Nojoto: Largest Storytelling Platform
nojotouser7178154297
  • 379Stories
  • 0Followers
  • 0Love
    0Views

ಕೃಷ್ಣ ಚರಣ

  • Popular
  • Latest
  • Video
45ea16bef677f2d2599f551e3b83940a

ಕೃಷ್ಣ ಚರಣ

ಪ್ರತಿಯೊಬ್ಬ ಕನ್ನಡಿಗನ ಕಣ್ಮಣಿ...!! ಇದುವೇ ಸ್ವರ್ಗ.

#ಕರುನಾಡು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇದುವೇ ಸ್ವರ್ಗ. #ಕರುನಾಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

45ea16bef677f2d2599f551e3b83940a

ಕೃಷ್ಣ ಚರಣ

ಓ ನನ್ನ ಸಖಿಯೇ...ಕಾದು ಕೂತೆ ನಾ ऽऽऽ...
ಬಾ ಬೇಗ ಬಳಿಗೆ...ಮಾಡು ಪ್ರೀತಿ ಪಾಠ... 
ಹೇಳಬೇಕು ಏನೋ... ಸಣ್ಣ ಆಸೆಯ ನಾ ऽऽऽ... 
ನನಗಾಗೇ ಬಂದ ಆ ದೇವರ ವರವೇ... 

ನಿನ್ನಿಂದಲೇ ನನ್ನ ಕಥೆ ಸಂಪೂರ್ಣ.. 
ಇನ್ನೇನು ಬೇಡ...ನಿನ್ನಲ್ಲೇ ನನ್ನ ಗಮನ... 

ನಾ ಹೋಗುವಾ ಪ್ರತಿ ದಾರಿಯು ಸಹ ನಿನ್ನಲೆ ಕೊನೆಯಾಗಿ.. 
ಕಣ್ಮುಚ್ಚಿಯೇ ನಾ ಕಾದಿಹೆ ಓ ಪ್ರೀತಿಯೇ ನಿನಗಾಗಿ... 
ಮೂಡುವ ಪ್ರತಿ ಕನಸಲು ನಾ ನಿನ್ನದೆ ನಗೆಗಾಗಿ 
ಕಣ್ಮುಚ್ಚಿಯೇ ನಾ ಕಾದಿಹೆ ಓ ಪ್ರೀತಿಯೇ ನಿನಗಾಗಿ... 
(ಓ ಕಾಡುವ ಮನ ಹಂತಕಿ ನಾ ನಿನ್ನಲೇ ಶರಣಾಗಿ) 

ಈ ಪ್ರೀತಿ ನನಗಿನ್ನು ಹೊಸದು... 
ದಿನವೆಲ್ಲಾ ಕ್ಷಣವು ನೀ ಸಿಗಲು...ನನ್ನಾಣೆ... 
ಹಿಡಿತಕ್ಕೆ ಸಿಗುತಿಲ್ಲ ಮನವು..... 
ನೀ ಹೆಜ್ಜೆ ಇಟ್ಟ ದಿನದಿಂದ ಓ ಒಲವೇ... 

ಸಾಕುಮಾಡು ಬೇಡ ಕಾಲಹರಣ.... 
ಬಂದು ಸೆರೆನ್ನ...
ಮಾಡೋಣ ಪ್ರೀತಿ ಪಯಣ.... 

ನಾ ಹೋಗುವ ಪ್ರತಿ ದಾರಿಯು ಸಹ ನಿನ್ನಲೆ
ಕೊನೆಯಾಗಿ.. 
ಕಣ್ಮುಚ್ಚಿಯೇ ನಾ ಕಾದಿಹೇ ಓ ಪ್ರೀತಿಯೇ ನಿನಗಾಗಿ...
ಮೂಡುವ ಪ್ರತಿ ಕನಸಲು ನಾ ನಿನ್ನದೆ ನಗೆಗಾಗಿ...
ಕಣ್ಮುಚ್ಚಿಯೇ ನಾ ಕಾದಿಹೇ ಓ ಪ್ರೀತಿಯೇ ನಿನಗಾಗಿ... 
(ಓ ಕಾಡುವ ಮನ ಹಂತಕಿ ನಾ ನಿನ್ನಲೇ ಶರಣಾಗಿ)

45ea16bef677f2d2599f551e3b83940a

ಕೃಷ್ಣ ಚರಣ

**ಮೂಕ ನಾಯಕ**

ಹೇಳು ನೀ ಬಾಳೆ ಎಷ್ಟು ನಿನ್ನ ತಿರುವುಗಳು... 
ಎಂದು ಸಿಗುವುದೋ ಆ ನಿನ್ನ ಉತ್ತುಂಗವು...?!
ನೀನೊಡ್ಡುವ ಆಶ್ಚರ್ಯಗಳ ಹೊಂದಿಸಲು ದಣಿದಿರುವೆ... 
ಪ್ರಜ್ವಲಿತ ಕನಸುಗಳ...ಒಂದೊಂದೆ ಬಿಡಿಸಿರುವೆ..

ಕಾದು ಕುಂತ ಕನಸುಗಳು ಇನ್ನಷ್ಟು ದೂರ... 
ಬಯಸದೆ ಬಂದ ಕನಸುಗಳು ಆಗುತ್ತಿವೆ ಪೂರ... 
ದಾರಿಯೇ ಮುಗಿಯದ ಪ್ರಯಾಣ ಇದಿನ್ನು... 
ಗಮ್ಯವನ್ನೇ ಅರಿಯದ ಯಾತ್ರಿಕ ನಾನಿನ್ನು... 

ಯಾರೋ ಕೈ ಹಿಡಿದರೆ ರೇಖೆಗಳು ಬದಲಾಗುವುದೆ...?? 
ಅಥವಾ, ಕೈ ಹಿಡಿದು ಬಂದ ಶಕ್ತಿಯು ರೇಖೆಗಿಂತ ಬಲಿಷ್ಟವೇ?? 
ಎಲ್ಲ ಪ್ರಶ್ನೆಗಳ ಸುಳಿಗೆ ಸಮಯವೇ ನಿರ್ಣಾಯಕ... 
ಶೀರ್ಷಿಕೆ ಇಲ್ಲದ ಕಥೆಗೆ...ನಾನೇ ಮೂಕ ನಾಯಕ... #yqjogi #yqkannada #ಮೂಕನಾಯಕ #kannadaquotes #kannadapoem
45ea16bef677f2d2599f551e3b83940a

ಕೃಷ್ಣ ಚರಣ

"ಅಪ್ಪು ಅಮರ"
"ಅಪ್ಪು ನಮನ"
"ಅಜರಾಮರ ಅಪ್ಪು"

ಎಲ್ಲವೂ ಇರಲಿ....

ಎಲ್ಲದರಲ್ಲಿ ಅಭಿಮಾನ ಇರಲಿ ಹೊರತು...
TRP ಯ ಒಂದು ವಸ್ತುವಾಗದಿರಲಿ

ದೊಡ್ಮನೆಗೆ ಮತ್ತೆ ಮತ್ತೆ ನೋವು ಮಾಡದಂತಿರಲಿ...!! #ಅಪ್ಪು #ಪುನೀತ್_ರಾಜಕುಮಾರ್ #yqjogi #yqkannada #yqbaba

#ಅಪ್ಪು #ಪುನೀತ್_ರಾಜಕುಮಾರ್ #yqjogi #yqkannada #yqbaba

45ea16bef677f2d2599f551e3b83940a

ಕೃಷ್ಣ ಚರಣ

ಗ್ರಹಣ



ಭ್ರಮಣ



ಏನು ಮುಟ್ಬಾರ್ದು...ಸರೀನಾ...?! ಈ ಮೂವರ ಸಂಬಂಧವನ್ನು ಹಂಚಿಕೊಳ್ಳಿ. 

#ಸೂರ್ಯಚಂದ್ರಭೂಮಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಈ ಮೂವರ ಸಂಬಂಧವನ್ನು ಹಂಚಿಕೊಳ್ಳಿ. #ಸೂರ್ಯಚಂದ್ರಭೂಮಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

45ea16bef677f2d2599f551e3b83940a

ಕೃಷ್ಣ ಚರಣ

ದೀಪದ ಹಬ್ಬದಲಿ ಕತ್ತಲೆಗೆ ಸ್ಥಳವಿಲ್ಲ..
ಮುಟ್ಟಲಿ ಉತ್ತುಂಗ ಒಂದೊಂದೆ ಕನಸೆಲ್ಲ..
ಸಣ್ಣಪುಟ್ಟ ಖುಷಿಯಲ್ಲೇ ಅಡಗಿದೆ ಜೀವನ...
ಜೀವಿಸಿ ನಸುನಕ್ಕುಬಿಡು ಕನಸೆಲ್ಲ ಸಂಪೂರ್ಣ..

ಮಾಡುವ ಕೆಲಸದಲಿ ಜಯ ನಿಮ್ಮದಾಗಲಿ...
ಎಲ್ಲ ಸುಖ ಸಂತೋಷ ಮತ್ತಷ್ಟು ಸಿಗಲಿ...
ಆ ಕೃಷ್ಣನ ಶ್ರೀರಕ್ಷೇ ನಿಮ್ಮ ಹಿಂದಿರಲಿ...
ಈ ಕೃಷ್ಣನ ಶುಭಾಶಯ ನಿಮ್ಮ ಜೊತೆಗಿರಲಿ. #yqjogi #ದೀಪಾವಳಿ #yqbaba #yqyogi #yqdidi

#yqjogi #ದೀಪಾವಳಿ #yqbaba #yqyogi #yqdidi

45ea16bef677f2d2599f551e3b83940a

ಕೃಷ್ಣ ಚರಣ

ಅಂದ ಚಂದಕ್ಕೆ ಮಣೆ ಹಾಕೋರು...
ನಮ್ಗೊಂದು ಸಿಂಹಾಸನನೇ ಹಾಕ್ಬೇಕು...!!  #cinemagraph #yqjogi #yqkannada #yqbaba #yqdidi
45ea16bef677f2d2599f551e3b83940a

ಕೃಷ್ಣ ಚರಣ

ನಿಟ್ಟುಸಿರುಗಳ ಪೋಣಿಸುತ ನಿಂತಿದೆ ಜೀವ ಒಂದೆ ಒಂದು ನಂಬಿಕೆಯ ನೆರಳಿಗೆ... 
ನನ್ನ ಮೇಲೆಷ್ಟು ಆಸೆ ಈ ಕಷ್ಟದ ತೋರು ಬೆರಳಿಗೆ... ಮುಗಿಲು ಕಳಚಿ ಬಿದ್ದರೂ.,
ನಿಂತ ಧೀಮಂತ ನಾನು... 
ಬಿದ್ದ ಮುಗಿಲ ಕತ್ತರಿಸಿ..
ತೋರಣದಲಿ ಸೇರಿಸಿ..
ಕತ್ತಲನು ಗೆಲ್ಲುವ ಅಭಿಲಾಷಿ ನಾನು.. 
ಇನ್ನೆಂದೊ ಬರುವ ಅರೆಘಳಿಗೆಯ ಸಂತೋಷಕೆ.... 
ಶಬರಿ ಯಂತೆ ಕಾಯುವವನು ನಾನು... 
ಇದು ಧೈರ್ಯವಲ್ಲದೆ ಇನ್ನೇನು...?? 
ಚುಚ್ಚು ಮಾತುಗಳಿಂದ ನನ್ನ ಕುಗ್ಗಿಸಬಹುದೆ...
ಗೆಲುವಿಗೆ ಅಡ್ಡ ಬಂದು ನನ್ನ ಸೋಲಿಸಬಹುದೆ...
ಕೊನೆ ಮೆಟ್ಟಿಲನು ಮೆಟ್ಟುವಾಗ...
ಒದ್ದು ಕೆಳಗುರುಳಿಸಬಹುದೆ..?? 
ಹೀಗೇ ಯೋಚಿಸಿ ಸುಸ್ತಾದವರು ಹಲವಾರು.. 
ಮತ್ತೆ ಮತ್ತೆ ಎದ್ದು ಬಂದು ನಿಂತ ನಾನು.. ಗಟ್ಟಿಗನಲ್ಲದೇ ಇನ್ಯಾರು..?? 
ನಿಮ್ಮ ಮೂರ್ಖತನಕೆ ಹೊಂದಿಸಲು ನಾನು ಮೂರ್ಖನಾಗಿರುವೆ... 
ನಿಮ್ಮ ಜೊತೆಗೇ ನಗುವೆ...
ನಿಮ್ಮ ಜೊತೆಗೇ ಕುಣಿವೆ....
ನಿಮ್ಮಲ್ಲೇ ಒಬ್ಬನಂತಿರುವೆ... 
ನಮ್ಮವನೆ ಎಂದು ನೀವು ಹೇಳಿಲ್ಲ... 
ನಿಮ್ಮವನೇ ಎಂದು ಹೇಳುವ ಮನಸು ನನಗಿಲ್ಲ..
ಮುಖವಾಡದ ಹಿಂದಿನ ಮನಸನ್ನು ನಂಬಿದವ ನಾನು... 
ಶೂನ್ಯದಿಂದಲೆ ಹೊರಟಿರುವನು ನಾನು.. 
ಶೂನ್ಯಕ್ಕೇ ಮರಳಿದರು ಮರುಗಲಾರೇ... 
ನನ್ನ ಪ್ರಯತ್ನವ ಬಿಡಲಾರೆ... 
ಸಂತೋಷವನ್ನೇ ನಂಬಿ ಕೂತವನಲ್ಲ...
ದುಃಖದ ಸೆರಗು ಎಂದು ಬಿಟ್ಟವನಲ್ಲ... 
ಅಮ್ಮ ನೀಡಿದ ಸೆರಗು ಕಷ್ಟದ ಸೆರಗ ಹರಿದಿತ್ತು... 
ಅಪ್ಪ ನೀಡಿದ ಹೆಗಲು...ಸಂತೋಷವ ತೋರಿತ್ತು... ಇಷ್ಟು ಸಾಕಲ್ಲವೇ...
ನೆಮ್ಮದಿ ಇಂದಿರಲು..
ಕಷ್ಟಗಳ ಕಡಿಯಲು... #yqjogi #yqbaba #yqdidi #yqkannada



ನಿಟ್ಟುಸಿರುಗಳ ಪೋಣಿಸುತ ನಿಂತಿದೆ ಜೀವ ಒಂದೆ ಒಂದು ನಂಬಿಕೆಯ ನೆರಳಿಗೆ... 
ನನ್ನ ಮೇಲೆಷ್ಟು ಆಸೆ ಈ ಕಷ್ಟದ ತೋರು ಬೆರಳಿಗೆ... ಮುಗಿಲು ಕಳಚಿ ಬಿದ್ದರೂ.,
ನಿಂತ ಧೀಮಂತ ನಾನು... 
ಬಿದ್ದ ಮುಗಿಲ ಕತ್ತರಿಸಿ..

#yqjogi #yqbaba #yqdidi #yqkannada ನಿಟ್ಟುಸಿರುಗಳ ಪೋಣಿಸುತ ನಿಂತಿದೆ ಜೀವ ಒಂದೆ ಒಂದು ನಂಬಿಕೆಯ ನೆರಳಿಗೆ... ನನ್ನ ಮೇಲೆಷ್ಟು ಆಸೆ ಈ ಕಷ್ಟದ ತೋರು ಬೆರಳಿಗೆ... ಮುಗಿಲು ಕಳಚಿ ಬಿದ್ದರೂ., ನಿಂತ ಧೀಮಂತ ನಾನು... ಬಿದ್ದ ಮುಗಿಲ ಕತ್ತರಿಸಿ..

45ea16bef677f2d2599f551e3b83940a

ಕೃಷ್ಣ ಚರಣ

ಬಾಣದೊಂದಿಗೆ ಬಂದ ಅರ್ಜುನನ ಕಣ್ಣೀರು...
ಕರ್ಣನ ಪಾದ ಮುಟ್ಟಿ ಹರಿದವು ಮುನ್ನೂರು... 
ನಿಗಿವ ಸೂರ್ಯನೆ ಸುಡುತ್ತಿದ್ದ..ಕರ್ಣನ ಪ್ರತಿ ರಕ್ತದ ಹನಿಗೆ...
ಧಗಿಸುವ ಸುಯೋಧನ ಮರುಗುತ್ತಿದ್ದ ಗೆಳೆಯನ ಸಾವಿನ ಧ್ವನಿಗೆ... 
ಸಂಜಯನ ದಿಗ್ಭ್ರಾಂತಕೆ ಕೇಳುತಿಹನು ಧೃತರಾಷ್ಟ್ರ ಏನೆಂದು... 
ರಕ್ತದ ಲೇಖನಿ ನಡುವೆ ಮೂಡಿತ್ತು ಕಣ್ಣೀರಿನ ಸಾಲೊಂದು....
“ಕರ್ಣನಿದ್ದರೇ ಅದು ಸಂಪೂರ್ಣ ವ್ಯಾಸ ಭಾರತ,
ಕರ್ಣನಿರದಿರೆ ಅದು ಶೂನ್ಯ ಮಹಾಭಾರತ" #yqjogi #yqkannada #karna #೭ #yqkannadalove #kannadapoem
45ea16bef677f2d2599f551e3b83940a

ಕೃಷ್ಣ ಚರಣ

ಧರ್ಮ ಅಧರ್ಮದ ನಡುವೆ ಮೊಳಗಿತು ಪಾಂಚಜನ್ಯ... 
ಸತ್ಯ ಅರಿತರೂ ಅರ್ಜುನನ ಬಾಣ ಬಂದು ಚುಚ್ಚಿತು ಆ ಕರ್ಣನಾ... 
ರಕ್ತ ಹಾಗೂ ಕಣ್ಣೀರು ಎರಡೂ ಸಂಕಟದಲ್ಲಿ.. 
ಯಾರು ಮೊದಲು ಬರಬೇಕೆಂದು ತಿಳಿಯದೆ ದೇಹದಲಿ...
ಧರೆ ಒಡಲ ಸೇರಿದನು ಕರ್ಣ ತನ್ನದೇ ರಕ್ತದ ಮಡುವಿನಲಿ... #yqjogi #yqkannada #yqbaba #೬ #karna #kannadapoem
loader
Home
Explore
Events
Notification
Profile