Nojoto: Largest Storytelling Platform

ನರನ ಪಾಪ‌‌.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನ

ನರನ ಪಾಪ‌‌..

ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು.
ಅದು ಅವನದ್ದೆ ಪಾಪ,ಪಾಪಿ ಸಂತಾಪಿ.!
ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ.
ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.!

ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು.
ಅಬ್ಬಬ್ಬ! ಶ್ವಾಸಾಂಸುಗೊಳೆಯಲ್ ಅಳ್ಕಿ ಓಡಿ ಬಂದಿರುವರು.
ಅವರವರ ಕರ್ಮಾನುಸಾರ ಅವರೇ ಫಲವನನುಭವಿಸಿ
ದಿಕ್ಕೆಡಿಗಳೆಲ್ಲ ದಿಕ್ಕು ಪಾಲಾದರು,ಅದು ಅವಳದ್ದೇ ಸೊಲ್ಲು.!

ಜ್ಞಾನಧಾಹಿಗಳಿಗೂ ಮಾಯಾಜಾಲದ ಕರಸಂಜಾತಳದೆ ಭಯ.
ಮೌನ ತಳೆದ ದೇವರೂ ಸಹ ನೀಡುವನೇ ಮೌನದಿ ಅಭಯ.
ಕಾಯವಳಿಯುವ ಮುನ್ನ, ಬದುಕಿನಾಯ ತಿಳಿದನೇ ಅವನು.
ಬಿಡಳು ಅವನ ಹೆಮ್ಮಾರಿ ಹೆಣ್ಣು. ನರನೇ ಹರನೇ ಅರಿ ನಿನ್ನ ನೀನು.!

✒️-ಲಕುಮಿಕಂದ ಮುಕುಂದ #ನರನ ಪಾಪ #ಕೆರೋನಾ