Nojoto: Largest Storytelling Platform

Best ಮೌನದಸ್ನೇಹಾ Shayari, Status, Quotes, Stories

Find the Best ಮೌನದಸ್ನೇಹಾ Shayari, Status, Quotes from top creators only on Nojoto App. Also find trending photos & videos about

  • 1 Followers
  • 352 Stories

ಮೌನ

#ಮೌನದಸ್ನೇಹಾ #yqjogi #yqjogi_kannada #kannadaquotes

read more
ವಿದಾಯದ ಎಳೆಯೊಂದು 
ಅತಿಯಾಗಿ ಹೃದಯ ತಟ್ಟುತ್ತಿದೆ
ಕೊರಳ ಕಟ್ಟುತ್ತಿದೆ...;
ಕೈ ಯಾಕೋ ಇಂದು ಅನಿಸಿದ್ದು 
ಗೀಚಲು ತಡವರಿಸುತ್ತಿದೆ.
ನೋವಿಗೊಂದು ಅಳುವಿಗೊಂದು
ಎಂದೆಲ್ಲಾ ಕವನ ಗೀಚುವುದ ಕಲಿಸಿದ 
ವೇದಿಕೆಗೆ ಅಂತಿಮ ವಿದಾಯ ಹೇಳಲು. #ಮೌನದಸ್ನೇಹಾ 
#yqjogi #yqjogi_kannada #kannadaquotes

ಮೌನ

ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸಬೇಕಷ್ಟೇ..,ಅದು ಮಾತು,ಬರಹ ಯಾವುದಕ್ಕೂ ನಿಲುಕುವುದಿಲ್ಲಾ ಅಳತೆಮೀರಿದ ಭಾವಗಳ ಗೊಂಚಲುಗಳೇ ಅಲ್ಲಿ ಇರುತ್ತಾವೆ.ಅಂತಹುದೇ ಒಂದು ಜೀವ,ಭಾವ ಈ "ಕನ್ನಡ". ಎಲ್ಲಿಂದಲೋ ಓಡಿ ಬಂದು ಸುಮ್ಮನೆ ಆಮ್ಮನ ಮಡಿಲ ಅಪ್ಪಿದಂತೆ,ಕಾನನದ ನಡುವೆ ಅದರ ನೀರವ ಮೌನದ ಮಾತಿಗೆ ಕಣ್ಣು ಮುಚ್ಚಿ ನಿಂತಂತೆ,ಕಡಲ ತಡದಲಿ ನಿಂತು ಅಲೆಗಳ ಮಾತಿಗೆ ಕಿವಿಯಾದಂತೆ,ಇಷ್ಟ ದೈವದ ಸಾನಿಧ್ಯದಿ ಕೈಮುಗಿದು ಆರಾಧಿಸಿದಂತೆ..,ಮನಸ್ಸು.ಹೃದಯ ತುಂಬಿ ಬರುವ ಇಂತಹ ಭಾವಕ್ಕೆಲ್ಲಾ ಹೆಸರೇನುಂಟು.....????? ಊಹ್ಮೂಂ ಹೇಳಲಾಗದು ಮಧುರಾನುಭೂತಿಯದು ಸುಮ್ಮನೆ ಅನುಭಿಸಬೇಕು. ಥೇಟ್ ಇಂತಹುದ್ದೇ ನೋಡಿ #yqjogi_kannada #ಮೌನದಸ್ನೇಹಾ

read more
ಕನ್ನಡ..💛❤️ ಕೆಲವೊಂದಿಷ್ಟನ್ನು ವ್ಯಾಕ್ಯಾನಿಸಲಾಗದು ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸಬೇಕಷ್ಟೇ..,ಅದು ಮಾತು,ಬರಹ ಯಾವುದಕ್ಕೂ ನಿಲುಕುವುದಿಲ್ಲಾ ಅಳತೆಮೀರಿದ ಭಾವಗಳ ಗೊಂಚಲುಗಳೇ ಅಲ್ಲಿ ಇರುತ್ತಾವೆ.ಅಂತಹುದೇ ಒಂದು ಜೀವ,ಭಾವ ಈ "ಕನ್ನಡ".
ಎಲ್ಲಿಂದಲೋ ಓಡಿ ಬಂದು ಸುಮ್ಮನೆ ಆಮ್ಮನ ಮಡಿಲ ಅಪ್ಪಿದಂತೆ,ಕಾನನದ ನಡುವೆ ಅದರ ನೀರವ ಮೌನದ ಮಾತಿಗೆ ಕಣ್ಣು ಮುಚ್ಚಿ ನಿಂತಂತೆ,ಕಡಲ ತಡದಲಿ ನಿಂತು ಅಲೆಗಳ ಮಾತಿಗೆ ಕಿವಿಯಾದಂತೆ,ಇಷ್ಟ ದೈವದ ಸಾನಿಧ್ಯದಿ ಕೈಮುಗಿದು ಆರಾಧಿಸಿದಂತೆ..,ಮನಸ್ಸು.ಹೃದಯ ತುಂಬಿ ಬರುವ ಇಂತಹ ಭಾವಕ್ಕೆಲ್ಲಾ ಹೆಸರೇನುಂಟು.....?????
ಊಹ್ಮೂಂ ಹೇಳಲಾಗದು ಮಧುರಾನುಭೂತಿಯದು ಸುಮ್ಮನೆ ಅನುಭಿಸಬೇಕು. ಥೇಟ್ ಇಂತಹುದ್ದೇ ನೋಡಿ

ಮೌನ

#ಮೌನಹೃದಯ #ಮೌನದಸ್ನೇಹಾ #yqjogi #yqjogi_kannada

read more
ಬೆಳಕಿನೊಂದಿಗೆ ಕುಳಿತು ನಗುವವರ
ನಡುವೆ ತುಸು ಕತ್ತಲಿಗಾಗಿ 
ತಡಕಾಡುವವಳು ನಾನು..;
ನನ್ನೊಳಗಿನ ನನ್ನ ನಿಜವಾಗಿಯೂ
ಕತ್ತಲು ಅಪ್ಪಿ ಸಂತೈಸಿದಷ್ಟು
ಬೆಳಕು ಸಂತೈಸಲು 
ಮಡಿಲಿಗೇರಿಸಿಕೊಳ್ಳಲೇ ಇಲ್ಲಾ
ನನ್ನದು ಕತ್ತಲೊಂದಿಗಿನ 
ಆತ್ಮಾವಲೋಕನವೀಗ...!!!! #ಮೌನಹೃದಯ 
#ಮೌನದಸ್ನೇಹಾ
#yqjogi #yqjogi_kannada

ಮೌನ

#ಮೌನದಸ್ನೇಹಾ #yqjogi #yqjogi_kannada #kannadaquotes

read more
ಕೆಲವರಿಗೆ ನಗಲು ಬರದು
ಅಳಲು ಬರದು ಇಲ್ಲಿ...;
ನನ್ನಂತ ಹುಚ್ಚರಿರುವರು
ಅಳಬೇಕೆನಿಸಿದಾಗ ಕಣ್ಣು ತುಂಬಿ
ನಕ್ಕು ನಡೆವರು..,
ನಗಬೇಕೆನಿಸಿದಾಗ ಮನ ತುಂಬಿ
ಅತ್ತು ಬಿಡುವರು. #ಮೌನದಸ್ನೇಹಾ 
#yqjogi #yqjogi_kannada #kannadaquotes

ಮೌನ

ಕೃತಕ ನಗುವಿನ ಪರದೆ ಸರಸಿ ಪಳ್ಳನೆ ಕಣ್ಣುತುಂಬಿ ಅಮ್ಮ ನಗುವ ದಿನವೇ ಮನೆ ಮಂದಿಯದ್ದಿಲ್ಲಿ ಪ್ರೀತಿಯ ದೀಪಾವಳಿ...!! ★ ಕತ್ತಲೊಂದಿಗೆ ನಿತ್ಯ ಸೆಣಸಿ ಮಾಡಿನಲಿ ಇಣುಕುವ ಚಂದಿರನಿಗೂ ಅಣಕಿಸಿ ಬಡವನ ಗುಡಿಸಲ ಬೆಳಕಿಸೋ ಹಣತೆಯದ್ದಿಲ್ಲಿ #kannadaquotes #yqjogi_kannada #ಮೌನದಸ್ನೇಹಾ

read more
ದೀಪಾವಳಿ...!! ಕೃತಕ ನಗುವಿನ ಪರದೆ ಸರಸಿ
ಪಳ್ಳನೆ ಕಣ್ಣುತುಂಬಿ  ಅಮ್ಮ 
ನಗುವ ದಿನವೇ ಮನೆ ಮಂದಿಯದ್ದಿಲ್ಲಿ
ಪ್ರೀತಿಯ ದೀಪಾವಳಿ...!!
★
ಕತ್ತಲೊಂದಿಗೆ ನಿತ್ಯ ಸೆಣಸಿ ಮಾಡಿನಲಿ
ಇಣುಕುವ ಚಂದಿರನಿಗೂ ಅಣಕಿಸಿ 
ಬಡವನ ಗುಡಿಸಲ ಬೆಳಕಿಸೋ ಹಣತೆಯದ್ದಿಲ್ಲಿ

ಮೌನ

#ಮೌನದಸ್ನೇಹಾ #yqjogi #yqjogi_kannada

read more
ಮಣ್ಣ ಹಣತೆಯೊಂದು ಬೆಳಕ ರೂಪಕ
ಹಚ್ಚಿದ ಕಣ್ಣಲ್ಲಿ ಮತ್ತೆ ಮತ್ತೆ ಮಿನುಗಿದಾಗಲೇ
ಅದು ತಮವನ್ನಳಿಸಿದ ದ್ಯೋತಕ...!!!

ದೀಪಾವಳಿ ಹಬ್ಬದ ಶುಭಾಶಯಗಳು #ಮೌನದಸ್ನೇಹಾ 
#yqjogi #yqjogi_kannada

ಮೌನ

#ಮೌನದಸ್ನೇಹಾ #yqjogi #yqjogi_kannada

read more
ನೀನೆನೊ ಪ್ರಶ್ನೆಗಳಿಟ್ಟು
ಸರಿದು ಬಿಟ್ಟೆ..;
ಪ್ರತಿ ಕ್ಷಣ ಉತ್ತರಕ್ಕಾಗಿ 
ತಡಕಾಡುತ್ತಿರುವೇ
ಇದ್ದ ಆತ್ಮೀಯ ಬಂಧವನ್ನು
ಕಳೆದುಕೊಂಡು. #ಮೌನದಸ್ನೇಹಾ 
#yqjogi #yqjogi_kannada

ಮೌನ

#yqjogi #yqjogi_kannada #ಮೌನದಸ್ನೇಹಾ

read more
ಆಯ್ಕೆಗೂ ಆದ್ಯತೆಗೂ...
ವ್ಯತ್ಯಾಸ ಬಹಳ...;
ಭ್ರಮೆಯೊಳಗಿನ ಬಂಧ 
ಭ್ರಮೆಯೊಳಗಷ್ಟೇ ಚಂದ
ವಾಸ್ತವಕ್ಕೆ ತೀರಾ ದೂರವೇ. #yqjogi #yqjogi_kannada #ಮೌನದಸ್ನೇಹಾ

ಮೌನ

ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್ ಇರಲಿ,ಅಥವಾ ಎದುರು ಸಿಕ್ಕಾಗಲೇ ಇರಲಿ ಕುಶಲೋಪರಿಯ ನಂತರ ಕಾಂತಾರ ನೋಡಿದ್ಯಾ ನೀನು ಅನ್ನುವುದು ಕಾಮನ್ ಡೈಲಾಗ್ ಆಗಿದೆ.. ಅದು ನಮ್ಮಲ್ಲಿ ಎಷ್ಟರ್ ಮಟ್ಟಿಗೆ ಕ್ಯೂರಾಸಿಟಿ ಹುಟ್ಟು ಹಾಕಿದೆ ಎಂದರೆ ಫಿಲ್ಮ್ ಎಂದರೆ ಆಗದ ಅಮ್ಮನು ಕೂಡ ಕಾಂತಾರ ನೋಡಿ ಬರುವನಾ ಎನ್ನುವುದರ ಜೊತೆಗೆ,ಮೊದಲ ಸಲ ನಾನಾಗೀಯೇ ಫಿಲ್ಮ್ ಗೆ ಹೋಗಬೇಕು ಎನ್ನುವ ನನ್ನ ಬಲವಾದ ಆಲೋಚನೆವರಿಗೆ ವ್ಯಾಪಿಸಿಬಿಟ್ಟಿದೆ. ನನಗೆ ಈ ಸಿನಿಮಾ ಗೀಳು ಮೊದಲಿಂದಲೂ ಕಡಿಮೆ ನೋಡುವುದೇ ಇಲ್ಲವೆಂದಲ್ಲಾ ತೀರಾ ಬೇಸರವೆನಿಸಿದಾಗ ಟಿವಿಯಲ್ಲೊ ಮೊಬೈಲ್ ಅಲ್ಲಿಯೋ ನೋಡಿ ಅಭ್ಯಾಸ,ಥಿಯೇಟರ್ ಮೆಟ್ಟಿಲು ತುಳಿದಿದ್ದು ಒಂದು ನಾಲ್ಕರಿಂದ ಐದು ಬಾರಿ ಅಷ್ಟ #kannadaquotes #yqjogi_kannada #ಮೌನದಸ್ನೇಹಾ

read more
ದಂತ ಕಥೆಯಲ್ಲೊಂದು ನೈಜಕಥೆ ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್ ಇರಲಿ,ಅಥವಾ ಎದುರು ಸಿಕ್ಕಾಗಲೇ ಇರಲಿ ಕುಶಲೋಪರಿಯ ನಂತರ ಕಾಂತಾರ ನೋಡಿದ್ಯಾ ನೀನು ಅನ್ನುವುದು ಕಾಮನ್ ಡೈಲಾಗ್ ಆಗಿದೆ.. ಅದು ನಮ್ಮಲ್ಲಿ ಎಷ್ಟರ್ ಮಟ್ಟಿಗೆ ಕ್ಯೂರಾಸಿಟಿ ಹುಟ್ಟು ಹಾಕಿದೆ ಎಂದರೆ ಫಿಲ್ಮ್ ಎಂದರೆ ಆಗದ ಅಮ್ಮನು ಕೂಡ ಕಾಂತಾರ ನೋಡಿ ಬರುವನಾ ಎನ್ನುವುದರ ಜೊತೆಗೆ,ಮೊದಲ ಸಲ ನಾನಾಗೀಯೇ ಫಿಲ್ಮ್ ಗೆ ಹೋಗಬೇಕು ಎನ್ನುವ ನನ್ನ ಬಲವಾದ ಆಲೋಚನೆವರಿಗೆ ವ್ಯಾಪಿಸಿಬಿಟ್ಟಿದೆ.
ನನಗೆ ಈ ಸಿನಿಮಾ ಗೀಳು ಮೊದಲಿಂದಲೂ ಕಡಿಮೆ ನೋಡುವುದೇ ಇಲ್ಲವೆಂದಲ್ಲಾ ತೀರಾ ಬೇಸರವೆನಿಸಿದಾಗ ಟಿವಿಯಲ್ಲೊ ಮೊಬೈಲ್ ಅಲ್ಲಿಯೋ ನೋಡಿ ಅಭ್ಯಾಸ,ಥಿಯೇಟರ್ ಮೆಟ್ಟಿಲು ತುಳಿದಿದ್ದು ಒಂದು ನಾಲ್ಕರಿಂದ ಐದು ಬಾರಿ ಅಷ್ಟ

ಮೌನ

#ಮೌನದಸ್ನೇಹಾ #ಕಡಲು #yqdidi #yqjogi #yqjogi_kannada

read more
ಕಪ್ಪಿನಲೂ ಕರಗೋ ಕತ್ತಲಿಗಿದೆ
ತುಣುಕು ದೋಣಿಯ ಮಿಣುಕು
ಬೆಳಕ ತಾಪ...;
ಮನವ ಕದಡಿದ ತೀರದೂರಿನ
ಒಲವ ಕಂಗಳಲಿ ಪ್ರಶ್ನೆಗಳಿವೇ
ಕಡಲ ಎದೆಯಲ್ಯಾರು ಹಚ್ಚಿಟ್ಟರು
ಉರಿವ ಆ ಒಂಟಿ ದೀಪ...??? #ಮೌನದಸ್ನೇಹಾ 
#ಕಡಲು 
#yqdidi  #yqjogi #yqjogi_kannada
loader
Home
Explore
Events
Notification
Profile