Nojoto: Largest Storytelling Platform

ಮುಡಿವ ಮಲ್ಲಿಗೆಯಾಗಿ ಸುಮವ ನಾ ಬೀರಲೆ ಸಿಹಿಸೇಬು ಕೆನ್ನೆಯ ನ

ಮುಡಿವ ಮಲ್ಲಿಗೆಯಾಗಿ ಸುಮವ ನಾ ಬೀರಲೆ
ಸಿಹಿಸೇಬು ಕೆನ್ನೆಯ ನಾನೊಮ್ಮೆ ಕಚ್ಚಲೇ
ಕನಕ ಮೂಗುತಿಯಾಗಿ ನಾ ಹೊಳೆಯುತಿರಲೆ
ನನ್ನ ಸೆಳೆವ ಕಂಗಳಿಗೆ‌ ರೆಪ್ಪೆಯಾಗಿರಲೆ
ಕಿವಿಯೋಲೆಯಾಗಿ ಜೋಕಾಲಿ ಆಡಲೇ
ಮುಂಗುರುಳಾಗಿ ಇಳಿದು ಹಾರಾಡುತಿರಲೆ
ಕೈಗಳಿಗೆ‌ ಬಳೆಯಾಗಿ ನಾ ಬಳುಕುತಿರಲೆ
ನೀ ಉಡುವ ಸೀರೆಗೆ ಝರಿಯಾಗಿರಲೆ
ನೀ ನಡೆವ ಹೆಜ್ಜೆಯಲಿ ನಾ ಗೆಜ್ಜೆ ಸದ್ದಾಗಲೆ
ಪ್ರೀತಿಯ ಮನವರೆಸಿ ಸಂಗಾತಿಯಾಗಲೇ
ನಿನ್ನ ಮೌನವಾ ಮುರಿದು ನೀ ಹೇಳಲೇ... #ಹೇಳಿಬಿಡು #ಕಾಡದಿರು #ಕನ್ನಡ_ಬರಹಗಳು #yqjogi #yqjogi_kannada #love #kannadaquotes  #ನಿಶ್ಯಬ್ದ
ಮುಡಿವ ಮಲ್ಲಿಗೆಯಾಗಿ ಸುಮವ ನಾ ಬೀರಲೆ
ಸಿಹಿಸೇಬು ಕೆನ್ನೆಯ ನಾನೊಮ್ಮೆ ಕಚ್ಚಲೇ
ಕನಕ ಮೂಗುತಿಯಾಗಿ ನಾ ಹೊಳೆಯುತಿರಲೆ
ನನ್ನ ಸೆಳೆವ ಕಂಗಳಿಗೆ‌ ರೆಪ್ಪೆಯಾಗಿರಲೆ
ಕಿವಿಯೋಲೆಯಾಗಿ ಜೋಕಾಲಿ ಆಡಲೇ
ಮುಂಗುರುಳಾಗಿ ಇಳಿದು ಹಾರಾಡುತಿರಲೆ
ಕೈಗಳಿಗೆ‌ ಬಳೆಯಾಗಿ ನಾ ಬಳುಕುತಿರಲೆ
ನೀ ಉಡುವ ಸೀರೆಗೆ ಝರಿಯಾಗಿರಲೆ
ನೀ ನಡೆವ ಹೆಜ್ಜೆಯಲಿ ನಾ ಗೆಜ್ಜೆ ಸದ್ದಾಗಲೆ
ಪ್ರೀತಿಯ ಮನವರೆಸಿ ಸಂಗಾತಿಯಾಗಲೇ
ನಿನ್ನ ಮೌನವಾ ಮುರಿದು ನೀ ಹೇಳಲೇ... #ಹೇಳಿಬಿಡು #ಕಾಡದಿರು #ಕನ್ನಡ_ಬರಹಗಳು #yqjogi #yqjogi_kannada #love #kannadaquotes  #ನಿಶ್ಯಬ್ದ
vinayahegde9650

Vinaya Hegde

New Creator

#ಹೇಳಿಬಿಡು #ಕಾಡದಿರು #ಕನ್ನಡ_ಬರಹಗಳು #yqjogi #yqjogi_kannada love #kannadaquotes #ನಿಶ್ಯಬ್ದ