Nojoto: Largest Storytelling Platform

ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ ಅಪರಾಧಿಯಾಗಿ ಅಲ್ಲ, ನಿನ

ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ
ಅಪರಾಧಿಯಾಗಿ ಅಲ್ಲ,
ನಿನ್ನ ಆಪ್ತಸಂಗಾತಿಯಾಗಿ...

ಕಣ್ಗಳ ಕೊಳದಲ್ಲಿ ತುಂಬಿಕೋ ಗೆಳೆಯ
ಮಿಂಚಾಗಿ ಅಲ್ಲ,
ನಿನ್ನ ಮನದ ಮುತ್ತಾಗಿ...

ಮನದ ಅರಮನೆಯಲ್ಲಿ ಬಿಗಿದಪ್ಪಿಕೋ ಗೆಳೆಯ
ಅರಸಿಯಾಗಿ ಅಲ್ಲ,
ನಿನ್ನೆದೆಯ ಉಸಿರಾಗಿ...

ಬದುಕ ದಾರಿಯಲಿ ಜೊತೆಯಾಗಿ ಹೆಜ್ಜೆ ಹಾಕು ಗೆಳೆಯ,
ಕೇವಲ ಗುರುತುಗಳಾಗಿ ಅಲ್ಲ,
ಹೃದಯದ ಹಚ್ಚ ಹಸುರಿನ ಹರುಷದ ಹಚ್ಚೆಗಳಾಗಿ....

©ಅಂಬಿಕಾ ಬಿಕೆ
  #Hug #Love #cuplegoals #love❤ #lobeyouforever #heart❤️💘beats #soulmatesforever #soulfulpoetry #Heart #love4life