Nojoto: Largest Storytelling Platform

Best ರೇಮಚಿಂತನೆ Shayari, Status, Quotes, Stories

Find the Best ರೇಮಚಿಂತನೆ Shayari, Status, Quotes from top creators only on Nojoto App. Also find trending photos & videos about

  • 1 Followers
  • 327 Stories

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಅಯ್ಯ! ಪಾಷಾಣಕ್ಕೆ ಗಿರಿ ಸವೆದವು. ಪತ್ರೆಗೆ ತರು ಸವೆದವು. ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು. ಅಗ್ನಿ ಧೂಪಕ್ಕೆ ಸವೆಯಿತ್ತು. ವಾಯು ಕಂಪಿತಕ್ಕೆ ಸವೆಯಿತ್ತು ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ, ಉಮೇಶನ ಶರಣರು ಮಹಮನೆಯಲ್ಲಿ ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗ ಚೌಡಯ್ಯ.

ನಿಜಶರಣ.ಅಂಬಿಗರ ಚೌಡಯ್ಯನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🦚🦚🦚🦚🌹🦚🦚🦚🦚 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
-
✍🏻ಅಮುಗಿದೇವಯ್ಯನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🦚🦚🦚🦚✡️🌹🦚🦚🦚🦚 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtbaba #yrqtjogi

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಸರ್ವಾಂಗದೊಳಹೊರಗಿಪ್ಪ ಪರಬ್ರಹ್ಮಲಿಂಗವು ಕರಕಮಲಕ್ಕೆ ಬಂದಿತು ನೋಡಾ. ಆ ಲಿಂಗವ ಸಾಧಿಸಿ ಭೇದಿಸಲರಿಯದೆ ಅನ್ಯದೈವಂಗಳಿಗೆ ಎರಗಿ ಭವಕ್ಕೆ ಗುರಿಯಾದರು ನೋಡಾ. ಇದು ಕಾರಣ, ಆ ಲಿಂಗವನರಿತು ಪರತತ್ವದಲ್ಲಿ ಕೂಡಿ ಪರಿಪೂರ್ಣವಾಗಬಲ್ಲಡೆ ಆತನೆ ನಿರ್ಮುಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
-
✍🏻ಜಕ್ಕಣಯ್ಯನವರ.ವಚನ
ಬಸವ ಸಂಜೆಯ ಶರಣು ಶರಣಾರ್ಥಿ ಗಳು
✡️✡️✡️✡️🦚🦚✡️✡️✡️✡️
 #ರೇಮಚಿಂತನೆ 
#ವಚನಸಾಹಿತ್ಯ 
#yrqtbaba #yrqtjogi

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಎಂತೆಂತು ನೋಡಿದಡಂತಂತು ತೋರ್ಪುದೆಲ್ಲಾ ಜಡದೃಶ್ಯ, ಇದೆಲ್ಲಾ ಮಾಯೆ ಎಂದು. ಈ ಮಾಯೆಯ ಗಾಹುಕಂಡಿಯೊಳು ನುಸುಳುವ ಮಾಯಾವಾದಿಗಳಂತಲ್ಲ ನೋಡಾ. ಮಾಯೆ ಅನಿರ್ವಾಚ್ಯ, ಹೇಳಬಾರದ ಮಾಯೆಯೆಂದು ಹೇಳಿಕೊಂಬ ವೇದಾಂತಿಗಳಂತಲ್ಲ ನೋಡಾ, ಸಿದ್ಧಾಂತಿಗಳಪ್ಪ ಶಿವಶರಣರು. ಮಾಯೆಯ ಹುಸಿ ಮಾಡಿ ಸರ್ವಾಂಗಲಿಂಗ ಸೋಂಕಿನಲ್ಲಿ ಲೀಲೆಯಿಂ ಸುಳಿದಾಡುವ ನಿಜಲಿಂಗೈಕ್ಯರಿಗೆ ಮಿಕ್ಕಿನ ಭವಭಾರಿಗಳನೆಂತು ಸರಿಯೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
-
✍🏻ಆದಯ್ಯನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🦚🦚🦚🦚✡️✡️🦚🦚🦚🦚 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷
ಎಚ್ಚರು, ಕನಸು, ನಿದ್ರೆ, ಮೂರ್ಛೆ, ಅರಿವು, ಮರವೆ, ಸಂಕಲ್ಪ, ವಿಕಲ್ಪ, ಅಹಂಮಮತೆ ರೂಪು ರುಚಿಯನರಿವುತಿರ್ಪ ಮನವನರಿಯಬಹುದಲ್ಲದೆ ಅರಿವಿಂಗರಿವಾದಾತ್ಮನ ಅರಿಯಲುಂಟೆ? ಸರ್ವಸಾಕ್ಷಿಕನಾದ ಆತ್ಮನನರಿವೊಡೆ ಶ್ರುತಿಗತೀತ, ಬ್ರಹ್ಮವಿಷ್ಣುರುದ್ರಾದಿಗಳಿಗಳವಲ್ಲ, ಸೌರಾಷ್ಟ್ರ ಸೋಮೇಶ್ವರಲಿಂಗ ಅಸಾಧ್ಯವಾದ ಕಾರಣ.
-
✍🏻ಆದಯ್ಯನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🌺🌺🍀🌺☘️🌺☘️🌺☘️🌺🌺
 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಹಸಿವು ತೃಷೆಯಳಿದಡೇನು, ಭಕ್ತನಪ್ಪನೆ? ಅಲ್ಲಲ್ಲ. ಅಷ್ಟಮಹಾಸಿದ್ಧಿಯುಳ್ಳಡೇನು, ಭಕ್ತನಪ್ಪನೆ? ಅಲ್ಲಲ್ಲ. ತನು ಬಯಲಾಗಿ ಚತುರ್ವಿಧ ಪದಸ್ಥನಾಗಿ ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ? ಅಲ್ಲಲ್ಲ. ಗಿಡಗಳ ತಿಂದ ಬಳಿಕ ಹಸಿವು ತೃಷೆ ತೋರದು. ಯೋಗವಂಗವಾದ ಬಳಿಕ ಸ್ವೇಚ್ಛಾಚಾರ ಬಿಡದು. ಅಘೋರತಪವ ಮಾಡಿದ ಬಳಿಕ ಮಹಾಸಿದ್ಧಿಗಳು ಬಿಡವು. ಒಂದೊಂದರಿಂದೊಂದೊಂದು ಸಿದ್ಧಿ. ಅಂಗ ಮೂರರಲ್ಲಿ ಲಿಂಗ ಸಂಬಂಧವಾಗಿ, ಲಿಂಗ ಮೂರರಲ್ಲಿ ವಸ್ತುತ್ರಯವ ಪೂಜಿಸಿ, ತತ್ಪ್ರಸಾದಗ್ರಾಹಕ ಭಕ್ತನಲ್ಲದೆ, ಬಾಲಬ್ರಹ್ಮಿಗೆ ಭಕ್ತನೆನಬಹುದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?
-
✍🏻ಬಸವ ಯೋಗಿ.ಸಿದ್ಧರಾಮೇಶ್ವರರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🦚🦚🦚✡️✡️✡️🦚🦚🦚 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ. ಲಿಂಗವ ನೋಡುವ ಕಂಗಳು ಪರಮಾತ್ಮನಿದಿರಲಿ ಕಟ್ಟಿಹ ನಿಲವುಗನ್ನಡಿ ಕಾಣಿರೊ. ಲಿಂಗವ ಕೊಂಡಾಡುವನ ಜಿಹ್ವೆ ಕೈಲಾಸದಲ್ಲಿ ಸಾರುವ ಪಾರಿಗಂಟೆ ಕಾಣಿರೊ ಲಿಂಗದ ಶ್ರುತಿಯ ಕೇಳುವನ [ಕಿವಿ] ಮಾಣಿಕ ಮುತ್ತಂ ಮುಚ್ಚಿಡುವ ಕರಡಿಗೆ ಕಾಣಿರೊ. ಲಿಂಗವ ಮುಟ್ಟಿ ಪೂಜಿಸಿದವನ ಹಸ್ತ ಸುಹಸ್ತ ಕಾಣಿರೊ. ಇಂತೀ ಲಿಂಗಾಂಗಸಂಗಮರಸದಲ್ಲಿಪ್ಪ ಶರಣಂಗೆ ಅಂಗವಿಕಾರವುಂಟೇನಯ್ಯಾ ? ಭೂತ ಸೋಂಕಿದ ಮೇಲೆ ಆತ್ಮನಗುಣ ಉಂಟೇನಯ್ಯಾ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗ ಸೋಂಕಿದ ಮೇಲೆ ಅಂಗಗುಣವುಂಟೇನಯ್ಯಾ ?
-
✍🏻ಹೇಮಗಲ್ಲ ಹಂಪನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🪴🪴🪴🪴🙏🏻🙏🏻 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi 
#yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷

ಕತ್ತಲಮನೆಯಲ್ಲಿರ್ದ ಮನಜನು, ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ ಬೆಂಕಿಯ ಹೊತ್ತಿಸದನ್ನಕ್ಕ ? ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ ಹತ್ತಿ ಹರಿಯದನ್ನಕ್ಕ ? ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ? ಹಾಂಗೆ, ಸಮ್ಯಗ್ಜ್ಞಾನಾತ್ಮಕವಾದ ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ, ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವನು ?

✍🏻ಚಿನ್ಮಯ ಜ್ಞಾನಿ.ಚೆನ್ನಬಸವಣ್ಣನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🦚🦚🦚🦚✡️✡️🦚🦚🦚🦚 #ರೇಮಚಿಂತನೆ 
#ವಚನಸಾಹಿತ್ಯ 
#yrqtjogi  #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷
ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ ಬಣ್ಣದ ಮಾತೇಕೊ ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ ಮಹಾಜ್ಞಾನಿಗಳ ಮಾತೇಕೊ ? ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?
-
✍🏻ಅಮುಗೆ ರಾಯಮ್ಮನವರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
✡️✡️✡️🙏🏻🙏🏻✡️✡️✡️ #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba

ರೇಣುಕೇಶ್ ಸದಾಶಿವಯ್ಯ

#ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba

read more
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷
ಅರ್ಥದಲ್ಲೇನೂ ಸುಖವಿಲ್ಲ. ಅರ್ಥವಗಳಿಸಿ ಆತ್ಮಪುತ್ರರ್ಗಿರಿಸಬೇಡ. ಆರಿಗಾರೂ ಇಲ್ಲ. ಶಿವನಲ್ಲದೆ ಹಿತವರಿಲ್ಲವೆಂದರಿದು, ಶಿವನೊಡವೆಯ ಶಿವನವರಿಗೆ ಕೊಡು ಮರುಳೆ. ಅರ್ಥದಲ್ಲೇನೂ ಸುಖವಿಲ್ಲ. ಅರ್ಥವನಾರ್ಜಿಸುವಲ್ಲಿ ದುಃಖ. ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ. ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ. ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ ಸುಖವಿಲ್ಲೆಂದರಿಯದೆ, ಧನದರ್ಥದ ಮರವೆಯಲ್ಲಿ ಬಳಲುತ್ತಿಹ, ಮನುಜರಿಗಿನ್ನಾವ ಗತಿಯಿಲ್ಲವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
✍🏻ಸ್ವತಂತ್ರ ಸಿದ್ಧಲಿಂಗೇಶ್ವರರ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
✡️✡️🙏🏻🙏🏻💐💐✡️✡️ #ರೇಮಚಿಂತನೆ 
#ವಚನಸಾಹಿತ್ಯ 
#yrqtjogi #yrqtbaba
loader
Home
Explore
Events
Notification
Profile