Nojoto: Largest Storytelling Platform
nojotouser8863504530
  • 17Stories
  • 56Followers
  • 65Love
    141Views

ದೇವಿ ಬಳಗಾನೂರ

ನಾನೊಬ್ಬ ಕನಸುಗಾರ್ತಿ ಕನಸುಗಳೇ ನನ್ನ ಆಸ್ತಿ

  • Popular
  • Latest
  • Video
a2e3df574518a778ecd47831ab80014e

ದೇವಿ ಬಳಗಾನೂರ

ಅವಳು...

ಅವಳು ತಾಯಂತ ಗೆಳತಿ
ನನ್ನ ನಗು ಅಳುವಿನ ಸಂಗಾತಿ
ನನ್ನ ಸೋಲು 
ಗೆಲುವುಗಳಿಗವಳೊಬ್ಬಳೇ
ಜೊತೆಗಾತಿ
ಅವಳು ತಾಯಂತ ಗೆಳತಿ...

ಅವಳು ಗೆಳತಿ
ಮತ್ತವಳು ತಾಯಂತ ಗೆಳತಿ

ವಿಜಯತನುಜೆ...

©ದೇವಿ ಬಳಗಾನೂರ
  #ವಿಜಯತನುಜೆ

#ವಿಜಯತನುಜೆ #ಪ್ರೀತಿ

a2e3df574518a778ecd47831ab80014e

ದೇವಿ ಬಳಗಾನೂರ

a2e3df574518a778ecd47831ab80014e

ದೇವಿ ಬಳಗಾನೂರ

ಬದುಕ ಹಾದಿಯಿದು
ಹೂವಿನ ಹಾಸಿಗೆಯಲ್ಲ
ಮುಳ್ಳಿನ ಹೋದಿಕೆ
ನಗುವೆಂಬ ಹೂವರಳಿಸಿ
ಸಾಗಲೇಬೇಕಿದೆ ಯಾನ
ಸಾಧನೆಯೆಡೆಗೆ ಬದುಕ ಪಯಣ.

ದೇವಿ ಬಳಗಾನೂರ 【ವಿಜಯತನುಜೆ】 #Love #ಸಾಧನೆ

#Love #ಸಾಧನೆ

a2e3df574518a778ecd47831ab80014e

ದೇವಿ ಬಳಗಾನೂರ

ಬಾಳದಾರಿಯಲ್ಲಿ 
ಒಲವಿನ ಪಯಣ
ನೋವು ನಲಿವುಗಳಿಂದ 
ಹನಿ ತುಂಬಿದ ನಯನ
ನೀನಿರೆ ಸಾಕು ಈ ಬದುಕಿಗೆ 
ನೋವ ನುಂಗಿ ನಗಬಲ್ಲೆ ನಾನು
ಹಂಚಿಕೊಳ್ಳಲು ನೀನಿಲ್ಲವೇನು
ಬಾಳಪಯಣಕ್ಕಿರಲಿ ನಿನ್ನ ಸಾಂಗತ್ಯ
ಬೇಡವೇನಗೆ ಇನ್ನೂ ಅಳುವೆಂಬ ನೇಪತ್ಯ
ಜೊತೆಯಾಗಿಬಿಡು ಗೆಳೆಯ ಬದುಕ ಪೂರ
ನಾ ಹಿಡಿದು ನಿಂತಿರುವೆ ಒಲವೆಂಬ ಹಾರ.

ದೇವಿ ಬಳಗಾನೂರ 【ವಿಜಯತನುಜೆ】 #Heart
a2e3df574518a778ecd47831ab80014e

ದೇವಿ ಬಳಗಾನೂರ

ನಮ್ಮದೇ ಜೀವವಿದು ನರಳಿದರೆ ನರಳಲಿ ಬಿಡು
ನಮ್ಮವರ ನಗುವಾದರೂ ಅರಳಲಿ ಬಿಡು.. #Light
a2e3df574518a778ecd47831ab80014e

ದೇವಿ ಬಳಗಾನೂರ

ಬಲ್ಲೆ ನಾನು ಈ ಬದುಕಿನ ಮರ್ಮವ
ಗೆದ್ದಾಗ ಹಿಗ್ಗಬಾರದು
ಸೋತಾಗ ಕುಗ್ಗಬಾರದು
ಸೋಲು ಗೆಲುವಿನ ನಡುವೆ
ನಗುವೆಂಬ ಸುಮವರಳಿಸಿ
ಬದುಕನ್ನು ಸಮನಾಗಿ ಸ್ವೀಕರಿಸಿ
ನೋವೆಲ್ಲ ನಮಗಿರಲಿ
ನಂಬಿದ ಜೀವಗಳ ನಗುವರಳಿಸಿ.

ದೇವಿ ಬಳಗಾನೂರ 【ವಿಜಯತನುಜೆ】 #footsteps #ಬದುಕ ನೆನಪು

#footsteps #ಬದುಕ ನೆನಪು #poem

a2e3df574518a778ecd47831ab80014e

ದೇವಿ ಬಳಗಾನೂರ

ಗುರುವಿಲ್ಲದಿರೆ
ಸಾಧನೆಯ ಗರಿಯೆಲ್ಲಿ
ಗುರುವಲ್ಲವೇ ಗುರಿ ತೋರಿದಾತ
ನಮ್ಮೊಳಗವಿತು ಸಾಧಿಸಿದಾತ.

ದೇವಿ.ಬಳಗಾನೂರ 【ವಿಜಯತನುಜೆ】
a2e3df574518a778ecd47831ab80014e

ದೇವಿ ಬಳಗಾನೂರ

ಹೃದಯಗಳು ಅರಳುವ ಸಮಯ

ಹೃದಯಗಳು 
ಅರಳುವ ಸಮಯ
ಜಗವೆಲ್ಲ ಅಯೋಮಯ
ಕಣ್ಣು ಕಣ್ಣುಗಳು ಬೆರತು
ತಲ್ಲೀನ ಪ್ರೀತಿಯಲಿ
ಜಗವನ್ನೇ ಮರೆತು
ಅರಳುವ ಹೃದಯಕ್ಕೂ ಕೂಡ
ಬರೀ ಪ್ರೀತಿಯದೇ ಮನನ
ಹೃದಯದೂರಿನ ತುಂಬ ಪ್ರೇಮದ ಗಾನ
ನನಗೂ ಅವನಿಗೂ ಬರೀ
ಪ್ರೀತಿಯದೇ ಧ್ಯಾನ
ಪ್ರೀತಿಯುಣಬಡಿಸಿದ ಅವನಿಗೆ
ನನೃದಯದ ಅರ್ಪಣಾ
ಅವನ ಕಣ್ಣುಗಳೇ ನನ್ನ
ಶೃಂಗಾರವನಳೆಯುವ ದರ್ಪಣ.

ದೇವಿ ಬಳಗಾನೂರ 【ವಿಜಯತನುಜೆ】
a2e3df574518a778ecd47831ab80014e

ದೇವಿ ಬಳಗಾನೂರ

ಕನಸುಗಳಿವೆ ಕಣ್ಣೊಳು ನೂರಾರು
ಅದರಲ್ಲಿ ಈಡೇರುವುದೇ ಒಂದಾದರು. #ವಿಜಯತನುಜೆ #ಕನಸು

#ವಿಜಯತನುಜೆ #ಕನಸು #Quote

a2e3df574518a778ecd47831ab80014e

ದೇವಿ ಬಳಗಾನೂರ

 ಮಗನೆಂಬ ಮಂದಾರ 
ನೀನೇ ಈ ಬದುಕ ಸಿಂಧೂರ
ನೀನಾಗಿಬಿಡು ಮಗನೇ
ನನ್ನ ಆದರ್ಶಗಳಿಗೆ ಸರದಾರ

ಮಗನೇ ಕೇಳು ನೀನು
ಅಪೂರ್ಣವಾಗಿವೆ ನಿನ್ನಮ್ಮನ ಕನಸುಗಳು
ನೀನೇ ಪೂರ್ಣಗೊಳಿಸಬೇಕು ಅವನು

ಮಗನೆಂಬ ಮಂದಾರ ನೀನೇ ಈ ಬದುಕ ಸಿಂಧೂರ ನೀನಾಗಿಬಿಡು ಮಗನೇ ನನ್ನ ಆದರ್ಶಗಳಿಗೆ ಸರದಾರ ಮಗನೇ ಕೇಳು ನೀನು ಅಪೂರ್ಣವಾಗಿವೆ ನಿನ್ನಮ್ಮನ ಕನಸುಗಳು ನೀನೇ ಪೂರ್ಣಗೊಳಿಸಬೇಕು ಅವನು #poem #nojotophoto

loader
Home
Explore
Events
Notification
Profile