Nojoto: Largest Storytelling Platform
thejasmurthy2885
  • 193Stories
  • 1Followers
  • 0Love
    0Views

Thejas Murthy

  • Popular
  • Latest
  • Video
15684fd50d91a2208b90afc9f215ab1b

Thejas Murthy

"ಬೆವರಿದೆ ಬಾಳು
ಮುಂದಿದೆ ಧೂಳು,
ವಿಧಿಗೆರಗಂಟಿದೆ ದುಃಖ,
ಎಷ್ಟೇ ತೊಳೆದರೂ ತೊಲಗದ ಗೋಳು,
ಇದು ಇನ್ನೆಷ್ಟು ದಿನಗಳ ತನಕ." ಬದಲಾವಣೆಯ ಧೂಳು. ಒಂಟಿತನದ ಗೋಳು. ತೀರಾ ನಿಶ್ಚಲ ಬಾಳು. 

#ಗೋಳುಬಾಳು #ಕನ್ನಡ #kannada #yqkannada YourQuote Jogi

ಬದಲಾವಣೆಯ ಧೂಳು. ಒಂಟಿತನದ ಗೋಳು. ತೀರಾ ನಿಶ್ಚಲ ಬಾಳು. #ಗೋಳುಬಾಳು #ಕನ್ನಡ #kannada #yqkannada YourQuote Jogi

15684fd50d91a2208b90afc9f215ab1b

Thejas Murthy

"ಬಲುದೂರದ‌ ನಡಿಗೆಯಿದು
ಇಲ್ಲಿ,
ಏಕಾಂತವೇ ಸಂಗಾತಿ,
ನೆನಪುಗಳೇ ನೆರಳು.
ಮುಗಿಸಲೇಬೇಕಾದ ಪಯಣವಿದು
ಇಲ್ಲಿ,
ಬಾಳೊಂದೇ ಮಂದಗತಿ,
ಮತ್ತೆಲ್ಲಾ ತೀವ್ರ ಉರುಳು." ಈ ಅನಿವಾರ್ಯ ಪಯಣದಿ ನಂಬಿಕೆಯಿರಲಿ, ಮನಸ್ಸು ತಲ್ಲಣಿಸದಿರಲಿ. 

#ಅನಿವಾರ್ಯಪಯಣ #ಕನ್ನಡ #kannada #yqkannada YourQuote Jogi

ಈ ಅನಿವಾರ್ಯ ಪಯಣದಿ ನಂಬಿಕೆಯಿರಲಿ, ಮನಸ್ಸು ತಲ್ಲಣಿಸದಿರಲಿ. #ಅನಿವಾರ್ಯಪಯಣ #ಕನ್ನಡ #kannada #yqkannada YourQuote Jogi

15684fd50d91a2208b90afc9f215ab1b

Thejas Murthy

"ಬದುಕಿನ ಸನ್ನಿವೇಶಗಳೇ ಅಂತಹದ್ದು ರೀ. ದಿನಾ ಮಳೆ‌ ಬರಬಹುದೇನೋ ಅಂತ ಛತ್ರಿ ಹಿಡಿದು ತೆರಳುವಾಗ ಬಾರದ ಮಳೆ, ಛತ್ರಿ ಮರೆತು ಬಂದ ದಿನವೇ ಭಯಂಕರವಾಗಿ ಅಪ್ಪಳಿಸುತ್ತದೆ. ಅದೇನೋ‌ ವಿಧಿಯೇ ನಮ್ಮನ್ನು ಮಳೆಯಲ್ಲಿ ತೊಯ್ಯಿಸಲು ಕುದ್ದಾಗಿ ನಿರ್ಧರಿಸಿದಂತೆ." "ಮತ್ಯಾಕೆ ನೆಂದು ಹೋಗುವ ಭಯ?!" 

#ಮಳೆ #ಕನ್ನಡ #kannada #yqkannada YourQuote Jogi

"ಮತ್ಯಾಕೆ ನೆಂದು ಹೋಗುವ ಭಯ?!" #ಮಳೆ #ಕನ್ನಡ #kannada #yqkannada YourQuote Jogi

15684fd50d91a2208b90afc9f215ab1b

Thejas Murthy

"ಬರವಣಿಗೆ ಮಾತ್ರ ನಿಲ್ಬಾರ್ದು ಕಣ್ರಿ!" ದಿನಾಂಕ: ೧೩-೧೧-೨೦೨೨

ಬಲು ದಿನಗಳ ಬಳಿಕ ಮತ್ತೆ ಬರೆಯುತ್ತಿದ್ದೇನೆ. ತಿಂಗಳಗಳ ಹಿಂದೆ ಸಂಭವಿಸಿದ ಲೇಖನಿ, ಹಾಳೆ, ಮನಸ್ಸು ಮತ್ತು ನನ್ನ ನಡುವಿನ ಭಯಂಕರ ಜಗಳವೇ ಈ ಬರಹಸ್ಥಗಿತಕ್ಕೆ ಕಾರಣ. ಬದಲಾದ ಜಾಗ, ಜಾಗ ಬಿಟ್ಟರೂ ಹಿಂದೆಯೇ ಬಂದು ಬಂದು ಕಾಡಿದ ನೆನಪುಗಳು, ಇವೆಲ್ಲವೂ ಮನಸ್ಸನ್ನೊಂದು ಕ್ಷಣ ಗದ್ದಲಗೊಳಿಸಿದ್ದಲ್ಲದೇ, ಲೇಖನಿ ಹಾಳೆಯ ಮಿಲನಕ್ಕೆ ಬೇಕಾದ ಕವಿಮನದ ಉಪಸ್ಥಿತಿಯಿರದಿರೆ ತನ್ನ ಮೇಲೆ‌  ಕೋಪಿಸಿಕೊಂಡಿದ್ದವು. 

ಬೆಂಗಳೂರಿಗೆ ಬಂದದ್ದೆ ತಡ ಕಣ್ರಿ. ಹಿಂದೆಬಿದ್ದ ನೆನಪುಗಳೊಡನೆ, " ಅಯ್ಯೋ, ಮೈಸೂರು ಮೂಡಿಗೆರೆ ಜೀವ್ನಾನೆ ಚೆನ್ನಾಗಿತ್ತು" ಎಂಬ ಪೆಚ್ಚುಮೋರೆಯ ರಾಗವೂ ಜೊತೆಯಾಯ್ತು. ಹೀಗೆ ಬಂದವನ ಮನಸ್ಸು ಹಾಗೂ ಹಾ

ದಿನಾಂಕ: ೧೩-೧೧-೨೦೨೨ ಬಲು ದಿನಗಳ ಬಳಿಕ ಮತ್ತೆ ಬರೆಯುತ್ತಿದ್ದೇನೆ. ತಿಂಗಳಗಳ ಹಿಂದೆ ಸಂಭವಿಸಿದ ಲೇಖನಿ, ಹಾಳೆ, ಮನಸ್ಸು ಮತ್ತು ನನ್ನ ನಡುವಿನ ಭಯಂಕರ ಜಗಳವೇ ಈ ಬರಹಸ್ಥಗಿತಕ್ಕೆ ಕಾರಣ. ಬದಲಾದ ಜಾಗ, ಜಾಗ ಬಿಟ್ಟರೂ ಹಿಂದೆಯೇ ಬಂದು ಬಂದು ಕಾಡಿದ ನೆನಪುಗಳು, ಇವೆಲ್ಲವೂ ಮನಸ್ಸನ್ನೊಂದು ಕ್ಷಣ ಗದ್ದಲಗೊಳಿಸಿದ್ದಲ್ಲದೇ, ಲೇಖನಿ ಹಾಳೆಯ ಮಿಲನಕ್ಕೆ ಬೇಕಾದ ಕವಿಮನದ ಉಪಸ್ಥಿತಿಯಿರದಿರೆ ತನ್ನ ಮೇಲೆ‌ ಕೋಪಿಸಿಕೊಂಡಿದ್ದವು. ಬೆಂಗಳೂರಿಗೆ ಬಂದದ್ದೆ ತಡ ಕಣ್ರಿ. ಹಿಂದೆಬಿದ್ದ ನೆನಪುಗಳೊಡನೆ, " ಅಯ್ಯೋ, ಮೈಸೂರು ಮೂಡಿಗೆರೆ ಜೀವ್ನಾನೆ ಚೆನ್ನಾಗಿತ್ತು" ಎಂಬ ಪೆಚ್ಚುಮೋರೆಯ ರಾಗವೂ ಜೊತೆಯಾಯ್ತು. ಹೀಗೆ ಬಂದವನ ಮನಸ್ಸು ಹಾಗೂ ಹಾ #ಕನ್ನಡ #yqkannada #ಹೊಸಪ್ರಾರಂಭ #ಮತ್ತೆಶುರು #WeLoveYouYQ

15684fd50d91a2208b90afc9f215ab1b

Thejas Murthy

"ಬಂದದ್ದು ಬರಲಿ
ನಂಬುಗೆಯು ಇರಲಿ,
ತುಂಬಿರಲಿ ನಿನ್ನಲ್ಲಿ 
ನವವಸಂತ! 
ಕಷ್ಟಗಳು ಉರುಳಿ 
ಸಂತಸವು ಅರಳಿ,
ಮೂಡುವುದು ಬಾಳಲ್ಲಿ 
ಹೊಸದಿಗಂತ!" ಕಷ್ಟಗಳೆಂದೂ ಶಾಶ್ವತವಲ್ಲ, ನೆನಪಿರಲಿ!

#ಹೊಸದಿಗಂತ #ಕನ್ನಡ #yqkannada #kannada #yqjogi YourQuote Jogi

ಕಷ್ಟಗಳೆಂದೂ ಶಾಶ್ವತವಲ್ಲ, ನೆನಪಿರಲಿ! #ಹೊಸದಿಗಂತ #ಕನ್ನಡ #yqkannada #kannada #yqjogi YourQuote Jogi

15684fd50d91a2208b90afc9f215ab1b

Thejas Murthy

ನನ್ನಿಷ್ಟದ ಹಾಡೆಲ್ಲವ ನೀ ಹಾಡುತಲಿರಲು,
ನಿನ್ನನ್ನೂ ಕೊಂಚ ಹಾಡಿಬಿಡು,
ಭಾವಲೋಕದ ರಾಗವಾಗಿ,
ಅವನಿ ಮಿಹಿರದೊಲುಮೆಯಾಗಿ,
ಹಾಡಿಬಿಡೆ ಒಡನೋದಿ 
ನನ್ನಿಷ್ಟವೇ ನೀನು,
ತಲೆಬಾಗಿ ಮುಗುಳ್ನಕ್ಕಿ 
ಸೋತುಬಿಡುವೆ ನಾನು! ನನ್ನಿಷ್ಟದ ಹಾಡು, ನೀನು! 

#ನೀನು #ಕನ್ನಡ #you #kannada #yqkannada YourQuote Jogi

ನನ್ನಿಷ್ಟದ ಹಾಡು, ನೀನು! #ನೀನು #ಕನ್ನಡ #you #kannada #yqkannada YourQuote Jogi

15684fd50d91a2208b90afc9f215ab1b

Thejas Murthy

ಬದಿಯಿಟ್ಟ ಕೊಡೆಯದು
ಮರೆತಲ್ಲೆ ಮರೆಯಾಯ್ತು,
ನೆನಪಿಸಲು ಇರಲಿಲ್ಲ
ಸದಾ ಇದ್ದ ಮಳೆ.
ಜೊತೆಗಿದ್ದ ಕೊಡೆಯನ್ನು 
ತಾನ್ ಮರೆತು ಬಂದಂತೆ,
ಬಾನೂ ಮರೆತಿತ್ತು ನೋಡ,
ಮತ್ತೆಂದೂ ಮೂಡಲೇ ಇಲ್ಲ ಮೋಡ! ಕಳೆದುಹೋದ ಕೊಡೆಗೆ ಹೀಗೊಂದು ಸಂತಾಪ! 

#ಕಳೆದುಹೋದಕೊಡೆ #ಕನ್ನಡ #lostumbrella #kannada #yqkannada #yqjogi YourQuote Jogi

ಕಳೆದುಹೋದ ಕೊಡೆಗೆ ಹೀಗೊಂದು ಸಂತಾಪ! #ಕಳೆದುಹೋದಕೊಡೆ #ಕನ್ನಡ #lostumbrella #kannada #yqkannada #yqjogi YourQuote Jogi

15684fd50d91a2208b90afc9f215ab1b

Thejas Murthy

ಬೇಗುದಿಯ ಬೆನ್ನೇರಿ ಬಂತು ಭಾರಿ ನಿದ್ರೆ,
ಮನದೊಳು ಹೊಕ್ಕಿ ನೆನಕೆಗಳ ಹೆಕ್ಕಿ
ಕೆದರುತ್ತಾ ತಲೆಯೊಳಗೆ - ಕಳವಳದ‌ ಹಕ್ಕಿ,
ಕಣ್ಣೊಳಗೆ ಕೂಡುತ್ತಾ ರೆಪ್ಪೆಗಳನ್ನೂ ಜಗ್ಗುತ್ತಾ,
ಮಲಗೆಂದು ಪೀಡಿಸಿತು‌ ಹಾಡಿತೊಂದು ಹಾಡು,
ಉದ್ಭವಿಸಿತು ಹೀಗೊಂದು ಪೀಕಲಾಟದ ಪಾಡು! #ಕಾಗದಕಾಣದಕವನಗಳು 

ಇರುಳು ಅರ್ಧಕಳೆದರೂ ನಿದ್ರೆ ಕಾಣದ ಕಂಗಳು ಮನಸ್ಸಿನೊಡನೆ ಭಾವನೆಗಳ ವಿನಿಮಯ ಮಾಡುವಾಗ "ಏನಕ್ಕೂ ಇರ್ಲಿ" ಎಂದು ಟಿಪ್ಪಣಿಸಿಕೊಂಡ ಲೆಕ್ಕದ ಸಾಲುಗಳಿಂದ ಕೆಲವೊಂದು ಸಾಲು, ಈ ಹಗಲ ಬೆಳಕಿನಲ್ಲಿ! 

ಹೀಗೊಂದು ಅದ್ಭುತವಾದ ಉಡುಗೊರೆಗೆ ಧನ್ಯವಾದ, BHAVITHA K C

#ನಿದಿರೆ #ಕನ್ನಡ #kannada #yqkannada #yqjogi #sleep YourQuote Jogi

#ಕಾಗದಕಾಣದಕವನಗಳು ಇರುಳು ಅರ್ಧಕಳೆದರೂ ನಿದ್ರೆ ಕಾಣದ ಕಂಗಳು ಮನಸ್ಸಿನೊಡನೆ ಭಾವನೆಗಳ ವಿನಿಮಯ ಮಾಡುವಾಗ "ಏನಕ್ಕೂ ಇರ್ಲಿ" ಎಂದು ಟಿಪ್ಪಣಿಸಿಕೊಂಡ ಲೆಕ್ಕದ ಸಾಲುಗಳಿಂದ ಕೆಲವೊಂದು ಸಾಲು, ಈ ಹಗಲ ಬೆಳಕಿನಲ್ಲಿ! ಹೀಗೊಂದು ಅದ್ಭುತವಾದ ಉಡುಗೊರೆಗೆ ಧನ್ಯವಾದ, BHAVITHA K C #ನಿದಿರೆ #ಕನ್ನಡ #kannada #yqkannada #yqjogi #sleep YourQuote Jogi

15684fd50d91a2208b90afc9f215ab1b

Thejas Murthy

"ಒಲವಿನ ನೆನಪಲೆ ನರಳುತಲಿರುವೆ,
ಸಮಯವೇ ನೀ ಬೇಗುರುಳದಿರೆ,
ನಿನ್ನನೂ ದಾಟಿ ಬರುವಳು ಆಕೆ,
ಅಗಲಿಕೆ ಅಸದಳ ನಮ್ಮಾನಡುವೆ!" #ಕಾಗದಕಾಣದಕವನಗಳು 

"ಈ ಕವನವನ್ನು ಇಂದು ಪ್ರಕಟಿಸಲು ಯಾವುದೇ ರೀತಿಯ ದೃಢಕಾರಣಗಳು ಇರದಿದ್ದರೂ ಎದ್ದ ತಕ್ಷಣ ಸಂಭವಿಸಿದ ದಿಢೀರ್ ಯೋಚನಾಕಂಪನಕ್ಕೆ ಜೋಡಿಸಿಟ್ಡಿದ್ದ ಈ ಹಳೆಯ ಭಾವಗುಚ್ಛೊಂದು "ಟಪಕ್" ಎಂದು ಕೆಳಗೆ ಬಿತ್ತಷ್ಟೆ. ಎತ್ತಿಡುವಷ್ಟು ತಾಳ್ಮೆ ಇರಲಿಲ್ಲ, ಪ್ರಕಟಿಸದಿರಲು ಕಾರಣಗಳು ಇರಲಿಲ್ಲ, ಅದ್ದರಿಂದ ಈಗ ನೀವಿದನ್ನು ಓದುತ್ತಿದ್ದೀರ. ಪ್ರಕಟಿಸೋದೇನೋ ಪ್ರಕಟಿಸಿದ್ದೀನಿ, ಓದೋದು ನೀವು ಓದಿದ್ದೀರ, ಹಂಗೆ ಹೆಂಗಿದೆ ಅಂತಾನೂ ಹೇಳ್ಬಿಡಿ ಆಯ್ತಾ! ಯಾರಿಗ್ ಗೊತ್ತು, ನಿಮ್ಮೊಂದು ಸಣ್ಣ ಒಳ್ಳೆ ಮಾತಿಂದ ನನ್ನ ಈ ದಿನ ಬೆಳಗಾದೀತು!"

#ಒಲವು #ಕನ್ನಡ #kannada #yqkannada #yqjogi #love #waiting

#ಕಾಗದಕಾಣದಕವನಗಳು "ಈ ಕವನವನ್ನು ಇಂದು ಪ್ರಕಟಿಸಲು ಯಾವುದೇ ರೀತಿಯ ದೃಢಕಾರಣಗಳು ಇರದಿದ್ದರೂ ಎದ್ದ ತಕ್ಷಣ ಸಂಭವಿಸಿದ ದಿಢೀರ್ ಯೋಚನಾಕಂಪನಕ್ಕೆ ಜೋಡಿಸಿಟ್ಡಿದ್ದ ಈ ಹಳೆಯ ಭಾವಗುಚ್ಛೊಂದು "ಟಪಕ್" ಎಂದು ಕೆಳಗೆ ಬಿತ್ತಷ್ಟೆ. ಎತ್ತಿಡುವಷ್ಟು ತಾಳ್ಮೆ ಇರಲಿಲ್ಲ, ಪ್ರಕಟಿಸದಿರಲು ಕಾರಣಗಳು ಇರಲಿಲ್ಲ, ಅದ್ದರಿಂದ ಈಗ ನೀವಿದನ್ನು ಓದುತ್ತಿದ್ದೀರ. ಪ್ರಕಟಿಸೋದೇನೋ ಪ್ರಕಟಿಸಿದ್ದೀನಿ, ಓದೋದು ನೀವು ಓದಿದ್ದೀರ, ಹಂಗೆ ಹೆಂಗಿದೆ ಅಂತಾನೂ ಹೇಳ್ಬಿಡಿ ಆಯ್ತಾ! ಯಾರಿಗ್ ಗೊತ್ತು, ನಿಮ್ಮೊಂದು ಸಣ್ಣ ಒಳ್ಳೆ ಮಾತಿಂದ ನನ್ನ ಈ ದಿನ ಬೆಳಗಾದೀತು!" #ಒಲವು #ಕನ್ನಡ #kannada #yqkannada #yqjogi love #waiting

15684fd50d91a2208b90afc9f215ab1b

Thejas Murthy

"ನೀನೆನ್ನ ಶ್ರೀಮಂತಿಕೆ,
ನೀನಿರದಿರೆ ನಾ ಬಡವ.
ಎನ್ ಸ್ವರಕೆ ನೀನೇ ಅನಿಸಿಕೆ,
ಇನ್ನೂ ಕೊಂಚ ಮಿಗುವಾ!" Happy birthday Subbi 💕

Happy birthday Subbi 💕

loader
Home
Explore
Events
Notification
Profile