Nojoto: Largest Storytelling Platform

Best Suh Shayari, Status, Quotes, Stories

Find the Best Suh Shayari, Status, Quotes from top creators only on Nojoto App. Also find trending photos & videos about beidawng suh u lyrics, suhana khan, suhani shah, nghilh bik suh aw rinpui lyrics, leejee suh md,

  • 2 Followers
  • 107 Stories

SUHAG

ಕನಸೊಂದ ಕಟ್ಟಿ ಕೂತರೇನಂತೆ,  
ಆಗಿಹೋದವುಗಳ ನೆನಪಿಸಿಕೊಂಡರೇನಂತೆ, 
ನಡೆಯುತಿರುವ ಹೆಜ್ಜೆ ದೃಢವಾಗಿರಲಿ
ಪ್ರತಿಕ್ಷಣವು ನಿನದೇ, ಆನಂದಿಸು ಏನೇ ಬರಲಿ.
 #suh #yqjogi #yqbaba #yqjogikannada #yqkannadaquote #yqtales #yqlove

SUHAG

ನಿದ್ದೆ ಬರದಿರಲು ಕಾರಣ 
ಹೊತ್ತುರಿದು ಮನ ಸೇರಿಹುದು ಮಸಣ
ಆದರೂ ಮರೆಯಲಾಗುತಿಲ್ಲ ನಿನ್ನ ಸ್ನೇಹ 
ಮುಳ್ಳಾಗಿ ಚುಚ್ಚಿಹುದು ಈ ವಿರಹ #suh #yqjogi #yqbaba #yqjogikannada #yqkannadaquote #yqtales #yqlove

SUHAG

ನೀನಿದ್ದಾಗ ಆ ನಗುವಿತ್ತು
ನೀನಿಲ್ಲದಾಗ ಆ ನಗು ನೆನಪಾಗುತಿತ್ತು,
ಇದ್ದರೂ ಇಲ್ಲದಿದ್ದರೂ 
ಸಾಗುತಿದೆ ಜೀವನ ಹೇಗಾದರೂ. #suh #yqjogi #yqbaba #yqjogikannada #yqkannadaquote #yqtales #yqlove

SUHAG

ಮಿರಿಮಿರಿ ಮಿಂಚುತಿರುವ
ದೀಪಗಳ ನೋಡಲು ಅಂದ
ಕತ್ತಲಲಿ ಎಲ್ಲ ಮರೆತು
ಹಾಯಾಗಿ ಮಲಗಿರಲು ಚಂದ
 #suh #yqjogi #yqbaba #yqjogikannada #yqkannadaquote #yqtales #yqlove

SUHAG

ಹುಚ್ಚೆದ್ದು ಅಲೆಗಳಂದು ಬರುತಿರಲು
ಮರಳೆತ್ತಿ ಮಗುವೊಂದು ಗಾಳಿಗೆಸೆದಿರಲು
ಜೋಡಿಹಕ್ಕಿಗಳವು ಸ್ವತಂತ್ರವಾಗಿ ಹಾರುತಿರಲು
ಕೆಂಪೆದ್ದು ತಣ್ಣಗೆ ಅಲ್ಲಂದು ಸೂರ್ಯಾಸ್ತವಾಗಿರಲು  ##suh #yqjogi #yqbaba #yqjogikannada #yqkannadaquote #yqtales #yqlove #cinemagraph

SUHAG

ಅಲ್ಲೊಬ್ಬನಿಗೆ ಸಮುದ್ರ ತಳ ಕಂಡು
ಮತ್ತೆ ಆಳವರಿಯುವ ತವಕ;
ಅದೇ ಮೇಲೆ ಬರಿ ಅಲೆಯ ಕಂಡು
ಕೆಲಕಾಲ ಈಜಿ ಹಿಂದಿರುಗಿದಾಗ ಯುವಕ #suh #yqjogi #yqbaba #yqjogikannada #yqkannadaquote #yqtales #yqlove

SUHAG

ಕಳೆದು ಹೋದ ಜೀವನವ
ಕಳೆದು ಕೂಡಿಸಿ ಬರೆಯುವಾಸೆ
ಮುಂಬರುವ  ನಾಳೆಯ ತಿರುವ
ಗುಣಿಸಿ ಭಾಗಿಸಿ ಜೀವಿಸುವಾಸೆ. #suh #yqjogi #yqbaba #yqjogikannada #yqkannadaquote #yqtales #yqlove

SUHAG

ಬಾಳಹಾದಿಯಲಿ ತಾ ಮಾಡುವ
ಅಸಡ್ಡೆಯ ಮೂರ್ಖತನವ
ನೆನೆದುಕೊ, ಗಮನವಿಟ್ಟು ನಡೆಯುವ
ಸರಳತನದ ಹಾದಿಯಲಿ ಸಾಗುವ
ಈ ಸಣ್ಣ ಕಿವಿಮಾತ ತಿಳಿಯುವ
ಮಾಡು ನೀ ಪ್ರಯತ್ನವ #Suh #yqjogi #yqbaba #yqjogikannada #yqkannadaquote #yqtales #yqlove

SUHAG

ನನ್ನ ಕಂಡರೂ ಕಾಣದಂತಿರುವ
ನಿನ್ನ ನಾಟಕದಾಟವೆ ಚಂದ
ನಾ ಕಾಣದಾಗ ಹುಡುಕಿರುವ
ಆ ಚಡಪಡಿಕೆಯ ನೋಟಗಳಂದ
ಇನ್ನೆಲ್ಲಿದೆ ಅವುಗಳೆಲ್ಲವ ಕಾಣುವ
ಭಾಗ್ಯ ಈ ಸಣ್ಣ ವಿರಹದಿಂದ #Suh #yqjogi #yqbaba #yqjogikannada #yqkannadaquote #yqtales #yqlove

SUHAG

ಚಿಕ್ಕದೊಂದು ಎನ್ನದೆಯ ಗೂಡು
ಒಂದೊಮ್ಮೆ ಸ್ವಲ್ಪ ಇಣುಕಿ ನೋಡು
ತುಂಬಿಹುದು ಬರಿ ನಿನ್ನ ಚಿತ್ರಪಟ
ಅಂಟಿಹುದು ನನ್ನ ಜೀವನದ ಪುಟ #Suh #yqjogi #yqbaba #yqjogikannada #yqkannadaquote #yqtales #yqlove
loader
Home
Explore
Events
Notification
Profile