Nojoto: Largest Storytelling Platform

Best ಕನ್ನಡ_ಗಜಲ್ Shayari, Status, Quotes, Stories

Find the Best ಕನ್ನಡ_ಗಜಲ್ Shayari, Status, Quotes from top creators only on Nojoto App. Also find trending photos & videos about

  • 1 Followers
  • 2 Stories

ವಿಜಯ್

Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ  ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊 #kvprakashquotes #ವಿಜಯ್_ಗಝಲ್ #ಕನ್ನಡ_ಗಜಲ್ #ತರಹೀ_ಗಝಲ್

read more
ತರಹೀ ಗಝಲ್: ಚೇತನಾ ಅವರ ಊಲಾ ಮಿಸ್ರ
*********************************
ರಕ್ತ ಚರಿತ್ರೆಯಲಿ ಅನುರಕ್ತನಾಗಿಹ ಮನುಜಗೆ ಎಲ್ಲಿದೆ ಮಾನವೀಯತೆ
ಸುಪ್ತ ಮನದಲೂ ವಿಷವ ಬೆರೆಸಿಹ ಮನುಜಗೆ ಎಲ್ಲಿದೆ ಮಾನವೀಯತೆ

ನಿರ್ಭೀತಿಯಿಂದ ಮೆರೆಯುತಿರುವರು ಮನುಜ ಮುಖವಿರಿಸಿದ ರಕ್ಕಸರು
ಹಸುಳೆಯನೂ ಬಿಡದೆ ಪೀಡಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ

ಉಸಿರು ಬಿಗಿಹಿಡಿದು ಕಾಯುತ್ತಿವೆ ಹಿರಿಜೀವಗಳು ಅನಾಥ ಮಂದಿರದಲ್ಲಿ
ಸಂಬಂಧಗಳ ಆಳವನು ತಿಳಿಯದಿಹ ಮನುಜಗೆ ಎಲ್ಲಿದೆ ಮಾನವೀಯತೆ

ಮತಗಳ ನಡುವೆ ಧ್ವೇಷವನು ಬಿತ್ತಿ ಸ್ವಾಸ್ಥ್ಯ ಕದಡುತಿರುವ ಮತಿಹೀನರು
ವನ್ಯ ಜೀವಿಗಳ ತೆರದಿ ವರ್ತಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ

ಅಂಧ ಶ್ರದ್ದೆಯಲಿ ಅಸುವ ತೆಗೆದು ವಿಕೃತಿ ಮೆರೆಯುವುದಲ್ಲ "ವಿಜಯ"
ಭ್ರಮೆಯ ನಾಕದ ಸೃಷ್ಟಿಗೆ ಹೊರಟಿಹ ಮನುಜಗೆ ಎಲ್ಲಿದೆ ಮಾನವೀಯತೆ Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍

ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.

ಅಷ್ಟಕ್ಕೂ ನಿಮ್ಮ  ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁

ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊

ವಿಜಯ್

#ವಿಜಯ್_ಗಝಲ್ #ಗಝಲ್ #ಜುಲ್_ಕಾಫಿಯ_ಗಜಲ್ #ಕನ್ನಡ_ಗಜಲ್ # 6 #kvprakashquotes ಜುಲ್ ಕಾಫಿಯ ಗಜಲ್: ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ. https://sangaati.in/?p=27295

read more
ಜುಲ್ ಕಾಫಿಯ ಗಜಲ್
ಮನಸಿನ ಪುಟಗಳಲ್ಲಿ ನೆನಪುಗಳೇ ವೈರಿಯು ನೋವನ್ನು ದಹಿಸಲಿ ಹೇಗೆ
ಈರ್ಷೆಯ ಲೋಕದಿ ಜರಿಕೆಯೇ ತೊಡರು ಸೋಲನ್ನು ಹಿಮ್ಮೆಟ್ಟಿಸಲಿ ಹೇಗೆ 

ಬತ್ತಿ ಹೋಗಿದೆ ಭರವಸೆ ಕಲ್ಪನೆಯಲ್ಲೂ ಕನಸು ಕೈಗೂಡಲೆನ್ನುವ ಕೋರಿಕೆ
ಮನದ ಮಡುವಿನಲ್ಲಿ ಸಿಲುಕಿದೆ ಬುದ್ದಿ ಭಾವನೆಗಳನ್ನು ಚಿಗುರಿಸಲಿ ಹೇಗೆ 

ಸತ್ತ ಭಾವಗಳೊಂದಿಗೆ ಬೇಸತ್ತು ಸಾಗುತ್ತಿದೆ ಬದುಕು ಸಾಕ್ಷಿಗಿದೆ ಉಸಿರಾಟ
ನೋವಿನ ತಳದಲ್ಲಿ ನಗುವೆಂಬ ನಿಧಿ ಹುಡುಕಾಟವನ್ನು ಶುರುವಿಡಲಿ ಹೇಗೆ 

ಮಿಂಚು ಹುಳುಗಳ ಸಂಚು ಹೊಳೆವ ಬೆಳಕಿನ ಹಿಂದೆ ಅಲೆಯಿತು ಮನಸ್ಸು
ಪಾಳು ಬಿದ್ದಿದೆ ಹೃದಯದರಮನೆ ಗತ ವೈಭವವನ್ನು ಮರುಸೃಷ್ಟಿಸಲಿ ಹೇಗೆ 

ಮನೋಲೋಕದ ದಿಗಂತವನ್ನು ದಾಟುತ ಸಾಗುತ್ತಿದೆ  'ವಿಜಯ'ದ ಯಾತ್ರೆ
ಪುಟಿಯಿತು ಮನ ನೋಡುತ ಒಲಿದ ಗೆಲುವನ್ನು ಸಂಭ್ರಮಿಸದಿರಲಿ ಹೇಗೆ #ವಿಜಯ್_ಗಝಲ್ #ಗಝಲ್ #ಜುಲ್_ಕಾಫಿಯ_ಗಜಲ್ #ಕನ್ನಡ_ಗಜಲ್ # 6
#kvprakashquotes

ಜುಲ್ ಕಾಫಿಯ ಗಜಲ್:
ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ.

https://sangaati.in/?p=27295


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile