Nojoto: Largest Storytelling Platform
rajashekar6245
  • 259Stories
  • 0Followers
  • 0Love
    0Views

Raja Shekar

  • Popular
  • Latest
  • Video
ce154c72003ced238ca0d1777d912728

Raja Shekar

ಕಳೆದು ಹೋಗಿರುವೆ 
ನಿನ್ನದೇ ಗುಂಗಿನಲ್ಲಿ.
ಕಂದೀಲು ಹಿಡಿದು 
ಹುಡುಕಲು ಹೊರಟೆ 
ನನ್ನನ್ನೇ ನಾನು.
ನಿನ್ನ ಬಿಟ್ಟು ಯಾರಿಗೂ 
ಕಾಣಲಾರೆನು.
ಕಂಡರೂ, ನಿನ್ನ ಪ್ರೇಮದ 
ಬೆಳಕಲ್ಲಿ ಮಾತ್ರ ಕಾಣುವೆನು

ce154c72003ced238ca0d1777d912728

Raja Shekar

ಪ್ರತಿ ರಾತ್ರಿ ಮಾತನಾಡುವೆನು
ಚಂದ್ರನೊಂದಿಗೆ ಮೌನದಲ್ಲಿ 
ಅವನಾದರೋ ಚಕೋರಿ ಪಕ್ಷಿಯ
ಪ್ರಣಯ ಕತೆಗಳ ಹೇಳುವನು
ಸದಾ ನಿನ್ನ ಗುಂಗಲ್ಲೇ ಮಿಂದೇಳುವ
ನಾನು, ನಿನ್ನ ಬಿಟ್ಟು ಯಾರ ಕತೆಯ
ಹೇಳಲಿ?

ce154c72003ced238ca0d1777d912728

Raja Shekar

ಈಗಲೂ ಹುಡುಕುತ್ತಿರುವೆ ನಿನ್ನ
ಜನಜಂಗುಳಿಯೊಳಗೆ,
ಖಾಲಿ ಬಯಲೊಳಗೆ,
ಮಳೆಸುರಿಸುವ ಮೋಡಗಳೊಳಗೆ.

ಹುಡುಕುತ್ತಿರುವೆ ನಿನ್ನನು,
ಸಂಜೆಯ ದೀಪಗಳ ನಡುವೆ,
ಚಲಿಸುವ ವಾಹನಗಳ ಒಳಗೆ, 
ಚಂಡಮಾರುತ ಹಾಯ್ದ ರಸ್ತೆಯೊಳಗೆ,
ಹೊಳೆಯುತ್ತಿರು ನಕ್ಷತ್ರಗಳ ನಡುವೆ. 

ಸೋಜಿಗವಾಗುತ್ತಿದೆ !
ನೀನೆಲ್ಲಿರಬಹುದೆಂದು ಈಗ,
ವರುಷಗಳಿಂದ ನಿನ್ನ ಹೆಸರು 
ನನ್ನ ತುಟಿಯಿಂದ ಹೊರಬಂದಿಲ್ಲ.

ನೀನು ನನ್ನವಳೆಂದು ಕರೆದಾಗಿನಿಂದ
ಸಮಯ ಓಡಿದೆ ನಮ್ಮಿಬ್ಬರಿಗೂ

ಅರಿತಾಗಿದೆ ನಾನು, ನೀನಿಲ್ಲದೆಯೂ 
ಬದುಕ ಬಲ್ಲೆನೆಂದು, ಏನಾದರಾಗಲಿ
ನಾ ನಿನ್ನ ಪ್ರೀತಿಸುವೆ, ಎಂದೆಂದು.

ಮೂಲ- Lang Leav 
 #langleav
ce154c72003ced238ca0d1777d912728

Raja Shekar

ದೀಪವೇ ಇರದ ರಸ್ತೆಯ ಮೂಲೆಯಲ್ಲಿ
ದಿನಾ ರಾತ್ರಿ ನಕ್ಷತ್ರದ ಬೆಳಕು
ತಲೆಯೆತ್ತಿ ಆಕಾಶವ ನೋಡಿದರೆ
ಚಂದ್ರನೂ ಇಲ್ಲ, ನಕ್ಷತ್ರಗಳೂ ಇಲ್ಲ
ರಸ್ತೆಯ ಕೊನೆಗೆ ನಡೆದು ನೋಡಿದಾಗ 
ತಿಳಿಯಿತು, ಆ ಬೆಳಕು ಅವಳ 
ಮನೆಯಿಂದ ಹೊಮ್ಮುತ್ತಿದ್ದ
ಅವಳ ಕಣ್ಣ ಹೊಳಪು ಎಂದು

ce154c72003ced238ca0d1777d912728

Raja Shekar

ಹೊರಡಬೇಡ !
ಹೊರಡಲೇ ಬೇಕಾದರೆ, 
ನನ್ನ ಆತ್ಮವನೂ
ಜೊತೆಗೆೇ ಕರೆದುಕೋ

~~ರೂಮಿ

ce154c72003ced238ca0d1777d912728

Raja Shekar

ಇರುವಿಕೆಯ ಮುಳ್ಳನು ಬೇಗ
ಕಿತ್ತು ಬಿಡು ನಿನ್ನೆದೆಯಿಂದ, 
ಮಾಡಿ ನೋಡು ಇದನು, 
ಕಾಣುವೆ ನೀನು ನಿನ್ನೊಳಗೆ
ಗುಲಾಬಿಯ ಸಾವಿರ ಹೂದೋಟವನು

~~ ರೂಮಿ
     #rumi #rumi_poetry
ce154c72003ced238ca0d1777d912728

Raja Shekar

ನೀನಾದರೆ ಹೃದಯಗಳ ಸಹಾಯಕ
ಹರಿಯುವುದು ಜ್ಞಾನದ ತೊರೆ,
ನಿನ್ನ ಎದೆಯೊಳಗಿಂದ 

~~ರೂಮಿ  #rumi #rumi_poetry

If you become a helper of hearts,
Springs of wisdom will flow from 
your heart

~~Rumi

#Rumi #rumi_poetry If you become a helper of hearts, Springs of wisdom will flow from your heart ~~Rumi

ce154c72003ced238ca0d1777d912728

Raja Shekar

ಒಮ್ಮೆ ನನ್ನೆಡೆಗೆ ತಿರುಗಿ, ನಕ್ಕು ಬಿಡು
ನನ್ನ ಎದೆಯೊಳಗಿನ ಅಷ್ಟೂ ಪ್ರೀತಿಯನು
ನಿನ್ನ ಬೊಗಸೆಯಲಿಟ್ಟು ಧಾರೆ ಎರೆದು ಬಿಡುವೆ

ce154c72003ced238ca0d1777d912728

Raja Shekar

ಶರದ್ ಋತುವಿನಲ್ಲಿ ಬೇರೆ ಮರಗಳ
ಎಲೆಗಳೆಲ್ಲ ಉದುರಿದರೂ, 
ಅವಳ ಮನಯ ಹಿತ್ತಲಿನ
ಕೆಂಡಸಂಪಿಗೆಯ ಮರವು 
ಹಚ್ಚಹಸುರಾಗಿ, ಹೂವ ಬಿಡುತಿತ್ತು

ce154c72003ced238ca0d1777d912728

Raja Shekar

ಅವನ ಉಸಿರ ಶಾಖವೇ
ಇಷ್ಟು ಬೆಚ್ಚಗಾಗಿಸಿದೆ. 
ಅವನ ತಬ್ಬಿದರೆ, 
ಉರಿದು ಬೂದಿಯಾಗಿ
ಹೋಗುವೆ ನಾನು

loader
Home
Explore
Events
Notification
Profile