Nojoto: Largest Storytelling Platform
gayatrihuddar8260
  • 8Stories
  • 18Followers
  • 77Love
    662Views

Gayatri Huddar

  • Popular
  • Latest
  • Video
547bdd792cd93644dd2876e3f39eb794

Gayatri Huddar

ನಿನ್ನ ಸಾಮರ್ಥ್ಯ ಇನ್ನೊಬ್ಬರ
 ಮನವ ಬೆಳಗುವಂತಿದ್ದರೆ
ಕ್ಷಣವೂ ಯೋಚಿಸಬೇಡಾ
ಬೆಳಗಿಸಾ ಬಾಳನು.
ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ
ಹೊತ್ತಬೇಕಾದ ಜ್ವಾಲೆ ಇರದಿರೆ
ಬೆಳಕು ಬೆಳಗದು.
ಹಾಗೇ ಸಾಮರ್ಥ್ಯ ಒಳಗಿದ್ದರು
ಅದನು ಜಾಗೃತಗೊಳಿಸುವ
ಪ್ರೇರಣೆ ಬೇಕು...
ಆ ಪ್ರೇರಣೆ ನೀನಾಗುವ 
ಅವಕಾಶ ದೊರೆತಾಗ
ಮತ್ತೆ ಹಿಂಜರಿಯಬೇಡಾ.

©Gayatri Huddar
  #ujala
547bdd792cd93644dd2876e3f39eb794

Gayatri Huddar

ನೆನಪಿನ ಪುಟಗಳನ್ನು ತಿರುವಿದಷ್ಟೂ
ಪ್ರತಿ ಪುಟದಲ್ಲೂ ನಿನ್ನದೇ ಹೆಸರು ಗೆಳೆಯಾ
ಒಂದೊಂದು ಪುಟಕೂ ಒಂದೊಂದು ಭಾವ
 ಆತ್ಮಸಖನೇ ಆಗಿ ನೆಲೆಯಾಗಿರುವು ಅಲ್ಲಿ.
ಬರೀ ಕಾಮಕ್ಕೆಂದು ಬಯಸಿದ್ದ
ನೆನಪಲ್ಲಿ ಕಾಣುವುದೇ ಇಲ್ಲಾ.
ಭಾವನಾತ್ಮಕ ಈ ಗೆಳತಿಯ 
ಭಾವನೆಗೆ ಚೂರು ಸ್ಪಂದಿಸಿ ನೋಡು
ಮತ್ತೆ ಮತ್ತೆ ಅವಳು ಹದಿನೆಂಟವರೆ
ಆದಾಳು ಸದಾ......

©Gayatri Huddar
  #kitaab
547bdd792cd93644dd2876e3f39eb794

Gayatri Huddar

ಹೂವಂತೆ ನಗುವ ಬದುಕಾಗಬೇಕು
ಅರಳಿ ನಿಂತಾಗ ಸುತ್ತಲೂ
ಸುಗಂಧ,ಸೌಂದರ್ಯ ಪಸರಿಸುವಂತೆ.
ಅರಳುವ ಮುನ್ನ ಅದೆಂದೂ ಯೋಚಿಸದು
ನನ್ನ ಬಳಸುವರು ದೇವನಾ ಪೂಜೆಗೋ,
ಪ್ರೇಯಸಿಯ ಮುಡಿಗೋ
ಮರಣಿಸಿದವನ ಶೃದಾಂಜಲಿಗೋ ಎಂದು
ಹಾಗೇ ನಾವು ನಗುತ್ತಿರಬೇಕು
ನಮ್ಮನ್ನು ಬೇರೆಯವರ ಕಣ್ಣಲ್ಲಿಟ್ಟು ನೋಡದಂತೆ

©Gayatri Huddar
  #lily
547bdd792cd93644dd2876e3f39eb794

Gayatri Huddar

ಹಲವಾರು ವರ್ಷ ಕಾಯ್ದ ಶಬರಿಯ ಭಕ್ತಿಯ 
ಪರಿಚಯವಿತ್ತು ರಾಮನಿಗೆ.
ಕಾಯುವಿಕೆಯ ಹಿಂದಿನ ನೋವಿನ 
ಅನುಭವವೂ ಆತನಿಗಿತ್ತು.
ಅಂತಹ ಪುರುಷನಿಗೋಸ್ಕರ ಕಾಯ್ದ 
ಆ ಶಬರಿಯ ವಿಶ್ವಾಸಕ್ಕೊಂದು ಬೆಲೆಯಿದೆ.
ಆ ಕಾಯುವಿಕೆಯನ್ನು ಗೌರವಿಸಿದ 
ರಾಮನಿಗೊಂದು ಪೂಜ್ಯನೀಯ ಸ್ಥಾನವಿದೆ

©Gayatri Huddar
  #ramsita

Follow us on social media:

For Best Experience, Download Nojoto

Home
Explore
Events
Notification
Profile