                ಗಾಳಿಗೂ ಸಂಬಂಧವುಂಟು
                                ಲೋಕದ ಸಂತೆಯ ನಂಟು
                                ತೀರಲು ನಿನ್ನ ಹೆಸರೆಲ್ಲಿ ಉಂಟು


ಈ ಲೋಕ ನನ್ನದಲ್ಲ
ಕಾಲ ಕೈಯೊಳಗಿಲ್ಲ
ಗಾಳಿಯಿರದೆ ದೇಹವಿಲ್ಲ
ಇಲ್ಲಿ ನಿನ್ನದಲ್ಲದೆ ನನ್ನದೇನಿಲ್ಲ

 
                          ಗಾಳಿ ತಬ್ಬಿದ ದೇಹವಿದು
                          ಕಾಲವಪ್ಪಿದ ಲೋಕವಿದು
                          ಉಸಿರಿನ ಸಂತೆಯಲಿ ನಿಂತು
                          ಹೆಸರಿಗಾಗಿ ಬಡಿದಾಡಿದರೆ ಏನುಂಟು? ಬೆಳಕು-ಪ್ರಿಯ

ಬೆಳಕು-ಪ್ರಿಯ

bad1fc662bc48f3171f16b9e630f89dc

ಬೆಳಕು-ಪ್ರಿಯ

ಸರ್ಕಾರ ಮೊದಲು ಪೆಟ್ರೋಲ್ ಬಂಕ್ ಬಂದ್ ಮಾಡ್ಬೇಕು (ತುರ್ತು ಸೇವೆ ವಾಹನಗಳ ಹೊರತುಪಡಿಸಿ)
ಅವಾಗಾದ್ರು ಶೋಕಿಗೋಸ್ಕರ ಧಿಮಾಕ್ ಮಾಡ್ಕೊಂಡ್ ಅಡ್ಡಾಡೊರು ಮುಚ್ಕೊಂಡ್ ಮನೆಗೆ ಬಿದ್ದಿರ್ತಾರೆ corona

corona

bad1fc662bc48f3171f16b9e630f89dc

ಬೆಳಕು-ಪ್ರಿಯ

ಸರ್ಕಾರ ಮೊದಲು ಪೆಟ್ರೋಲ್ ಬಂಕ್ ಬಂದ್ ಮಾಡ್ಬೇಕು (ತುರ್ತು ಸೇವೆ ವಾಹನಗಳ ಹೊರತುಪಡಿಸಿ)
ಅವಾಗಾದ್ರು ಶೋಕಿಗೋಸ್ಕರ ಧಿಮಾಕ್ ಮಾಡ್ಕೊಂಡ್ ಅಡ್ಡಾಡೊರು ಮುಚ್ಕೊಂಡ್ ಮನೆಗೆ ಬಿದ್ದಿರ್ತಾರೆ corona

corona

bad1fc662bc48f3171f16b9e630f89dc

ಬೆಳಕು-ಪ್ರಿಯ

ನಿನ್ನೂರಿನ ನಡು ಬೀದಿಯಲಿ ಹಿಂಗಿದ ಕಣ್ಣೀರು ಎಷ್ಟೋ
ಈ ಬರಿಗೈ ಫಕೀರನ ಬದುಕ ಜೋಳಿಗೆಯಲಿ ಸತ್ತ ಕನಸುಗಳು ಎಷ್ಟೋ... ಸಾಕಿ

ಸಾಕಿ

bad1fc662bc48f3171f16b9e630f89dc

ಬೆಳಕು-ಪ್ರಿಯ

ನನ್ನ ಅವಳ ಕಣ್ಣೋಟದ ಕೂಡು-ಕಳೆಯುವ ಲೆಕ್ಕಕ್ಕೆ
ಜಗವು ಹುಚ್ಚಾಟವೆಂದಿತು ಗಾಲಿಬ್ ಗಾಲಿಬ್

ಗಾಲಿಬ್

bad1fc662bc48f3171f16b9e630f89dc

ಬೆಳಕು-ಪ್ರಿಯ

ನಿನ್ನೆಯಷ್ಟೇ ನಿನ್ನ ಮೊಹಬ್ಬತ್ತಿನ ಅಮಲಿನಲಿ ಹಬ್ಬ ಮಾಡಿದ ಬೆಳಕು
ಇಂದು ಖಬರಸ್ಥಾನದಿ  ಕಳೆಬರವಾಗಿ ಹಣೆಬರಹಕೆ
ಮೊಳೆಯೊತ್ತಿದೆ ಸಾಕಿ ಸಾಕಿ

ಸಾಕಿ

loader
Home
Explore
Events
Notification
Profile