Nojoto: Largest Storytelling Platform

ಕನ್ನಡ..💛❤️ ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮ

ಕನ್ನಡ..💛❤️ ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸಬೇಕಷ್ಟೇ..,ಅದು ಮಾತು,ಬರಹ ಯಾವುದಕ್ಕೂ ನಿಲುಕುವುದಿಲ್ಲಾ ಅಳತೆಮೀರಿದ ಭಾವಗಳ ಗೊಂಚಲುಗಳೇ ಅಲ್ಲಿ ಇರುತ್ತಾವೆ.ಅಂತಹುದೇ ಒಂದು ಜೀವ,ಭಾವ ಈ "ಕನ್ನಡ".
ಎಲ್ಲಿಂದಲೋ ಓಡಿ ಬಂದು ಸುಮ್ಮನೆ ಆಮ್ಮನ ಮಡಿಲ ಅಪ್ಪಿದಂತೆ,ಕಾನನದ ನಡುವೆ ಅದರ ನೀರವ ಮೌನದ ಮಾತಿಗೆ ಕಣ್ಣು ಮುಚ್ಚಿ ನಿಂತಂತೆ,ಕಡಲ ತಡದಲಿ ನಿಂತು ಅಲೆಗಳ ಮಾತಿಗೆ ಕಿವಿಯಾದಂತೆ,ಇಷ್ಟ ದೈವದ ಸಾನಿಧ್ಯದಿ ಕೈಮುಗಿದು ಆರಾಧಿಸಿದಂತೆ..,ಮನಸ್ಸು.ಹೃದಯ ತುಂಬಿ ಬರುವ ಇಂತಹ ಭಾವಕ್ಕೆಲ್ಲಾ ಹೆಸರೇನುಂಟು.....?????
ಊಹ್ಮೂಂ ಹೇಳಲಾಗದು ಮಧುರಾನುಭೂತಿಯದು ಸುಮ್ಮನೆ ಅನುಭಿಸಬೇಕು. ಥೇಟ್ ಇಂತಹುದ್ದೇ ನೋಡಿ ಕನ್ನಡನಾಡು,ಕನ್ನಡ ಭಾಷೆ ಎಂದಾಗ ಮನಸ್ಸು ಅರಳಿ ಆಸ್ವಾದಿಸುವ ಆ ಅನುಭೂತಿ.
ಸಾವಿರಾರು ವರುಷಗಳ ಸುಧೀರ್ಘ ಇತಿಹಾಸ ಹೊತ್ತು ಮೆರೆವ ನಮ್ಮ ನುಡಿ" ಲಿಪಿಗಳ ರಾಣಿ".ಅಲ್ಲೆಲ್ಲೋ ದೂರದ ನಮ್ಮ ಭಾಷೆಯಿಲ್ಲದ ಊರಲ್ಲಿ ಕನ್ನಡದ ಒಂದು ನುಡಿ ಕೇಳಿದರು ಸಾಕು ತಟ್ಟನೆ ಕಿವಿ ನಿಮಿರಿ ಕಣ್ಣು ಅತ್ತ ಹೊರಳಿ ಬಿಡುತ್ತದೆ. ಓ ನೀವು ಕನ್ನಡದವರ ಅಂತ ಕೇಳಿ ತುಟಿಯರಳಿಸಿದಾಗ ಅವರು ನಮ್ಮವರೆನ್ನುವ ಒಂದೇ ಭಾವ ಅಲ್ಲಿ ಮೂಡುವುದು ಆ ಭಾವಕ್ಕಲ್ಲಿ ಹೆಸರೇನು..??
ಅಲ್ಲೆಲ್ಲೋ ಭಾವಗಳ ಹರವಿ ಕೂತ ವಿರಹ ಕವಿಯ ಭಾಷೆ ಕನ್ನಡ, ಪ್ರೇಮ ಕವಿಯ ಗೀತೆ ಕನ್ನಡ,ಕಂದನ ತೊದಲು ನುಡಿ ಕನ್ನಡ,ಕಣ್ಣ ತುಂಬಿ ಜಾರುವ ಹನಿ ಕನ್ನಡ,ಕಿಲ್ಲನೆ ನಕ್ಕ ನಗು ಕನ್ನಡ,ಕಪ್ಪು ಕಲ್ಲಿನ ಮೇಲೆ ಮೊದಲು ಮೂಡಿದ ಅಕ್ಷರ ಕನ್ನಡ,ಅಷ್ಟೇ ಯಾಕ..,ದಿನಂಪ್ರತಿ ಮುಗಿಲ ತುಂಬಾ ರಂಗಿನ ಕಂಪು ಚೆಲ್ಲಿ ರವಿ ಮೂಡುವ ಮೂಡಣದಲ್ಲೂ ರವಿ ಕರಗುವ ಆ ಇಳಿ ಸಂಜೆಯಲ್ಲೂ ಕಂಗೊಳಿಸುವುದು ಕನ್ನಡವೇ...,ಅಲ್ಲೆಲ್ಲೋ ಹಾದಿ ತುಂಬಾ ಹರಡಿ ಬಿದ್ದ ಗುಲ್ಮೂಹರ್ ಹೂವಿನದು ಮತ್ತೊಂದು ಬಗೆಯ ಕನ್ನಡ ಪ್ರೇಮ ಅದು ಕಂಪಿನಿಂದಲ್ಲಾ ಕನ್ನಡದಿಂದಲೇ  ಘಮಿಸುವುದು,ಸುಮ್ಮನೊಮ್ಮೆ ಕೈಗೆತ್ತಿಕೊಂಡು ನೋಡು ನಿಮ್ಮ ಹೃದಯಕ್ಕು ತಟ್ಟುತ್ತದೆ ಆ ಕಂಪು,ಮುತ್ತೈದೆಯೊಬ್ಬಳ ತುಂಬು ನಗೆಯಲ್ಲಿ ಅರುಳುವುದು ಇದೇ ಕನ್ನಡ ,ತಂಗಾಳಿ ಹೊತ್ತು ತರುವ ಮೆಲು ಧ್ವನಿ,ಹಕ್ಕಿಗಳ ಚಿಲಿಪಿಲಿ ಹೃದಯ ತಟ್ಟುವುದಿಲ್ಲಿ ಕನ್ನಡ ನುಡಿಯಿಂದಲೇ,ಪ್ರಕೃತಿಯೇ ಇಲ್ಲಿ ಈ ನಾಡು ನುಡಿಯ ಅಸ್ತಿತ್ವವ ಪ್ರತಿ ಕ್ಷಣ ಸಾರಿ ಸಾರಿ ಕೂಗಿ ಹೇಳುವಾಗ ಅದನ್ನೇ ಉಸಿರಾಡುವ ನಾವು ನೀವು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು  ಕನ್ನಡಗಿರಾಗಿ ಎದೆ ತಟ್ಟಿ ಹೇಳಲಿರಲಾದೀತೆ...!!! 
ನಾಡಿಗೊಂದು ಬಾಗಿನ ಕೊಟ್ಟು, ಅಕ್ಷರಗಳ ಮಡಿಲಕ್ಕಿ ತುಂಬಿ  ಅರಶಿನ ಕುಂಕುಮ ಇಟ್ಟು ತುಂಬು ಮುತ್ತೈದೆಯಾಗಿ ಸಿಂಗರಿಸಿಕೊಂಡು ನಿಂತ ನಾಡ ನೋಡಿ ಯಾರಿಗಾದರೂ ಕೈಮುಗಿಯದಿರಲಾದೀತೆ..,ಎದೆಗಪ್ಪಿಕೊಂಡು ನಿಂತ ಅಮ್ಮನ ಆರಾಧಿಸಲಾರದೀತೆ.., ಸಾವಿನಾಚೆಗಿನವರೆಗೂ ಎದೆಯಲ್ಲಿ ಮಿಡಿವ ಭಾವವೊಂದೇ,ನುಡಿವ ಭಾಷೆಯೊಂದೇ ಅದು
" ಕನ್ನಡ" ಎಲ್ಲೇ ಇರು ಹೇಗೆ ಇರು
ಸಾವಿರ ಭಾಷೆಗಳ ನೀ ಆಧರಿಸು ಆದರೆ ಕನ್ನಡವ ಬಿಡದೆ ಆರಾಧಿಸು....💛❤️

snehashilpa1705

ಮೌನ

New Creator

ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸಬೇಕಷ್ಟೇ..,ಅದು ಮಾತು,ಬರಹ ಯಾವುದಕ್ಕೂ ನಿಲುಕುವುದಿಲ್ಲಾ ಅಳತೆಮೀರಿದ ಭಾವಗಳ ಗೊಂಚಲುಗಳೇ ಅಲ್ಲಿ ಇರುತ್ತಾವೆ.ಅಂತಹುದೇ ಒಂದು ಜೀವ,ಭಾವ ಈ "ಕನ್ನಡ". ಎಲ್ಲಿಂದಲೋ ಓಡಿ ಬಂದು ಸುಮ್ಮನೆ ಆಮ್ಮನ ಮಡಿಲ ಅಪ್ಪಿದಂತೆ,ಕಾನನದ ನಡುವೆ ಅದರ ನೀರವ ಮೌನದ ಮಾತಿಗೆ ಕಣ್ಣು ಮುಚ್ಚಿ ನಿಂತಂತೆ,ಕಡಲ ತಡದಲಿ ನಿಂತು ಅಲೆಗಳ ಮಾತಿಗೆ ಕಿವಿಯಾದಂತೆ,ಇಷ್ಟ ದೈವದ ಸಾನಿಧ್ಯದಿ ಕೈಮುಗಿದು ಆರಾಧಿಸಿದಂತೆ..,ಮನಸ್ಸು.ಹೃದಯ ತುಂಬಿ ಬರುವ ಇಂತಹ ಭಾವಕ್ಕೆಲ್ಲಾ ಹೆಸರೇನುಂಟು.....????? ಊಹ್ಮೂಂ ಹೇಳಲಾಗದು ಮಧುರಾನುಭೂತಿಯದು ಸುಮ್ಮನೆ ಅನುಭಿಸಬೇಕು. ಥೇಟ್ ಇಂತಹುದ್ದೇ ನೋಡಿ ಕನ್ನಡನಾಡು,ಕನ್ನಡ ಭಾಷೆ ಎಂದಾಗ ಮನಸ್ಸು ಅರಳಿ ಆಸ್ವಾದಿಸುವ ಆ ಅನುಭೂತಿ. ಸಾವಿರಾರು ವರುಷಗಳ ಸುಧೀರ್ಘ ಇತಿಹಾಸ ಹೊತ್ತು ಮೆರೆವ ನಮ್ಮ ನುಡಿ" ಲಿಪಿಗಳ ರಾಣಿ".ಅಲ್ಲೆಲ್ಲೋ ದೂರದ ನಮ್ಮ ಭಾಷೆಯಿಲ್ಲದ ಊರಲ್ಲಿ ಕನ್ನಡದ ಒಂದು ನುಡಿ ಕೇಳಿದರು ಸಾಕು ತಟ್ಟನೆ ಕಿವಿ ನಿಮಿರಿ ಕಣ್ಣು ಅತ್ತ ಹೊರಳಿ ಬಿಡುತ್ತದೆ. ಓ ನೀವು ಕನ್ನಡದವರ ಅಂತ ಕೇಳಿ ತುಟಿಯರಳಿಸಿದಾಗ ಅವರು ನಮ್ಮವರೆನ್ನುವ ಒಂದೇ ಭಾವ ಅಲ್ಲಿ ಮೂಡುವುದು ಆ ಭಾವಕ್ಕಲ್ಲಿ ಹೆಸರೇನು..?? ಅಲ್ಲೆಲ್ಲೋ ಭಾವಗಳ ಹರವಿ ಕೂತ ವಿರಹ ಕವಿಯ ಭಾಷೆ ಕನ್ನಡ, ಪ್ರೇಮ ಕವಿಯ ಗೀತೆ ಕನ್ನಡ,ಕಂದನ ತೊದಲು ನುಡಿ ಕನ್ನಡ,ಕಣ್ಣ ತುಂಬಿ ಜಾರುವ ಹನಿ ಕನ್ನಡ,ಕಿಲ್ಲನೆ ನಕ್ಕ ನಗು ಕನ್ನಡ,ಕಪ್ಪು ಕಲ್ಲಿನ ಮೇಲೆ ಮೊದಲು ಮೂಡಿದ ಅಕ್ಷರ ಕನ್ನಡ,ಅಷ್ಟೇ ಯಾಕ..,ದಿನಂಪ್ರತಿ ಮುಗಿಲ ತುಂಬಾ ರಂಗಿನ ಕಂಪು ಚೆಲ್ಲಿ ರವಿ ಮೂಡುವ ಮೂಡಣದಲ್ಲೂ ರವಿ ಕರಗುವ ಆ ಇಳಿ ಸಂಜೆಯಲ್ಲೂ ಕಂಗೊಳಿಸುವುದು ಕನ್ನಡವೇ...,ಅಲ್ಲೆಲ್ಲೋ ಹಾದಿ ತುಂಬಾ ಹರಡಿ ಬಿದ್ದ ಗುಲ್ಮೂಹರ್ ಹೂವಿನದು ಮತ್ತೊಂದು ಬಗೆಯ ಕನ್ನಡ ಪ್ರೇಮ ಅದು ಕಂಪಿನಿಂದಲ್ಲಾ ಕನ್ನಡದಿಂದಲೇ ಘಮಿಸುವುದು,ಸುಮ್ಮನೊಮ್ಮೆ ಕೈಗೆತ್ತಿಕೊಂಡು ನೋಡು ನಿಮ್ಮ ಹೃದಯಕ್ಕು ತಟ್ಟುತ್ತದೆ ಆ ಕಂಪು,ಮುತ್ತೈದೆಯೊಬ್ಬಳ ತುಂಬು ನಗೆಯಲ್ಲಿ ಅರುಳುವುದು ಇದೇ ಕನ್ನಡ ,ತಂಗಾಳಿ ಹೊತ್ತು ತರುವ ಮೆಲು ಧ್ವನಿ,ಹಕ್ಕಿಗಳ ಚಿಲಿಪಿಲಿ ಹೃದಯ ತಟ್ಟುವುದಿಲ್ಲಿ ಕನ್ನಡ ನುಡಿಯಿಂದಲೇ,ಪ್ರಕೃತಿಯೇ ಇಲ್ಲಿ ಈ ನಾಡು ನುಡಿಯ ಅಸ್ತಿತ್ವವ ಪ್ರತಿ ಕ್ಷಣ ಸಾರಿ ಸಾರಿ ಕೂಗಿ ಹೇಳುವಾಗ ಅದನ್ನೇ ಉಸಿರಾಡುವ ನಾವು ನೀವು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಕನ್ನಡಗಿರಾಗಿ ಎದೆ ತಟ್ಟಿ ಹೇಳಲಿರಲಾದೀತೆ...!!! ನಾಡಿಗೊಂದು ಬಾಗಿನ ಕೊಟ್ಟು, ಅಕ್ಷರಗಳ ಮಡಿಲಕ್ಕಿ ತುಂಬಿ ಅರಶಿನ ಕುಂಕುಮ ಇಟ್ಟು ತುಂಬು ಮುತ್ತೈದೆಯಾಗಿ ಸಿಂಗರಿಸಿಕೊಂಡು ನಿಂತ ನಾಡ ನೋಡಿ ಯಾರಿಗಾದರೂ ಕೈಮುಗಿಯದಿರಲಾದೀತೆ..,ಎದೆಗಪ್ಪಿಕೊಂಡು ನಿಂತ ಅಮ್ಮನ ಆರಾಧಿಸಲಾರದೀತೆ.., ಸಾವಿನಾಚೆಗಿನವರೆಗೂ ಎದೆಯಲ್ಲಿ ಮಿಡಿವ ಭಾವವೊಂದೇ,ನುಡಿವ ಭಾಷೆಯೊಂದೇ ಅದು " ಕನ್ನಡ" ಎಲ್ಲೇ ಇರು ಹೇಗೆ ಇರು ಸಾವಿರ ಭಾಷೆಗಳ ನೀ ಆಧರಿಸು ಆದರೆ ಕನ್ನಡವ ಬಿಡದೆ ಆರಾಧಿಸು....💛❤️ #yqjogi_kannada #ಮೌನದಸ್ನೇಹಾ