Nojoto: Largest Storytelling Platform

Best ನವರಾತ್ರಿ Shayari, Status, Quotes, Stories

Find the Best ನವರಾತ್ರಿ Shayari, Status, Quotes from top creators only on Nojoto App. Also find trending photos & videos aboutನವರಾತ್ರಿ ಮಹತ್ವ, ನವರಾತ್ರಿ ಮೂರನೇ ದಿನ, ನವರಾತ್ರಿ, ನವರಾತ್ರಿ ವಿಶೇಷ, ನವರಾತ್ರಿ ಐದನೇ ದಿನ,

  • 6 Followers
  • 9 Stories

Lakumikanda Mukunda

#ಲಕುಮಿಕಂದ #lakumikanda #ನವರಾತ್ರಿ

read more
"ಧೈವ ಸಾನಿದ್ಯದಲಿ"

ದೂರದಿ ಢಮರುಗದ ಸದ್ದು ಕೇಳಿ ಬರುತ್ತಿತ್ತು..
ಮನಸ್ಸು ಅದನ್ನು ಮತ್ತೆ ಕೇಳಲು ಕಾತರಿಸುತ್ತಿತ್ತು
ನಿಧಾನವಾಗಿದ್ದ ನಡಿಗೆ ತುಸು ಬಿರುಸಾಯಿತು
ಸನಿಹ ಹೋದಂತೆಲ್ಲ  ಢಮರುಗದ ಮಾರ್ದನಿ 

ಕಂಡೆ ಪರಶಿವ ಸಂತಸದಿಂದ ಕುಣಿಯುತ್ತಿದ್ದ..
ನಾ ಅವನ ಕಂಡು ಬೆರಗಾಗಿಯೇ ಕೇಳಿದೆ 
ನವರಾತ್ರಿಯ ಅವಳ ಸಡಗರದಲ್ಲಿ ನಿನ್ನ ಕುಣಿತವೇ.?
ಕ್ಷಣದಲ್ಲಿ,ಶಕ್ತಿ ನಾನಿಮಿತ್ತ ಮಾತ್ರವೆಂದು ನಕ್ಕಳು.
ಹಾಂ ಇಗ ನೆನಪಾಗುತ್ತಿದೆ ಅರ್ಧ ನಾರೀಶ್ವರ ತತ್ವ..
ಅವನಲ್ಲಿ ಅವಳು, ಅವಳಲ್ಲಿಯೂ ಅವನು 
ಭಾವಪರವಶನಾಗಿ ಕೈಮುಗಿದು ನಿಂತುಕೊಂಡೆ
ಡಮರುಗದ ಸದ್ದಿಗೆ ಒಲವ ಹೆಜ್ಜೆ ಹಾಕುತ್ತಿದ್ದವರು

ಅದ್ಯಾವಾಗ ಕಣ್ಣಿಂದ ಕಣ್ಮರೆಯಾದರೋ ತಿಳಿಯಲಿಲ್ಲ
ಧನ್ಯಭಾವದಿ ಹರನ ಸ್ಮರಿಸಿ ಶಕ್ತಿಗೊಂದಿಸುತ್ತಿದ್ದೆ,
ಶಿವೆ ಶಿವನ ಜನ್ಮಾಂತರದೊಲವ ಕತೆಯೊಂದು
ಮಸ್ತಕದಲ್ಲಿ ನೆನಪಡರಿ ಒಲವಮಳೆ ಸುರಿಯಿತು.

✒️-ಲಕುಮಿಕಂದ ಮುಕುಂದ

©Lakumikanda Mukunda #ಲಕುಮಿಕಂದ #lakumikanda #ನವರಾತ್ರಿ

Lakumikanda Mukunda

#ಲಕುಮಿಕಂದ #ನವರಾತ್ರಿ #lakumikanda

read more

Follow us on social media:

For Best Experience, Download Nojoto

Home
Explore
Events
Notification
Profile