Nojoto: Largest Storytelling Platform

ಭೂಮಿಯೊಂದು ಏಕೈಕ ಜೀವ ಗ್ರಹವಿದು ಸೌರವ್ಯೂಹದಲ್ಲಿಯೇ ವಿಶೇಷವ

ಭೂಮಿಯೊಂದು ಏಕೈಕ ಜೀವ ಗ್ರಹವಿದು
ಸೌರವ್ಯೂಹದಲ್ಲಿಯೇ ವಿಶೇಷವಾದುದು
ಕಿತ್ತಳೆಯ ಆಕಾರ,ಸಕಲ ಜೀವ ಸಂಕುಲದಿ
ಸೂರ್ಯನಿಂದ ೩ನೇ,ಗಾತ್ರದಲ್ಲಿ ೫ನೇ ಗ್ರಹವಾದುದು.

ಪೂರ್ವದಿಂದ ಪಶ್ಚಿಮಕ್ಕೆ ಎಳೆದಿರುವ 
ಕಾಲ್ಪನಿಕ ರೇಖೆಗಳೇ ಅಕ್ಷಾಂಶಗಳು
ಉತ್ತರಕ್ಕೆ ೯೦ ದಕ್ಷಿಣಕ್ಕೆ ೯೦ ಒಟ್ಟು ೧೮೦ ಅಕ್ಷಾಂಶವು
ಗೋಳವನ್ನು ಸಮವಾಗಿ ವಿಭಜಿಸುವ 
೦° ರೇಖೆಯನ್ನು ಸಮಭಾಜಕ ವೃತ್ತವೆಂದರು

೨೩೧/೨° ಉತ್ತರದ ಗೆರೆಯನ್ನು
ಕರ್ಕಾಟಕ ಸಂಕ್ರಾಂತಿ ವೃತ್ತವೆಂದರು
ಭಾರತದಿ ಹಾದು ಹೋದ ಈ ರೇಖೆಯು
 'ಪಮ್ಮಿಮಗು ರಾಜಾಛತ್ರಿ' ೮ ರಾಜ್ಯಗಳ ಮೇಲೆ 
ಹಾದು ಹೋಗುವದು.

೨೩೧/೨° ದಕ್ಷಿಣದ ಗೆರೆಯನ್ನು
ಮಕರ ಸಂಕ್ರಾಂತಿ ವೃತ್ತವೆಂದರು
ಸ್ಥಳ ಮತ್ತು ದಿಕ್ಕನ್ನು ತಿಳಿಯಲಿಕ್ಕೆ
ಅಕ್ಷಾಂಶಗಳೇ ನಮಗೆ ಸಹಾಯವೆಂದರು.

ದಕ್ಷಿಣ ಧೃವದಿಂ ಉತ್ತರ ಧೃವಕೂ ಎಳೆದಿರುವ
ಕಾಲ್ಪನಿಕ ರೇಖೆಗಳೇ  ರೇಖಾಂಶಗಳು
ಪೂರ್ವಕ್ಕೆ ೧೮೦ ಪಶ್ಚಿಮಕ್ಕೆ ೧೮೦
ಒಟ್ಟು ೩೬೦ ರೇಖಾಂಶಗಳು
೦° ಗ್ರೀನ್ವಿಚ್ ರೇಖೆಯು ಲಂಡನ್ ನಗರದ ಮೇಲೆ 
ಹಾದು ಹೋಗುವುದು

೮೨೧/೨ ಪೂರ್ವದ ರೇಖಾಂಶವು 
ಭಾರತದ(ಅಲಹಾಬಾದ್) ಪ್ರಮಾಣಿತ ವೇಳೆ ಎಂದರು.
ಲಂಡನ್ ದಿಂದ ಭಾರತಕ್ಕೆ ಸಮಯದಂತರ 
೫.೩೦ ಗಂಟೆ ಮುಂದೆ ಇರುವುದು
೧೮೦° ರೇಖಾಂಶದ ಗೆರೆಯನ್ನು
ಅಂತರಾಷ್ಟ್ರೀಯ ದಿನಾಂಕವೆಂದರು
ಅಂಕುಡೊಂಕಾದ ಈ ಗೆರೆಯು
ಪೆಸಿಫಿಕ್ ಸಾಗರದಿ ಕಂಡುಬರುವುದು.

ಕು. ಸುರೇಖಾ ಆಸಂಗಿ.
ಸಮಾಜ ವಿಜ್ಞಾನ, ಶಿಕ್ಷಕಿಯರು ಸಾ: ಚಂದನಹೊಸುರ

©Lakumikanda Mukunda
  #Sureka Asangi #lakumikanda #Learn India