Nojoto: Largest Storytelling Platform

Best ಬಾ Shayari, Status, Quotes, Stories

Find the Best ಬಾ Shayari, Status, Quotes from top creators only on Nojoto App. Also find trending photos & videos about ಬಾಹುಬಲಿ 2 ಪಿಚ್ಚರ್, ಬಾಹುಬಲಿ 2 ಮೂವಿ, ಬಾ ತಂಗಿ ತವರಿಗೆ, ಬಾಯಿ ಕ್ಯಾನ್ಸರ್ ಲಕ್ಷಣಗಳು, ಬಾದಾಮಿ ಉಪಯೋಗ,

  • 2 Followers
  • 5 Stories
    PopularLatestVideo

ರಘು ಶಿವಸ್ವಾಮಿ

#ಬಾ ಗುರೂ ಜಿಂಜರ ಟೀ ☕️ಕುಡಿಯೋಣ..! ✨️🌿🌿🌿 #YourQuoteAndMine Collaborating with Kavya PatiL...🦋🍃

read more
ನಾ ಬರಕಿಲ್ಲ ಗುರು lockdown ಮುಗಿಯೊ ತನ್ಕ. #ಬಾ ಗುರೂ ಜಿಂಜರ ಟೀ ☕️ಕುಡಿಯೋಣ..!
✨️🌿🌿🌿 #YourQuoteAndMine
Collaborating with Kavya PatiL...🦋🍃

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಬಾ

read more
ಇರುಳ ಬಾನೊಳಗೆ 
ಬೆಳದಿಂಗಳಾಗಿ ಬಾ
ಹಗಲ ನಭದೊಳಗೆ 
ಹೊಂಗಿರಣವಾಗಿ ಬಾ
ಸುಮದ ಎದೆಯೊಳಗೆ 
ಮಕರಂದದಂದದಿ ಬಾ
ಸಾಗರದ ಎದೆಯೊಳಗೆ 
ಅಲೆಯಂತೆ ತೇಲಿ ಬಾ
ಬರಡು ಭೂಮಿಯಲ್ಲಿ 
ಒಲವ ಸೋನೆ ಸುರಿಯಲು ಬಾ
ಮಲೆನಾಡ ಬನಗಳಲಿ 
ಮೊರೆವ ಜಲಪಾತದಂತೆ ಧುಮುಕಿ ಬಾ
ವಿರಹದ ಬೇಗೆಯೊಳಗೆ 
ಬೆಂದ ಹೃದಯವ ತಣಿಸು ಬಾ
ಜೀವನದ ಪಯಣದಲಿ
ಒಲವ ಸಂಗಾತಿಯಾಗಿ ಬಾ

0825ಪಿಎಂ11102019

ಅಮು ಭಾವಜೀವಿ  #ಬಾ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಬಾ #ಸಾರಥಿ

read more

ಬಾ ಬಾ ಸಾರಥಿಯೇ
ಭಾವ ಭಾಗೀರಥಿಯೇ
ನನ್ನನ್ನು ಮುನ್ನಡೆಸು
ಅನ್ಯರಿಂದ ವಿಂಗಡಿಸು

ನಾ ಏರಬೇಕು ಆ ಎತ್ತರಕೆ
ಗುರಿಯ ತೋರಲು ಬಾ ಹತ್ತಿರಕೆ
ಸರಿದಾರಿಯನು ತೋರಿಸು
ಕೀರ್ತಿ ಮುಕುಟಕೆನ್ನ ಏರಿಸು

ನನ್ನ ಅಹಮಿಗೆ ಅಂಕುಶ ಹಾಕು
ನನ್ನ ದಾಹಕೆ ಸಂಜೀವಿನಿ ಸಾಕು
ನೀ ತಾ ನನ್ನ ಮುಂದೆ ಸವಾಲ
ಸಾಧಿಸಿಯೇ ತೀರುವೆ ದಣಿಯೊಲ್ಲ

ಬಿಸಿಲಿಗೆ ನಾ ಬತ್ತುವುದಿಲ್ಲ
ಸಿಹಿಗೆ ಮಾತ್ರವೇ ಮುತ್ತುವುದಿಲ್ಲ
ಕಹಿಯನ್ನು ಕುಡಿವೆ ಶಿವನಾಗಿ
ಬರದಲ್ಲು ದುಡಿವೆ ಕೃಷಿಕನಾಗಿ

ನನ್ನೊಳಗೆ ಚಿಮ್ಮಲಿ ಭಾವದೊರತೆ
ನಾನೇರುವೆಡೆ ಬಾರದಿರಲಿ ಕೊರತೆ
ತೊರೆಯಲ್ಲ ನನ್ನ ದೂಷಿಸಿದ ಕಾರಣಕೆ
ಮರೆಯಲ್ಲ ನನ್ನ ಬೆಳೆಸಿದ ಆ ಋಣಕೆ

ಎಲ್ಲರೊಳಗೊಂದಾಗಿ ನಾನು
ಭಿನ್ನವಾಗಿ ಬೆಳೆಯಬೇಕು
ತೃಣವಾದವನು ಅಣು ಅಣುವಾಗಿ
ಬೆಳೆದೆನೆಂಬ ಖ್ಯಾತಿ ನನ್ನದಾಗಬೇಕು.

ಅಮುಭಾವಜೀವಿ  #ಬಾ #ಸಾರಥಿ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಬಾ #ಗೆಳತಿ

read more
*ಬಾ ಗೆಳತಿ*

ಮಂಜಾನೆಯ ಮಂಜಿನ 
ಮೋಜಿಗೆ ಮನಸೋತು
ಖುಷಿ ಪಡುವ ಬಾ ಗೆಳತಿ 
ನಿನ್ನ ಕಾಲ್ಗೆಜ್ಜೆ ದನಿಗೆ 
ಮೆಲ್ಲ ಅರಳುವ ಹೂ ಕಂಪಿಗೆ
ಸಂಭ್ರಮಿಸುವ ದುಂಬಿಯಾಗೋಣ 
ಬಾ ಗೆಳತಿ 
ತಂಗಾಳಿಗೆ ತೂಗಾಡುವ
ಎಳೆ ಪೈರಿನ ನಡುವೆ ಕೂತ
ಒಲವ ಧ್ಯಾನ ಮಾಡೋಣ ಬಾ
ಎಲೆಮರೆಯಲಿ ಕೂತು 
ಹಾಡುವ ಹಕ್ಕಿಗಳ ಚಿಲಿಪಿಲಿ 
ಕೇಳುತ್ತಾ ನಲಿಯೋಣ ಬಾ
ದಿನವೆಲ್ಲ ಹೀಗೆ ಕಳೆದು
ಬಾಳಿನೆಲ್ಲ ಸುಖ ಪಡೆದು
ನೆಮ್ಮದಿಯ ಪಡೆಯೋಣ ಬಾ

*ಅಮು ಭಾವಜೀವಿ* #ಬಾ #ಗೆಳತಿ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಬಾ ಗೆಳೆಯ

read more
ನೀ ಬರುವ ದಾರಿಯಲಿ                    
ನನ್ನಹೊಂಗನಸ ರಂಗೋಲಿ     
ಮನಸು ಹೃದಯವೆಂಬ  
ಜೋಡಿ ಹಯಗಳೂಡಿ ಕಳಿಸಿರುವೆ 
ಪ್ರೀತಿ ರಥವನೇರಿ  
ಹೂ ನಗುವ ಚಾಟಿ   
ಬೀಸಿ ಬಾ ಗೆಳೆಯ    
 ನನ್ನೆದೆಯ ಅರಮನೆಗೆ   


ಅಮು ಭಾವಜೀವಿ 
  #ಬಾ ಗೆಳೆಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile