Nojoto: Largest Storytelling Platform
ramyaprabhu4918
  • 5Stories
  • 19Followers
  • 45Love
    41Views

Ramya Prabhu

House wife

  • Popular
  • Latest
  • Repost
  • Video
6944a992ed42c90a558ceb44ebbe39a3

Ramya Prabhu

White ಆಷಾಢ 

ಮಳೆಯಲಿ ಮಿಂದ ಪ್ರಕೃತಿಯ ಚೆಲುವು ಕಂಗೊಳಿಸಿದೆ ಆಷಾಢ
ಗುಡುಗುಮಿಂಚು ಸಿಡಿಲಾ ತಾಳಮೇಳೈಸಿದೆ ಆಷಾಢ

ರಭಸದಿ ಭೋರ್ಗರೆದು ಧುಮ್ಮಿಕ್ಕುವ ಜಲಪಾತ ದೃಶ್ಯವದು ರಮಣೀಯವಲ್ಲವೆ
ಮೈತುಂಬಿ  ಹರಿಯುವ ನೀರ್ಝರಿಗೆ ಸಾಗರವ ಸೇರುವ ತವಕವಿದೆ ಆಷಾಢ

ಹಸಿರೂಟ್ಟ ಕಾನನದ ಸೊಬಗು ಕಣ್ಮನ ಸೆಳೆದಿಲ್ಲವೆ
ಪರಿಮಳ ಸೂಸುವ ಮಣ್ಣಿನ ಸುವಾಸನೆ ಎಲ್ಲೆಡೆ ಹರಡಿದೆ ಆಷಾಢ

ಮಧುವ ಹೀರಿ ಸವಿಯಲು ಕಾದ ದುಂಬಿಗೆ ವಿರಹವೇದನೆಯಲ್ಲವೆ 
ಪಕ್ಷಿಗಳ ಇಂಪಾದ ಸ್ವರಮಾಧುರ್ಯ ಮಾರ್ದನಿಸುತಿದೆ ಆಷಾಢ

ಶೂನ್ಯಮಾಸವಿದು ಅರಿತ ಹೃದಯವೆರಡು ಭವ್ಯಸಮ್ಮೀಲನಕೆ ಕಾದಿದೆಯಲ್ಲವೆ
ರಮ್ಯಗಾನವ ಹಾಡಿ ಹೃನ್ಮದಿ ಕಚುಗುಳಿ ಇಡುತಿದೆ ಆಷಾಢ

©Ramya Prabhu #Tulips
6944a992ed42c90a558ceb44ebbe39a3

Ramya Prabhu

White ಸವಿ ಸವಿ ನೆನಪು 
ಬಾಲ್ಯದ ನೆನಪು 
ನೆನೆದು ಸವಿದಷ್ಟು ಹೊನಪು

ಮನೆಯ ಕೆಲಸವೆಲ್ಲಾ ಮುಗಿಸಿ ಸುಮ್ಮನೆ ಕುಳಿತಿದ್ದೆ. ಮಗ ಆಟ ಆಡುವುದು ಆಡುವುದು ನೋಡಿ ನನಗೆ ನನ್ನ ಆ  ಅಮೂಲ್ಯವಾದ ಮತ್ತೆ ಬಾರದ ಬಾಲ್ಯದ ದಿನಗಳು ನೆನಪಾಗಿ ಕಣ್ತುಂಬಿ ಬಂತು. ಆ ದಿನಗಳೇ ಹಾಗೆ ಏನೋ ಅರಿಯದ ಮುಗ್ಧ ಮನಸ್ಸುಗಳು ಬೇಧಭಾವ ಇಲ್ಲದೆ ಜೊತೆಯಾಗಿ ಆಡಿ ಜೊತೆಯಾಗಿ ಕೂತು ಹಂಚಿ ಊಟ ಮಾಡುತ್ತಿದ್ದೇವು. ಬಾಲ್ಯದಲ್ಲಿ ಆಡದ ಆಟವಿಲ್ಲ ನೋಡದೆ ನೋಟವಿಲ್ಲಾ ಕೇಳದ ಪಾಠವಿಲ್ಲ ತಿನ್ನದ ಊಟವಿಲ್ಲಾ. ಚಿಂತೆಯಿಲ್ಲದ ಯಾವುದೇ ಜವಾಬ್ದಾರಿ ಇಲ್ಲದ ಬಾಲ್ಯ  ಈಗ  ಬೇಕೆಂದರು ಮತ್ತೆ ಬರದು.ಮರಕೋತಿ ಆಟ, ಚಿನ್ನಿದಾಂಡು, ಕುಂಟೆಬಿಲ್ಲೆ ಆಟ,  ಸರಿತಪ್ಪು ಆಟ, ಕಳ್ಳ ಪೋಲಿಸ್ ಆಟ, ಮನೆಯಾಟ, ಮಣ್ಣಿನಲ್ಲಿರುವ ಆಟ, ಅಡುಗೆ ಆಟ,  ನೀರಲ್ಲಿ ದೋಣಿ ಮಾಡಿ ಬಿಟ್ಟ ನೆನಪು, ಹೀಗೆ ಒಂದೇ ಎರಡೇ ಅಮ್ಮನ ಸೀರೆ ಉಟ್ಟು ಅಮ್ಮನಂತೆ ಆದದ್ದು ಗೊಂಬೆಯನ್ನು ಮಗುವೆಂದು ಅದಕ್ಕೆ ತಿನ್ನಿಸಿ ಸ್ನಾನ ಮಾಡಿಸುವುದು ಹೀಗೆ ತುಂಬಾ ಆಟಗಳನ್ನು ಆಡಿಕೊಂಡು ಬಾಲ್ಯ ಕಳೆದೇವು. ಪೇರಳೆ ,ನೇರಳೆ ,ಮುಳ್ಳುಹಣ್ಣು, ಚಾಪೆ ಹಣ್ಣು, ಬಾಳೆಹಣ್ಣು, ಬಾರಿಹಣ್ಣು, ನೆಲ್ಲಿಕಾಯಿ ಕಾಡಿನ ನೈಸರ್ಗಿಕವಾದ ಆರೋಗ್ಯಕರ ಹಣ್ಣುಗಳೇ ನಮಗೆ ಆಹಾರ ಆರೋಗ್ಯಕರ ಜೀವನ ನಮ್ಮದಾಗಿತ್ತು.
ಗೆಳೆಯರೊಂದಿಗೆ ಆಟ ಆಡುತ್ತಿದ್ದರೆ ನಮಗೆ ಊಟ ಬೇಡ ಪಾಠ ಬೇಡ ಅಂತ ಅನ್ನಿಸುತ್ತಿತ್ತು. ಬಾಲ್ಯವೆಂದರೆ ಏನೋ ಖುಷಿ ಆ ಬಾಲ್ಯದ ದಿನಗಳನ್ನು ನೆನೆದು ಆಯಾಸವೆಲ್ಲಾ ಮಾಯಾ ಏನೋ ಒಂಥರಾ  ಮನಸಿಗೆ ಸಮಾಧಾನ. ಜಂಟಾಟದ ಜೀವನದಲ್ಲಿ ಮುಳುಗಿದ್ದ ನಮಗೆ ಬಾಲ್ಯದ ನೆನಪುಗಳು ತರುವವು ತಂಪು...

©Ramya Prabhu #good_night
6944a992ed42c90a558ceb44ebbe39a3

Ramya Prabhu

ಕನವರಿಕೆಯಲೂ ನಿನ್ನೊಲವ ರಾಗ ಕೇಳುತಿರೆ ಕಷ್ಟಗಳೆಲ್ಲಾ
 ಇಷ್ಟಗಳಾಗಿ ನೆಮ್ಮದಿಯ ನಿದ್ರೆಗೆ ಜಾರಿರೇ ನಗುನಗುತ್ತ ಹಾಯಾಗಿ ನಿನ್ನ ಮಡಿಲಲಿ ಮಗುವಾಗಿ ಮಲಗಿದೆ ನನ್ನೊಲವೇ......

©Ramya Prabhu #Yaari
6944a992ed42c90a558ceb44ebbe39a3

Ramya Prabhu

White "ಭಾವ ವೀಣೆ" 

ತಿಳಿನೀರ ಕೊಲದಲಿ 
ಮೌನ ಕಾನನದಲಿ 
ಸುತ್ತಲೂ ಹಸಿರಲ್ಲಿ 
ಜುಳು ಜುಳು ಧ್ಯಾನವಲ್ಲಿ||

ತನನಂ ತನನಂವೆಂದು ಮನವು 
ಹೊಮ್ಮಿತು ಮಧುರ ನಾದವು 
ಕೋಗಿಲೆ ಹಾಡಿತು ಪಂಚಮವೇದವು 
ಅರಳಿದ ತಾವರೆ ನೋಡಲು ಚೆಂದವು||

ವೀಣೆಯು ಹಿಡಿದು ಭಾವತಂತಿಯ ಮೀಟಿ
ಮನದ ಭಾವನೆಗಳು ತನ್ನ ಎಲ್ಲೆ ದಾಟಿ 
ಹೊಸ ರಸಮಯ ಲೋಕ ಕಣ್ಣೆದುರು 
ಸೃಷ್ಟಿಸಿ ಗಮಕಗಳ ನಾದವು ನನ್ನೆದುರು||

ಈ ಸೃಷ್ಟಿಯೇ ಒಂದು ಸಂಗೀತಮಯವೂ 
ಸರಿಗಮ ಪದಗಳ  ನಾದಸ್ವರವೂ
ಹೃದಯದಿ ಆಸ್ವಾದಿಸುವ ಭಾವನೆಯು 
ಅವನಿಚ್ಛೆಯ ಬದುಕು ವಿಧಿಯ ಲೀಲೆಯು||

©Ramya Prabhu love
6944a992ed42c90a558ceb44ebbe39a3

Ramya Prabhu

White ಚುಟುಕು ಕುಟುಕು 

ಚಳಿ
ಹೊರಗಡೆ ಸುರಿಯುವ ಮಳೆಗೆ
ಮನವು ಹೇಳಿತು ಮೆಲ್ಲಗೆ
ಈ ಚುಮು ಚುಮು ಚಳಿಗೆ 
ಆಹಾ! ಚೆನ್ನ ಬಿಸಿ ಬೋಂಡ ಕಾಫಿ ಜೊತೆಗೆ
 

ಜೋರುಮಳೆಗೆ ಚಳಿಯ ನಡುಕವು
ಇನಿಯನ ನೆನೆದು ಬೆಚ್ಚನೆಯ ಭಾವವು
ಕಳೆದ ಸವಿನೆನಪಿನ ಹಾವಳಿಯು
ಮನದಿ ಇಡುತಿದೆ ನವಿರಾದ ಕಚಗುಳಿಯು 

✍️ರಮ್ಯಕೃಷ್ಣಪ್ರಭು 
ಮೂಡಬಿದಿರೆ

©ramya #sad_qoute

Follow us on social media:

For Best Experience, Download Nojoto

Home
Explore
Events
Notification
Profile