Nojoto: Largest Storytelling Platform

Best kavanagalu Shayari, Status, Quotes, Stories

Find the Best kavanagalu Shayari, Status, Quotes from top creators only on Nojoto App. Also find trending photos & videos about kannada love story kavanagalu, love failure kannada kavanagalu, kannada love kavanagalu photos, kannada love feeling kavanagalu, love kavanagalu,

  • 10 Followers
  • 24 Stories
    PopularLatestVideo

Rachu

#villagelife#kavanagalu #ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ #kannadaquotes #ಕಾವ್ಯ

read more
mute video

Rachu

#fisherman #kavanagalu #ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ.., #ಕಾವ್ಯ

read more
mute video

Rachu

#achievement #kavanagalu ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ #ಕಾವ್ಯ

read more
mute video

Chiranjeeevi Bs

mute video

Dr Anapu

ಗ್ರಹಣವದು ಮನಸಿಗೆ #inspirationalquotes #Nature thoughts #sadquotes #peaceful #kannadaquotes #lovequotes #kavanagalu

read more
ಗ್ರಹಣವಂತೆ

ಹೇ ಸೂರ್ಯ ಚಂದ್ರರೇ
ಗ್ರಹಣವೇ ನಿಮಗೆ..?
ಇದೆಂಥ ವಿಪರ್ಯಾಸ.!!

ಜಗ ಬೆಳಗುವ ಧ್ರುವ ತಾರೆಯರು ನೀವು
ನಿಮಗೆ ಗ್ರಹಣವೇ..?
ಗ್ರಹಣವದು ಮನುಜನ ಕೆಟ್ಟ ಮನಸ್ಸಿಗೆ.!

ವಿಜ್ಞಾನದ ಕ್ರೀಯೆಗೆ ಗ್ರಹಣವೆನ್ನುವರು
ಹಳಸುವ ವಸ್ತುಗಳಷ್ಟೇ ಬಿಸುಡುವರು
ಚಿನ್ನ ಬೆಳ್ಳಿಯನ್ನ ಬಚ್ಚಿ ಇಡುವರು
ನೀರಿಗೂ ಹುಲ್ಲು ಗರಿಕೆ ಹಾಕುವರು.

ಗ್ರಹಣವೆಂದು ದೇಗುಲ ದೇವರ ಮುಚ್ಚುವರು
ಗ್ರಹಣ ವೀಕ್ಷಿಸಲು ಇವರು ಓಡೋಡಿ ಬರುವರು
ಶೇಖರಣೆಗೊಂಡ ಹೊಳೆ ಕೆರೆ ನೀರನ್ನೇ ತರುವರು
ಪ್ರಕೃತಿಗಿಲ್ಲವೇಕೆ ಗ್ರಹಣ ಕರ್ಮಗಳು..?

ಮನುಜನ ಮನವೋ ಮಂಗನತೆ
ಮೂಢನಂಬಿಕೆಗೆ ಬಲಿಪಶು ಅಷ್ಟೇ
ಅರಿತು ಬಾಳು ವಿಜ್ಞಾನದ ಸೂತ್ರದಂತೆ
ಸಿಗುವುದು ನೆಮ್ಮದಿಯ ಬಾಳ ಸಂತೆ.

ಅನಪು ಗ್ರಹಣವದು ಮನಸಿಗೆ #inspirationalquotes #nature #thoughts #sadquotes #peaceful #kannadaquotes #lovequotes #kavanagalu

Dr Anapu

ಜಾಸ್ತಿ ನಕ್ಕರೆ ಹುಚ್ಚು ಎನ್ನುವರು
ಅತ್ತರೆ ಅಳುಮಂಜಿ ಎನ್ನುವರು
ಸುಮ್ಮನಿದ್ದರೆ ಮುಖದಲ್ಲಿ ನಗುವೇ ಇಲ್ಲ 
ಸತ್ತ ಹೆಣದ ಮುಖದಹಾಗೆ ಎನ್ನುವರು.
ಮಗುವಾಗಿದ್ದರೆ ಎಷ್ಟೋ ಚನ್ನಾಗಿತ್ತು
ಅತ್ತರೆ ಮುದ್ದಿಸುತ್ತಿದ್ದರು
ನಕ್ಕರೆ ಸಂಭ್ರಮಿಸುತ್ತಿದ್ದರು.

ಅನಪು
 #inspirationalquotes #sadquotes #lovequotes #stillloveyou #kannadaquotes #kavanagalu

Dr Anapu

ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu

read more
ಎಲ್ಲಿ ನಿನ್ನವರು

ಎಲ್ಲೋ ನಿನ್ನವರು
ನಿನ್ ಹಿಂದೆ ಇರುವೆ ಎಂದವರು
ನಗುವಲಿ ಕೂಡಿ ನಕ್ಕವರು
ಒಂದೇ ತಟ್ಟೆಯಲಿ ತಿಂದವರು

ಒಟ್ಟಿಗೇ ಕಲಿತವರು
ಕುಣಿದು ಕುಪ್ಪಳಿಸಿದವರು
ಬೇಕಾದಾಗ ಹಣ ಕೇಳಿದವರು
ಕರೆದಲ್ಲಿ ಓಡಿ ಬರುತ್ತಿದ್ದರು

ಎಲ್ಲವರು ನಿನ್ನವರು
ಇಂದಿಲ್ಲಿ ಬರದವರು
ನಿನ ನೋವಿಗೆ ಆಗದವರು
ನಿನ ಅಳುವ ಕಂಡು ಸರಿದವರು

ಇಂದು ನೀನಿಲ್ಲಿ ಉಪವಾಸ
ಮಾಡಿದ್ದು ಅವರ ಸಹವಾಸ
ಎಲ್ಲ ಮಾಡಿದ್ದು ಮೊಸದಾಟ
ಗೊತ್ತಾಯಿತೆ ಕಪಟ ನಾಟಕ

ಇನ್ನಾದರೂ ತಿಳಿದುಕೋ
ಇದ್ದಾಗ ನಿನ್ನವರು
ಖಾಲಿ ಕೈ ಇದ್ದಾಗ ಬರದವರು
ನಿನ್ನ ತಿಥಿ ಊಟಕ್ಕೆ ಬಂದೇ ಬರುವರು.

*ಅನಪು* ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu

Dr Anapu

ತಿಳಿನೀರ ಮೇಲೆ ಕಲ್ಲು ಬಿದ್ದಾಗ ಬರುವ ಅಲೆಯಂತೆ ನಾನು.
ನೋವಾದರೂ ನಲಿದು ಇನ್ನೊಬ್ಬರನ್ನ ಖುಷಿ ಪಡಿಸಬೇಕು.

ಅನಪು Feel alone #inspirationalquotes #lovequotes #sadquotes #funnyquotes #kannadaquotes #kavanagalu

Dr Anapu

ಹಂಗ ಸುಮ್ನೆ ಮನಸ್ಸಿಗೆ ತೋಚಿದ್ದು.. #inspirationalquotes #sadquotes #Family #kannadaquotes #kavanagalu #kavitegalu #sadquotes

read more
ಹಿಂಗೇ ಇರು

ಹೆಂಗಾರ ಇರು ಮನುಜನಾಗಿರು
ಜಗ ಮೆಚ್ಚುವಂತಿರು
ಊರಾಗ ಮಂದಿ
ನಿನ ನೋಡಿ ಹೊಗಳುವಂಗಿರು

ಜಾತಿ ಜಾಡು ನಿಂಗ್ಯಾಕ
ಬಂದೀವಿ ಮೂರು ದಿನದ
ಸಂತಿ ಮಾಡಿ ಹೋಗಾಕ
ಎಲ್ಲ ಭಗವಂತನ ಕೈಯಾಗ

ನೆರದಾರು ನೆರೆಹೊರೆಯವರು
ನೀನವರಿಗೆ ನೆರವಾದರ
ಮರವಾಗಿ ನೆರಳಾಗು
ಮಣ್ಣಾಗುವ ಮುನ್ನ ಮನುಜನಾಗು

ಹರೇದಾಗ ಹೋರಾಡಿ
ಮುಪ್ಪಿನ್ಯಾಗ ಮುದುರಿ ಕುಂತ
ಮಕ್ಕಳವು ಒಳ್ಳೆ ಬುದ್ದಿ ಕಲಿಸಿ
ಹೊರಡೋಣ ಮನದುಂಬಿ ಹರಸಿ

ಮುತ್ತುತ್ತಾರಾ ಮಂದಿ ಖಜಾನಿ ಇದ್ದಾಗ
ನಿನ ದೂರುತಾರ ಬರಿಗೈಲಿ ನಿಂತಾಗ
ನಿಜ ಬಂಧು ನೊಣಗಳು ನೋಡ
ಇದ್ದಾಗಲೂ ಸತ್ತಾಗಲೂ ಮುತ್ತಕೋಡುತಾವ

ಅವನಿರಲಿ ಇವನಿರಲಿ
ಗಂಟು ಕಟ್ಟಲೇಬೇಕು ಒಂದು ದಿನ
ಚಟ್ಟ ಹತ್ತಿ ಚಿತೆಯೇರಿ
ಹೊಂಡು ನೀ ನಿನ್ನ ಮನೀಗಿಗ.

*ಅನಪು* ಹಂಗ ಸುಮ್ನೆ ಮನಸ್ಸಿಗೆ ತೋಚಿದ್ದು..
#inspirationalquotes #sadquotes #family #kannadaquotes #kavanagalu #kavitegalu #sadquotes

Dr Anapu

ಮಲೆನಾಡು ಶಿರಸಿಯ ಬಗ್ಗೆ #sirsidiaries #malenadu #kannadaquotes #kavanagalu #lovequotes #inspirationalquotes

read more
ನಮ್ಮ ಶಿರಸಿ

ಬನ್ನಿರೋ ನೋಡಬನ್ನಿರಿ ಶಿರಸಿಯ
ಮಲೆನಾಡ ಹೆಬ್ಬಾಗಿಲ ತೋರಣ
ಪಡೆಯಿರೋ ತಾಯಿ ಮಾರಿಕಾಂಬೆಯ ದರುಶನ (ಪ)

ಮುಗಿಲ ಚುಂಬಿಸೋ ಕಾನನ
ಜುಳು ಜಲಧಾರೆಯ ಸಿಂಚನ
ಪಾವನವಾಯಿತು ಜೀವನ
ಶಿರಸಿಯೇ ನನ್ನ ಬೃಂದಾವನ(೧)

ಕಲೆಗಳ ತವರು ಸಂಸ್ಕೃತಿ ಸೆರಗು
ಹೃದಯವಂತರ ನೆಲೆವೀಡು
ಸಹಸ್ರ ಲಿಂಗನ ನೆಲೆ ನೋಡು
ಯಾಣದ ಚಾರಣ ನೀ ಮಾಡು(೨)

ಯಕ್ಷಗಾನ ಭರತನಾಟ್ಯ ಸಂಗೀತದ ಈ ನಾಡು
ಕವಿ ದಿ. ಶ್ರೀ ರಮೇಶ ಹೆಗಡೆಯ ಪುಣ್ಯದ ನಾಡು
ಬನವಾಸಿ ಮಧುಕೇಶ್ವರನ ಕದಂಬ ನಾಡು
ಇದು ನಮ್ಮ ಹೆಮ್ಮೆಯ ಶಿರಸಿ ನೋಡು (೩)

ಸೋಂದಾ ಮಠದ ಸಿರಿ ನೋಡು
ಎಲ್ಲರನ್ನೂ ಪ್ರೀತಿಸುವ ಪುಣ್ಯ ನಾಡು
ಜಲಪಾತಗಳ ಸ್ವರ್ಗ ಕಾಣು
ಇದು ನಮ್ಮ ಉತ್ತರ ಕನ್ನಡ ನೋಡು (೪)

ತಾಯಿ ಮಾರಿಕಾಂಬೆಯ ತಿಲಕದಂತೆ ಹೊಳೆವ
ನಮ್ಮ  ಈ ಶಿರಸಿ ಕಾಣು.
ಕೈ ಮುಗಿದು ನೀ ಪಾದಾರ್ಪಣೆ ಮಾಡು

 ಮಲೆನಾಡು ಶಿರಸಿಯ ಬಗ್ಗೆ
#sirsidiaries #malenadu #kannadaquotes #kavanagalu #lovequotes #inspirationalquotes
loader
Home
Explore
Events
Notification
Profile