Nojoto: Largest Storytelling Platform

ಸೂರ್ಯೋದಯ... ಕೊಂಚ ಕೊಂಚವೇ ಇಣುಕಿ ನೋಡುತ ಮೆಲ್ಲ ಮೆಲ್ಲ

ಸೂರ್ಯೋದಯ... 

ಕೊಂಚ ಕೊಂಚವೇ ಇಣುಕಿ ನೋಡುತ 
ಮೆಲ್ಲ ಮೆಲ್ಲನೆ ಇಳೆಯ ತಾಕುತ 
ಬಂದನೀ ಭಾಸ್ಕರ 

ಬಾನ ಬನದಲಿ ಅಲೆಯಲೋಸುಗ 
ಬುವಿಗೆ ಮೆಲ್ಲನೆ ಬೆಳಕ ಚೆಲ್ಲುತ 
ಉಸಿರ ಎಳೆಗಳ ರಮಿಸ ಬರುತಿಹ ಈ ನೇಸರ 

ಹೊಸೆದ ಕನಸು ಕಳೆದು ಹೋದರೂ
ಹೊಸತು ಕನಸುಗಳ ಮತ್ತೆ ಕಟ್ಟುತ
ಭರವಸೆಯ ಬೆಳಕ ಹೊತ್ತು ತಂದನೀ ದಿನಕರ

©ಮಂಜಿನ ಬಿಂದು
  #ಸೂರ್ಯೋದಯ #ಮಂಜಿನ_ಬಿಂದು
manju2688167679824

...

New Creator

#ಸೂರ್ಯೋದಯ #ಮಂಜಿನ_ಬಿಂದು #ಕಾವ್ಯ

604 Views